ETV Bharat / state

ಹಿರಿಯರಿಗೆ ಕೊಕ್ ಕೊಟ್ಟರೂ ಓಕೆ, ವಿಜಯೇಂದ್ರಗೆ ಸಚಿವ ಸ್ಥಾನ ನೀಡಿದ್ರು ಸಂತೋಷ: ಉಮೇಶ್ ಕತ್ತಿ - ವಿಜಯೇಂದ್ರಗೆ ಸಚಿವ ಸ್ಥಾನ

ಸಚಿವ ಸಂಪುಟ ಪುನಾರಚನೆ ನಡೆದು ಹಿರಿಯರಿಗೆ ಕೊಕ್ ಕೊಟ್ಟರೆ ಸ್ವಾಗತಿಸುತ್ತೇನೆ, ಹಾಗೆಯೇ ವಿಜಯೇಂದ್ರಗೆ ಸಚಿವ ಸ್ಥಾನ ಕೊಟ್ಟರೂ ಸಂತೋಷ ಎಂದು ಸಚಿವ ಉಮೇಶ್ ಕತ್ತಿ ಗುಂಡ್ಲುಪೇಟೆಯಲ್ಲಿ ಹೇಳಿದರು.

ಉಮೇಶ್ ಕತ್ತಿ
ಉಮೇಶ್ ಕತ್ತಿ
author img

By

Published : Apr 7, 2022, 2:06 PM IST

Updated : Apr 7, 2022, 2:39 PM IST

ಚಾಮರಾಜನಗರ: ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಪಕ್ಷದ ಹೈಕಮಾಂಡ್​ಗೆ ಬಿಟ್ಟ ವಿಚಾರ. ಬಿ ವೈ ವಿಜಯೇಂದ್ರಗೆ ಸಚಿವ ಸ್ಥಾನ ಕೊಟ್ಟರೂ ಸಂತೋಷ. ಹಿರಿಯರಿಗೆ ಕೊಕ್ ಕೊಟ್ಟು ಅವರನ್ನು ಪಕ್ಷ ಸಂಘಟನೆಗೆ ನಿಯೋಜಿಸಿದರೆ ಅದನ್ನೂ ಸ್ವಾಗತಿಸುತ್ತೇನೆ. ನಾನು 9 ಬಾರಿ ಶಾಸಕನಾಗಿದ್ದೇನೆ, ಹಿರಿಯರು ಪಕ್ಷ ಸಂಘಟಿಸಬೇಕು ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.

ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕತ್ತಿ

ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ನಡೆದು ಹಿರಿಯರಿಗೆ ಕೊಕ್ ಕೊಟ್ಟರೂ ಸರಿ, ವಿಜಯೇಂದ್ರಗೆ ಸಚಿವ ಸ್ಥಾನ ಕೊಟ್ಟರೂ ಸರಿ.. ಎರಡನ್ನೂ ಸ್ವಾಗತ ಮಾಡುತ್ತೇನೆ. ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಪುತ್ರರಾಗಿದ್ದು, ಪಕ್ಷ ಸಂಘಟನೆಗೆ ಬಲ ಬರಲಿದೆ ಎಂದು ಅಭಿಪ್ರಾಯಪಟ್ಟರು.

ಬೆಳಗಾವಿ ಜಿಲ್ಲೆಯನ್ನು ಜನರ ಅನುಕೂಲಕ್ಕಾಗಿ ವಿಭಜಿಸಬೇಕು, ಎಸಿ ಕಚೇರಿ ಇರುವ ಮೂರು ತಾಲೂಕುಗಳನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು. ಶೀಘ್ರವೇ ಮುಖ್ಯಮಂತ್ರಿ ಅವರಿಗೆ ಜಿಲ್ಲೆಯನ್ನು ವಿಭಜಿಸಿಲು ಮನವಿ ಸಲ್ಲಿಸಲಾಗುವುದು, ಇದಕ್ಕೆ ಎಲ್ಲಾ ಶಾಸಕರ ಸಹಮತವೂ ಇದೆ ಎಂದು ಸಚಿವ ಉಮೇಶ್​ ಕತ್ತಿ ಹೇಳಿದರು. ಗೋಕಾಕ್ ಅನ್ನು ಜಿಲ್ಲಾಕೇಂದ್ರವಾಗಿ ಮಾಡಬೇಕೆಂದು ಪ್ರತಿಭಟಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನಗೂ ಹುಕ್ಕೇರಿಯನ್ನು ಜಿಲ್ಲೆ ಮಾಡಬೇಕೆಂಬ ಆಸೆ ಇದೆ. ಆದರೆ, ಅವೆಲ್ಲಾ ಆಗಲ್ಲ. ಮೂರು ತಾಲೂಕುಗಳಲ್ಲಿ ಎಸಿ ಕಚೇರಿಗಳಿದ್ದು, ಅವು ಜಿಲ್ಲೆಗಳಾಗಲಿವೆ ಎಂದು ಹೇಳಿದರು.

ಆಜಾನ್, ಹಿಜಾಬ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ಇನ್ನೂ ಒಂದು ವರ್ಷ ಬಿಜೆಪಿ ಅತ್ಯುತ್ತಮ ಆಡಳಿತ ಕೊಡಲಿದ್ದು, ಮುಂದಿನ ಚುನಾವಣೆಗೂ ನಾವೇ ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ವಿದೇಶಿ ರಾಯಾಭಾರಿಗಳಿಗೆ ಬಿಜೆಪಿಯ ಇತಿಹಾಸ, ಸಿದ್ಧಾಂತ ವಿಶ್ಲೇಷಿಸಿದ ಜೆ ಪಿ ನಡ್ಡಾ

Last Updated : Apr 7, 2022, 2:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.