ಕೊಳ್ಳೇಗಾಲ : ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಎದುರಾಗದಂತೆ ಕ್ರಮವಹಿಸಲು ಕೊಳ್ಳೇಗಾಲ, ಯಳಂದೂರು ಹಾಗೂ ಸಂತೆಮರಳ್ಳಿ ಬ್ಲಾಕ್‌ಗಳ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಶಾಸಕ ಎನ್.ಮಹೇಶ್ ಮಹತ್ವದ ಸಭೆ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮೂರು ಬ್ಲಾಕ್‌ನ ವಿವಿಧ ಇಲಾಖಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಯಾವ ಪರಿಸ್ಥಿತಿಯಲ್ಲೂ ಕೋವಿಡ್ ತುರ್ತು ಪರಿಸ್ಥಿತಿ ಉಲ್ಬಣಿಸದಂತೆ ಹಾಗೂ ಎಲ್ಲೂ ಸಹಾ ಅನಾಹುತವಾಗದಂತೆ ತಡೆಗಟ್ಟುವ ಮುಂಜಾಗ್ರತೆ ಕ್ರಮಗಳ ಕುರಿತು ಹಲವು ಸೂಚನೆಗಳನ್ನು ನೀಡಿದರು.
ಎರಡು ದಿದ ಹಿಂದೆಯಷ್ಟೇ ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ದುರ್ಘಟನೆ ಗಂಭೀರವಾಗಿ ಪರಿಗಣಿಸಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಕೊರೊನಾ ಹೆಚ್ಚಾಗದಂತೆ ಸಾವು-ನೋವುಗಳಾಗದಂತೆ ತಡೆಗಟ್ಟುವ ನಿಲ್ಲಿನಲ್ಲಿ ಅಧಿಕಾರಿಗಳು ಮಾಡಬೇಕಾದ ಕೆಲಸಗಳು ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವ ಕುರಿತು 2 ಗಂಟೆ ಕಾಲ ಚರ್ಚಿಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎನ್.ಮಹೇಶ್, ಕ್ಷೇತ್ರ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮೇತ ಬೆಡ್‌ಗಳಿದ್ದು ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳಿಕೆಯಾದರೂ ಮುಂದಿನ 2 ದಿನಕ್ಕೆ ಸಾಕಾಗುವಷ್ಟು ಆಕ್ಸಿಜನ್ ಸಿಲಿಂಡರ್ ದಾಸ್ತಾನಿದೆ.
ಕೊಳ್ಳೇಗಾಲ, ಸಂತೆಮರಳ್ಳಿ ಹಾಗೂ ಯಳಂದೂರು ಈ ಮೂರು ಬ್ಲಾಕ್‌ಗಳ ಆರೋಗ್ಯಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಹ ಆಕ್ಸಿಜನ್ ಸೌಲಭ್ಯಗಳ ಖಾಲಿಯಾಗುವಷ್ಟರ ಮುಂದಾಗಿ ಆಕ್ಸಿಜನ್ ಪೂರೈಕೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ.
ಕೊಳ್ಳೇಗಾಲ ಟೌನ್‌ನಲ್ಲಿ 445 ಪಾಸಿಟಿವ್ ಪ್ರಕರಣವಿದ್ದರೆ ಗ್ರಾಮಾಂತರ ಪ್ರದೇಶದಲ್ಲಿ 457 ಕೇಸ್ ಇದೆ. ಪಟ್ಟಣಕ್ಕಿಂತ ಗ್ರಾಮಗಳಲಿಯೇ ಹೆಚ್ಚು ಕೊರೊನಾ ಪ್ರಕರಣ ದಾಖಲಾಗುತ್ತಿರುವುದು ಗಮನಿಸಬೇಕಾದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಕೊರೊನಾ ಆರ್ಭಟಕ್ಕೆ ನಿಯಂತ್ರಣ ಹಾಕಲು ಅಲ್ಲಲ್ಲಿ ಕಂಟೇನ್ಮೆಂಟ್ ಝೋನ್ ಆಗಬೇಕಿದೆ.
ಇನ್ನೂ ಹಳ್ಳಿಗಳಲ್ಲಿ ಹೋಂ ಐಸೋಲೇಷನ್‌ನಲ್ಲಿರುವ ರೋಗಿಗಳನ್ನ ಕೊರೋನಾ ಕೇರ್ ಸೆಂಟರ್‌ಗೆ ದಾಖಲು ಮಾಡಿಸಲು ಅಲ್ಲಿನ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ತಿಮ್ಮರಾಜೀಪುರದ 125 ಸಾಮರ್ಥ್ಯವುಳ್ಳ ಕೋವಿಡ್ ಕೇರ್ ಸೆಂಟರ್ ಮಾ.4 ರಿಂದಲೇ ಪ್ರಾರಂಭಿಸಲಾಗಿದೆ. ಯಳಂದೂರಿನ ವಡ್ಡಗೆರೆಯಲ್ಲಿ ಹಾಗೂ ಸಂತೇಮರಳ್ಳಿಯಲ್ಲಿ ಏಕಲವ್ಯದಲ್ಲಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿದ್ದು ಹೋಂ ಐಸೋಲೇಷನ್‌ನಲ್ಲಿರುವ ರೋಗಿಗಳನ್ನು ದಾಖಲಿಸಲು ಸೂಚಿಸಿದ್ದೇನೆ ಎಂದರು.
ಜಿಲ್ಲೆಯಲ್ಲಿ ಕೋವಾಕ್ಯಿನ್ 1500, ಕೋವಿಶಿಲ್ಡ್ 1000 ಸಾವಿರ ಮಾತ್ರ ದಾಸ್ತಾನಿದೆ. ಇದರಲ್ಲಿ ಕ್ಷೇತ್ರಕ್ಕೆ 300 ವ್ಯಾಕ್ಸಿನ್ ನೀಡುವ ಗುರಿ ಇದೆ. ಆದರೆ, ಇದು ಸಾಲದು. ಈ ಬಗ್ಗೆ ನಾಳೆ ಉಸ್ತುವಾರಿ ಸಚಿವರ ಜೊತೆ ಮಾತನಾಡಿ ಹೆಚ್ಚಿನ ವ್ಯಾಕ್ಸಿನೇಷನ್ ಪೂರೈಕೆಗೆ ಬೇಡಿಕೆ ಇಡುತ್ತೇನೆ ಎಂದರು.
ಎಮರ್ಜೆನ್ಸಿ ಹೆಲ್ಪ್ ಡೆಸ್ಕ್ ಮಾಡಿ : ಕ್ಷೇತ್ರದ ಮೂರು ಬ್ಲಾಕ್‌ನ ಆಸ್ಪತ್ರೆಗಳಲ್ಲೂ ಎಮರ್ಜೆನ್ಸಿ ಹೆಲ್ಪ್ ಡೆಸ್ಕ್ ಮಾಡಿ ಅಲ್ಲಿಗೆ ಬರುವ ಕೋವಿಡ್ ರೋಗಿಗಳಿಗೆ ಆತ್ಮಸ್ಥೈರ್ಯ ಹಾಗೂ ಆರೋಗ್ಯ ಭರವಸೆ ತುಂಬುವ ಕೆಲಸ ಮಾಡಲು ತಿಳಿಸಿದ್ದೇನೆ. ಅದರಂತೆ ಇನ್ನೂ ಎರಡು ದಿನಗಳಲ್ಲಿ ಎಮರ್ಜೆನ್ಸಿ ಹೆಲ್ಪ್ ಡೆಸ್ಕ್ ಕೆಲಸ ಮಾಡಲಿದೆ ಎಂದರು.