ETV Bharat / state

ಬಂದ್​ಗೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಉತ್ತಮ ಸ್ಪಂದನೆ - ನೂತನ ಭೂ ಮಸೂದೆ ವಾಪಾಸ್​ಗೆ ಆಗ್ರಹಿಸಿ ಕರೆ ನೀಡಿದ್ದ ಭಾರತ್ ಬಂದ್​

ರೈತ ಹೋರಾಟಗಾರರು ಜಿಲ್ಲಾ ಕೇಂದ್ರಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ಚಾಮರಾಜನಗರದ ತಾಲೂಕು ಕೇಂದ್ರಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು..

bundh in chamarajanagar
ಚಾಮರಾಜನಗರ
author img

By

Published : Dec 8, 2020, 8:36 PM IST

ಚಾಮರಾಜನಗರ : ನೂತನ ಭೂ ಮಸೂದೆ ವಾಪಸ್​ಗೆ ಆಗ್ರಹಿಸಿ ಕರೆ ನೀಡಿದ್ದ ಭಾರತ್ ಬಂದ್​ಗೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾದ್ರೆ, ತಾಲೂಕು ಕೇಂದ್ರಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್​ಗೆ ಜಿಲ್ಲಾ ಕೇಂದ್ರದಲ್ಲಿ ಉತ್ತಮ ಸ್ಪಂದನೆ

ಬೆಳಗ್ಗೆ 7.40 ರಿಂದಲೇ ಆರಂಭವಾದ ವಿವಿಧ ಸಂಘಟನೆಗಳ ಪ್ರತಿಭಟನೆ ಬಿಸಿಲೇರುತ್ತಿದ್ದಂತೆ ತೀವ್ರತೆ ಹೆಚ್ಚಾಯಿತು‌. ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಮುಂಭಾಗವಷ್ಟೇ ಹೋರಾಟಗಾರರು ಮೊಕ್ಕಾಂ ಹೂಡಿದ್ದರಿಂದ ನಗರದ ಇತರೆಡೆ ವಾಹನ ಸಂಚಾರ ಸಾಮಾನ್ಯವಾಗಿತ್ತು‌. ಆದರೆ, ಬಹುತೇಕ ಎಲ್ಲಾ ಅಂಗಡಿ-ಮುಂಗಟ್ಟುಗಳು, ಹೋಟೆಲ್​ಗಳು ಸಂಜೆವರೆಗೆ ಮುಚ್ಚಲಾಗಿತ್ತು.

ಇದನ್ನೂ ಓದಿ: ಬಂದ್ ಎಫೆಕ್ಟ್: ಚಾಮರಾಜನಗರ ಕೆಎಸ್ಆರ್​​ಟಿಸಿಗೆ 20 ಲಕ್ಷ ರೂ. ನಷ್ಟ

ಟೈರ್‌ಗಳಿಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆ, ಕೆಎಸ್ಆರ್​ಟಿಸಿ ನಿಲ್ದಾಣದಲ್ಲೇ ಅಡುಗೆ, ಪಾದಯಾತ್ರೆ ಮೂಲಕ ಹೋರಾಟಗಾರರು ಗಮನ ಸೆಳೆದರು‌. ಉಳಿದಂತೆ, ಇಂದಿನ ಪ್ರತಿಭಟನೆಗೆ ಕಾಂಗ್ರೆಸ್, ಬಿಎಸ್ಪಿ, ಕನ್ನಡಪರ ಸಂಘಟನೆಗಳು, ಎಸ್​ಡಿಪಿಐ, ಪಿಎಫ್ಐ ಬೆಂಬಲಿಸಿದ್ದವು.

ರೈತನಾಯಕಿ ಚುಕ್ಕಿ ನಂಜುಂಡಸ್ವಾಮಿ, ಮಾಜಿ ಸಂಸದ ಆರ್.ಧ್ರುವನಾರಾಯಣ, ರೈತ ಮುಖಂಡ ಹೊನ್ನೂರು ಪ್ರಕಾಶ್, ಪ್ರಗತಿಪರರಾದ ವೆಂಕಟರಾಜು, ಸಿ ಎಂ ಕೃಷ್ಣಮೂರ್ತಿ ಇನ್ನಿತರರು ಭಾಗವಹಿಸಿದ್ದರು.

ತಾಲೂಕು ಕೇಂದ್ರಗಳಲ್ಲಿ ನೀರಸ : ರೈತ ಹೋರಾಟಗಾರರು ಜಿಲ್ಲಾ ಕೇಂದ್ರಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ತಾಲೂಕು ಕೇಂದ್ರಗಳಾದ ಹನೂರು, ಗುಂಡ್ಲುಪೇಟೆ, ಯಳಂದೂರು ಹಾಗೂ ಕೊಳ್ಳೇಗಾಲದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.