ETV Bharat / state

ಚಾಮರಾಜನಗರ ಉಸ್ತುವಾರಿ ಆಗ್ತೀರಾ ಎಂದದ್ದಕ್ಕೆ ಕೈಮುಗಿದು ಒಲ್ಲೆ ಎಂದ ಸಚಿವ ವಿ ಸೋಮಣ್ಣ

ಗುಡಿಸಲು ಮುಕ್ತ ಕರ್ನಾಟಕದ ಗುರಿ ಹೊಂದಿದ್ದು, ರಾಜ್ಯದಲ್ಲಿ ಅರ್ಹ ಬಡವರಿಗೆ ವಸತಿ ನೀಡಲಾಗುವುದು. ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಫಲಾನುಭವಿಗಳಿಗೆ ವಸತಿ ಕೊಡಲಾಗುವುದು..

ಉಸ್ತುವಾರಿ ಆಗ್ತೀರಾ ಎಂದದ್ದಕ್ಕೆ ಕೈ ಮುಗಿದು ಒಲ್ಲೆ ಎಂದ ಸಚಿವ ಸೋಮಣ್ಣ

author img

By

Published : Aug 25, 2021, 5:10 PM IST

ಚಾಮರಾಜನಗರ : ವಸತಿ ಸಚಿವ ವಿ ಸೋಮಣ್ಣ ಅವರೇ ಚಾಮರಾಜನಗರ ಜಿಲ್ಲೆ ಉಸ್ತುವಾರಿ ಆಗಬೇಕೆಂಬ ಒತ್ತಾಯ ಕೇಳಿಬರುತ್ತಿರುವ ಹೊತ್ತಿನಲ್ಲೇ ಉಸ್ತುವಾರಿ ಸಚಿವ ಸ್ಥಾನ ಬೇಡ ಎಂಬ ರೀತಿಯಲ್ಲಿ ಸೋಮಣ್ಣ ಕೈಮುಗಿದ ಘಟನೆ ಇಂದು ನಗರದಲ್ಲಿ ನಡೆಯಿತು.

ಉಸ್ತುವಾರಿ ಆಗ್ತೀರಾ ಎಂದದ್ದಕ್ಕೆ ಕೈಮುಗಿದು ಒಲ್ಲೆ ಎಂದ ಸಚಿವ ವಿ ಸೋಮಣ್ಣ

ನಗರದ ಪ್ರವಾಸಿಮಂದಿರದಲ್ಲಿ"ಚಾಮರಾಜನಗರ ಉಸ್ತುವಾರಿ ಸಚಿವಾರಾಗುತ್ತೀರಾ ಎಂದು ವಿ ಸೋಮಣ್ಣ ಅವರನ್ನ ಕೇಳಿದಕ್ಕೆ, ಉಸ್ತುವಾರಿ ಸಚಿವ ಸ್ಥಾನ ಬೇಡವೆಂಬಂತೆ ತಲೆಯಾಡಿಸಿ ಕೈಮುಗಿದರು‌.

ತಾಪಂ, ಜಿಪಂ ಚುನಾವಣೆಗೆ ಶುಭ ಸಂದೇಶ : ಇದಕ್ಕೂ ಮುನ್ನ, ಮೈಸೂರು ಮಹಾನಾಗರ ಪಾಲಿಕೆಯಲ್ಲಿ ಮೇಯರ್ ಸ್ಥಾನ ಬಿಜೆಪಿ ಪಾಲಾಗಿರುವ ಕುರಿತು ಮಾತನಾಡಿ, ಇಡೀ ದೇಶದಲ್ಲೇ ಕಮಲ ಅರಳುತ್ತಿದ್ದು, ಅದೇ ರೀತಿ ಮೈಸೂರಿನಲ್ಲೂ ಬಿಜೆಪಿ ಬಂದಿದೆ. ಮೇಯರ್ ಸ್ಥಾನ ಬಂದಿರುವುದು ತಾಪಂ ಮತ್ತು ಜಿಪಂ ಚುನಾವಣೆಗೆ ಶುಭ ಸೂಚಕ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುಡಿಸಲು ಮುಕ್ತ ಕರ್ನಾಟಕದ ಗುರಿ ಹೊಂದಿದ್ದು, ರಾಜ್ಯದಲ್ಲಿ ಅರ್ಹ ಬಡವರಿಗೆ ವಸತಿ ನೀಡಲಾಗುವುದು. ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಫಲಾನುಭವಿಗಳಿಗೆ ವಸತಿ ಕೊಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : ಮೊದಲ ಬಾರಿಗೆ ಬಿಜೆಪಿಗೆ ಒಲಿದ ಮೇಯರ್ ಪಟ್ಟ.. ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.