ಚಾಮರಾಜನಗರ: ಅಪ್ರಾಪ್ತ ವಯಸ್ಸಿನ ಬಾಲಕಿವೋರ್ವಳು ಮಗುವಿಗೆ ಜನ್ಮ ನೀಡಿರುವ ಘಟನೆ ತಾಲೂಕಿನ ಹೊಂಗಲವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೊಂಗಲವಾಡಿ ಗ್ರಾಮದ 17 ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಂಗಳವಾರ ಸಂಜೆ ಹೊಟ್ಟೆನೋವೆಂದು ಒದ್ದಾಡುತ್ತಿದ್ದ ಈಕೆಗೆ ಮನೆಯಲ್ಲೇ ಹೆರಿಗೆಯಾಗಿದೆ. ನಂತರ ವಿಚಾರಿಸಿದಾಗ ತಾನು ಅತ್ಯಾಚಾರಕ್ಕೊಳಗಾಗಿರುವ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ ಎನ್ನಲಾಗ್ತಿದೆ.
ಉತ್ತುವಳ್ಳಿ ಗ್ರಾಮದ ಸಿದ್ದರಾಜು (25) ಎಂಬಾತ ಜಮೀನಿನ ಕೆಲಸಕ್ಕೆ ತೆರಳಿದಾಗ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರ ಮುಂದೆ ವಿವರಿಸಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಓದಿ: ದೆಹಲಿ ಗಡಿಗಳಿಂದ ಪ್ರತಿಭಟನಾನಿರತ ರೈತರ ತೆರವು ವಿಚಾರ: ಇಂದು ಅರ್ಜಿಗಳ ವಿಚಾರಣೆ
ಮಹಿಳಾ ಠಾಣೆ ಪಿಐ ಪುಟ್ಟಸ್ವಾಮಿ ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಕೆಲ ಗ್ರಾಮಸ್ಥರ ಎದುರು ತಾನು ಅಂತವನಲ್ಲ, ಆ ಮಗುವಿಗೆ ಕಾರಣ ತಾನಲ್ಲ ಅಂತ ಹೇಳಿರುವ ಆರೋಪಿ ಯುವಕ ಪರಾರಿಯಾಗಿದ್ದಾನೆ.