ETV Bharat / state

ಸಿಎಂ ಅನುಮತಿ ಕೊಟ್ಟರಷ್ಟೇ ಮಾದಪ್ಪನ ಜಾತ್ರೆ : 5 ದಿನದೊಳಗೆ ಶಿವರಾತ್ರಿ ರಥೋತ್ಸವದ ತೀರ್ಮಾನ

author img

By

Published : Feb 11, 2022, 7:44 PM IST

ಆರೋಗ್ಯ ಇಲಾಖೆ ತಾಂತ್ರಿಕ ತಂಡ ಮತ್ತು ತಜ್ಞರ ತಂಡದೊಂದಿಗೆ ಚರ್ಚಿಸಿ ಬುಧವಾರ ಸಿಎಂ ಜೊತೆ ಈ ಜಾತ್ರೆ ಸಂಬಂಧ ಸಭೆ ನಡೆಸಲಾಗುವುದು, ಅವರು ಅನುಮತಿ- ಮಾರ್ಗದರ್ಶನದಂತೆ ಪ್ರಸಿದ್ಧ ಜಾತ್ರಾ ಮಹೋತ್ಸವದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು..

minister-v-sommanna
ಸಚಿವ ವಿ. ಸೋಮಣ್ಣ

ಚಾಮರಾಜನಗರ : ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಎರಡು ವರ್ಷದ ಬಳಿಕ ನಡೆಯಬೇಕಿರುವ ಶಿವರಾತ್ರಿ ಜಾತ್ರಾ ಮಹೋತ್ಸವ ಸಂಬಂಧ ಪ್ರಾಧಿಕಾರದ ಅಧಿಕಾರಿಗಳು, ಜಿಲ್ಲಾಧಿಕಾರಿಗಳೊಟ್ಟಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಪೂರ್ವಭಾವಿ ಸಭೆ ನಡೆಸಿದರು.

ಮಾದಪ್ಪನ ಜಾತ್ರೆಯ ಕುರಿತಂತೆ ಸಚಿವ ವಿ. ಸೋಮಣ್ಣ ಮಾತನಾಡಿರುವುದು..

ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಆರೋಗ್ಯ ಇಲಾಖೆ ತಾಂತ್ರಿಕ ತಂಡ ಮತ್ತು ತಜ್ಞರ ತಂಡದೊಂದಿಗೆ ಚರ್ಚಿಸಿ ಬುಧವಾರ ಸಿಎಂ ಜೊತೆ ಈ ಜಾತ್ರೆ ಸಂಬಂಧ ಸಭೆ ನಡೆಸಲಾಗುವುದು, ಅವರು ಅನುಮತಿ-ಮಾರ್ಗದರ್ಶನದಂತೆ ಪ್ರಸಿದ್ಧ ಜಾತ್ರಾ ಮಹೋತ್ಸವದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಜೆಟ್ ನಿರೀಕ್ಷೆ ಕುರಿತು ಪ್ರತಿಕ್ರಿಯಿಸಿ, ಚಾಮರಾಜನಗರ ರಾಜ್ಯದ ಅವಿಭಾಜ್ಯ ಅಂಗ, ಯಾವುದಕ್ಕೆಲ್ಲಾ ಆದ್ಯತೆ ಕೊಡಬೇಕು, ಇತಿ-ಮಿತಿ ಒಳಗೆ ಉತ್ತಮ ಬಜೆಟ್ ಮಂಡನೆಯಾಗಲಿದೆ ಎಂದರು.

ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಅದನ್ನೇ ಹೇಳಬೇಕು. ಅವರು ಸಿಎಂ ಆಗಿದ್ದಾಗಲೂ ಸಾಲ ಇತ್ತು, ಬಜೆಟ್ ಮಂಡನೆಯಾಗಿತ್ತು. ಆದ್ದರಿಂದ, ಅವರ ಕೆಲಸ ಅವರು ಮಾಡುತ್ತಾರೆ, ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ತಿರುಗೇಟು ಕೊಟ್ಟರು.

4 ದಿನಗಳ ಜಾತ್ರೆ : ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಮುಖವಾಗಿದ್ದು, ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳು ಸರಳ-ಸ್ಥಳೀಯವಾಗಷ್ಟೇ ನಡೆದಿದೆ. ಇದೇ ತಿಂಗಳು 28 ರಿಂದ ಮಾರ್ಚ್ 3ರವರೆಗೆ ಜಾತ್ರೆ ನಡೆಯಬೇಕಿದ್ದು, 3 ರಂದು ಮಹಾರಥೋತ್ಸವ ಇರಲಿದೆ.

ಓದಿ: ನನ್ನ ದೆಹಲಿ ಪ್ರವಾಸಕ್ಕೆ ಯಾವುದೇ ರಾಜಕೀಯ ಬಣ್ಣ ಬೇಡ : ಮಾಜಿ ಸಿಎಂ ಜಗದೀಶ್ ಶೆಟ್ಟರ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.