ಚಾಮರಾಜನಗರ: ಖಾಸಗಿ ಫೈನಾನ್ಸ್ಗಳಲ್ಲಿ ತೆಗೆದುಕೊಂಡಿರುವ ಸಾಲವನ್ನು ಲಾಕ್ಡೌನ್ ಅವಧಿ ಮುಗಿಯುವವರೆಗೂ ಪಾವತಿಸಬೇಡಿ ಎಂದು ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹೇಳಿದರು.
ಶಾಸಕರು ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಲಾಕ್ಡೌನ್ ಸಂದರ್ಭದಲ್ಲಿ ದುಡಿಯಲು ನಮಗೆ ಕೆಲಸವಿಲ್ಲ. ಇಂತಹ ಸಂದರ್ಭದಲ್ಲಿ ಸಾಲ ಪಾವತಿಸುವಂತೆ ಖಾಸಗಿ ಫೈನಾನ್ಸ್ನವರು ನಮಗೆ ನಿತ್ಯವೂ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಕೊರೊನಾದಿಂದಾಗಿ ಜನರು ತತ್ತರಿಸಿದ್ದಾರೆ. ಜಿಲ್ಲಾಧಿಕಾರಿ ಹತ್ತು ದಿನಗಳ ಹಿಂದೆ ಯಾವ ಖಾಸಗಿ ಫೈನಾನ್ಸ್ಗಳು ಮೂರು ತಿಂಗಳವರೆಗೆ ಸಾಲ ವಸೂಲಿ ಮಾಡದಂತೆ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಸಾಲ ವಸೂಲಾತಿಗಾಗಿ ಬರುವ ಖಾಸಗಿ ಫೈನಾನ್ಸ್ ವ್ಯಕ್ತಿಗಳಿಗೆ ಜಿಲ್ಲಾಧಿಕಾರಿ ಆದೇಶದ ಬಗ್ಗೆ ತಿಳಿಸಿ. ಮೂರು ತಿಂಗಳವರೆಗೂ ಸಾಲ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿ ಎಂದು ಧೈರ್ಯ ತುಂಬಿದರು.
ಇದೇ ವೇಳೆ ಸಾಲದ ವಸೂಲಿ ನೆಪದಲ್ಲಿ ಜನರಿಗೆ ಕಿರುಕುಳ ನೀಡುತ್ತಿರುವ ಫೈನಾನ್ಸ್ ಸಂಸ್ಥೆಗಳಿಗೆ ಎಚ್ಚರಿಕೆ ನೀಡುವಂತೆ ತಹಶೀಲ್ದಾರ್ ರವಿಶಂಕರ್ ಹಾಗೂ ಪಿಎಸ್ವೈ ರಾಜೇಂದ್ರ ಅವರಿಗೆ ಸೂಚಿಸಿದರು.
ಓದಿ: ಬೆಂಗಳೂರು ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳ