ETV Bharat / state

ಕಾವೇರಿ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ

ಕಾವೇರಿ ಕಣಿವೆಯಲ್ಲಿ ಅಬ್ಬರಿಸುತ್ತಿರುವ ಮಳೆಯಿಂದಾಗಿ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು‌.

author img

By

Published : Aug 8, 2020, 4:57 PM IST

Minister Suresh Kumar
ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್

ಕೊಳ್ಳೇಗಾಲ: ಕೆಆರ್​ಎಸ್ ಹಾಗೂ ಕಬಿನಿ ಅಣೆಕಟ್ಟಿನಿಂದ ಕಳೆದ ಎರಡು ದಿನಗಳಲ್ಲಿ 1.50 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದ್ದು. ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಯಾವಾಗ ಬೇಕಾದರೂ ನೀರಿನ ಒಳ, ಹೊರ ಹರಿವು ಹೆಚ್ಚಾಗಿ ನದಿ ಪಾತ್ರ ಗ್ರಾಮಗಳಿಗೆ ನುಗ್ಗುತ್ತದೆಯೋ ಎಂಬ ಆತಂಕ ಜನರಲ್ಲಿದೆ.

ಕಾವೇರಿ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ

ಪ್ರವಾಹ ಭೀತಿ ಇರುವ ದಾಸನಪುರ, ಮುಳ್ಳೂರು, ಹಳೇ ಅಂಪಾಪುರ,ಹರಳೆ, ಯಡಕೊರಿಯ ಗ್ರಾಮಗಳಿಗೆ ಭೇಟಿ ನೀಡಿದ ಸಚಿವರಿಗೆ ನಿವಾಸಿಗಳು, ವರ್ಷ ವರ್ಷವೂ ನೆರೆ ಬಂದು ಮನೆ, ಬೆಳೆ, ಆಸ್ತಿ-ಪಾಸ್ತಿ ಹಾಳುಗೆಡವುತ್ತಿದೆ. ಇನ್ನು ಮುಂದಾದರೂ ನೆರೆ ತಡೆಯ ಬಗ್ಗೆ ಶಾಶ್ವತ ಕ್ರಮಕ್ಕೆ ನದಿ ತಟದಲ್ಲಿ ತಡೆಗೋಡೆ ನಿರ್ಮಾಣ ಮಾಡಿಕೊಡಿ ಎಂದು ಒತ್ತಾಯಿಸಿದರು.

ಸುರೇಶ್ ಸಚಿವ ಕುಮಾರ್ ಈ ಕುರಿತಾಗಿ ಮಾತನಾಡಿ, ಕಬಿನಿ ಮತ್ತು ಕೆಆರ್​ಎಸ್​ನಿಂದ ಕಳೆದ ವರ್ಷ ಏಕಾಏಕಿ 2ಲಕ್ಷ ಕ್ಯುಸೆಕ್ ನೀರನ್ನು ಬಿಟ್ಟಿದ್ದರಿಂದ ಪ್ರವಾಹ ಎದುರಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಆಸ್ತಿ-ಪಾಸ್ತಿ, ಬೆಳೆ ನಾಶವೂ ಹೆಚ್ಚಾಗಿ ತೊಂದರೆ ಎದುರಿಸುವ ಪರಿಸ್ಥಿತಿ ಉಂಟಾಯಿತು.

ಆದರೆ ಈ ಬಾರಿಯು ಮಲೆನಾಡಿನ ಕಡೆ ಮಳೆಯ ಪ್ರಮಾಣ ಅಧಿಕ ಮಳೆ ಬೀಳುತ್ತಿದ್ದು ನಾನು ಕಾವೇರಿ ಮತ್ತು ಕಬಿನಿ ಮಂಡಳಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಒಂದೇ ಬಾರಿ ಲಕ್ಷಕ್ಕೂ ಮೀರಿದ ಕ್ಯುಸೆಕ್ ನೀರು ಬಿಡಬಾರದು. ಜಲಾಶಯಗಳ ಒಳ ಮತ್ತು ಹೊರ ನೀರನ್ನು ಗಮನಿಸಿ ಹಂತ ಹಂತವಾಗಿ ನೀರನ್ನು ಬಿಡಬೇಕೆಂದು ಮಾರ್ಗದರ್ಶನ ನೀಡಿದ್ದೇನೆ. ಗಂಟೆ ಗಂಟೆಗೂ ಬೀಡುವ ನೀರಿನ ಪ್ರಮಾಣವನ್ನು ನನ್ನ ಗಮನಕ್ಕೆ ತರಬೇಕು ಎಂದು ಸೂಚಿಸಿದ್ದೇನೆ ಎಂದರು.

ಒಂದು ಕಡೆ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದ್ರೆ ನೇರವಾಗಿ ನಿರ್ಮಾಣ ಮಾಡಿದ್ದರಿಂದ ಅದು ಉಪಯೋಗಕ್ಕೆ ಬರಲಿಲ್ಲ. ಮುಂದಿನ ದಿನಗಳಲ್ಲಿ ಯಾವ ಕಡೆ ಗ್ರಾಮಕ್ಕೆ ನೀರು ಬರುತ್ತದೆಯೋ ಅಲ್ಲಲ್ಲಿ ವೈಜ್ಞಾನಿಕವಾಗಿ ತಡಗೋಡೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.

ಕಳೆದ ಪ್ರವಾದಿಂದ ಹನಿಗೊಳಗಾದ ಬೆಳೆ ಪರಿಹಾರ ನೀಡಲಾಗಿದೆ. ಆದ್ರೆ ಮನೆ ನಿರ್ಮಾಣದ ಪರಿಹಾರವೂ ಅರ್ಧಕ್ಕೆ ನಿಂತಿದೆ. ಪರಿಹಾರದ ಹಣವನ್ನು ಪೂರ್ಣಗೊಳಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಈ ವೇಳೆ ಸ್ಥಳೀಯ ಶಾಸಕ‌ ಎನ್.ಮಹೇಶ್, ಜಿಲ್ಲಾಧಿಕಾರಿ ಎಂ.ಆರ್.ರವಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.