ETV Bharat / state

ರೋಗಿಗಳು ಸಾವಿಗೀಡಾದರೆ ನಾವೆಲ್ಲ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ: ಶಾಸಕ ಎನ್. ಮಹೇಶ್ - ಚಾಮರಾಜನಗರ ಆಕ್ಸಿಜನ್ ದುರಂತ

ಚಾಮರಾಜನಗರದಲ್ಲಿ 24 ಕೋವಿಡ್ ರೋಗಿಗಳು ಸಾವು ಪ್ರಕರಣದ ಬಗ್ಗೆ ಶಾಸಕ ಎನ್​. ಮಹೇಶ್ ಪ್ರತಿಕ್ರಿಯಿಸಿದ್ದು, ಜಿಲ್ಲೆಗೆ ಸರಿಯಾದ ರೀತಿಯಲ್ಲಿ ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ ಎಂಬುವುದು ವಾಸ್ತವ ಎಂದಿದ್ದಾರೆ.

MLA N Mahesh reaction about Covid patients death
ಶಾಸಕ ಎನ್. ಮಹೇಶ್
author img

By

Published : May 3, 2021, 1:52 PM IST

ಕೊಳ್ಳೇಗಾಲ: ಜಿಲ್ಲೆಗೆ ಅವಶ್ಯಕತೆ ಇರುವಷ್ಟು ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ ಎಂಬುವುದು ವಾಸ್ತವ ಎಂದು ಶಾಸಕ ಎನ್​. ಮಹೇಶ್ ಹೇಳಿದ್ದಾರೆ.

ಕೋವಿಡ್​ ಆಸ್ಪತ್ರೆಯಲ್ಲಿ 24 ಸೋಂಕಿತರ ಸಾವಿನ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ, 18 ಮಂದಿ ರಕ್ತದೊತ್ತಡ, ಸಕ್ಕರೆ ಖಾಯಿಲೆ ಹಾಗೂ ಶ್ವಾಸಕೋಶದ ಖಾಯಿಲೆಗಳಿಂದ ಬಳಲುತ್ತಿದ್ದರು. ಈ ಪೈಕಿ 17 ಜನ ವೆಂಟಿಲೇಟರ್​​ನಲ್ಲಿದ್ದರು. ಆಕ್ಸಿಜನ್ ಕೊರೆತೆಯಿಂದ ಯಾರು ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ. ನನಗನಿಸುತ್ತೆ ಜಿಲ್ಲಾಧಿಕಾರಿ ಕೇಳಿದಷ್ಟು ಆಕ್ಸಿಜನ್ ಸಿಕ್ಕಿಲ್ಲ ಎಂದರು.

ಶಾಸಕ ಎನ್. ಮಹೇಶ್

ಆಕ್ಸಿಜನ್ ಸರಬರಾಜನ್ನು ಪ್ರಾದೇಶಿಕ ಆಯುಕ್ತರಿಗೆ ವಹಿಸಿ: ಸರ್ಕಾರ ಮೈಸೂರು ಜಿಲ್ಲಾಧಿಕಾರಿ ಮೂಲಕ ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಮಾಡಿಸುತ್ತಿದೆ. ಮೈಸೂರಿನಲ್ಲಿ ಕೂಡ ಹೆಚ್ಚು ಕೋವಿಡ್ ಪ್ರಕರಣ ಕಂಡು ಬರುತ್ತಿರುವ ಹಿನ್ನೆಲೆ, ಮೈಸೂರು ಜಿಲ್ಲಾಧಿಕಾರಿ ಅಲ್ಲಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಜವಾಬ್ದಾರಿಯನ್ನು ಮೈಸೂರು ಡಿಸಿಗೆ ವಹಿಸಿರುವುದು ಸರಿಯಲ್ಲ. ಆದ್ದರಿಂದ, ನಾನು ಉಸ್ತುವಾರಿ ಸಚಿವರ ಜೊತೆ ಮಾತಾನಾಡಿದ್ದೇನೆ. ಆಕ್ಸಿಜನ್ ಸರಬರಾಜನ್ನು ಪ್ರಾದೇಶಿಕ ಆಯುಕ್ತರಿಗೆ ವಹಿಸಿ ಎಂದು ತಿಳಿಸಿದ್ದೇನೆ ಎಂದು ಎನ್. ಮಹೇಶ್ ತಿಳಿಸಿದರು.

ಇದನ್ನೂ ಓದಿ: ಚಾಮರಾಜನಗರದಲ್ಲಿ ಭೀಕರ ದುರಂತ: 24 ಗಂಟೆ..24 ಸಾವು, ಆಕ್ಸಿಜನ್‌ ಸಿಗದೆ 12 ಮಂದಿ ಕೊನೆಯುಸಿರು

ಈಗಾಲದರೂ ಎಚ್ಚೆತ್ತು ಸಕಾಲದಲ್ಲಿ ಬೆಡ್, ಔಷಧ ಹಾಗೂ ಆಕ್ಸಿಜನ್ ಸಿಗುವಂತೆ ಕ್ರಮ ವಹಿಸಬೇಕು. ಇದು ಮಾಡದೆ ಹೋದರೆ ಸಾವಿನ‌ ಪ್ರಮಾಣ ಹೆಚ್ಚುತ್ತದೆ. ನಾವೆಲ್ಲರೂ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.