ಚಾಮರಾಜನಗರ: ಈಟಿವಿ ಭಾರತ ವರದಿಯಿಂದ ಎಚ್ಚೆತ್ತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಪುಣಜನೂರು ಚೆಕ್ ಪೋಸ್ಟ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಏ.3 ರಂದು ಪುಣಜನೂರು ಚೆಕ್ ಪೋಸ್ಟ್ ಡಮ್ಮಿ... ಹೊರರಾಜ್ಯದವರನ್ನು ಹೀಗೆಲ್ಲಾ ಬಿಡಬಹುದಾ ಸ್ವಾಮಿ ಎಂದು ಬೇಕಾಬಿಟ್ಟಿಯಾಗಿ ವಾಹನಗಳನ್ನು ಬಿಡುತ್ತಿರುವ ಕುರಿತು ವರದಿ ಬಿತ್ತರಿಸಿತ್ತು. ವರದಿ ಬಳಿಕ, ಜಿಲ್ಲಾ ಉಸ್ತುವಾರಿ ಸಚಿವ ಚೆಕ್ ಪೋಸ್ಟ್ಗೆ ಭೇಟಿ ನೀಡಿ ತಮಿಳುನಾಡಿನಿಂದ ಬರುವ ಅಗತ್ಯ ಸೇವೆಗಳ ಚಾಲಕರು ಆರೋಗ್ಯ ದೃಢೀಕರಣ ಪ್ರಮಾಣ ಪತ್ರ ತಂದರೇ ಮಾತ್ರ ಪ್ರವೇಶಕ್ಕೆ ಅನುಮತಿ ಕೊಡಿ ಎಂದು ಸೂಚಿಸಿದರು.
ಕೇಂದ್ರ ಸರ್ಕಾರದ ಸೂಚನೆ ಯಂತೆ ಅಗತ್ಯ ಸೇವೆಗಳನ್ನ ಒದಗಿಸುವುದಕ್ಕೆ ತೊಂದರೆ ಇಲ್ಲ. ಮೂಲೆಹೊಳೆಯಂತೆ ಪುಣಜನೂರು ಚೆಕ್ ಪೋಸ್ಟ್ ನಲ್ಲಿ ವಾಹನಗಳಿಗೆ ಸ್ಯಾನಿಟೈಜ್ ಮಾಡಬೇಕು, ಜೊತೆಗೆ ಚಾಮರಾಜನಗರ ಜಿಲ್ಲೆಯ ಚೆಕ್ ಪೋಸ್ಟ್ ಗಳು, ಪ್ರಮುಖ ಸ್ಥಳಗಳಲ್ಲಿ ಔಷಧ ಸಿಂಪಡಣೆಯ ಟನಲ್ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಮಿಳುನಾಡಿನಿಂದ ಬರುವ ವಾಹನಗಳು- ರಾಜ್ಯದಿಂದ ತೆರಳುವ ವಾಹನಗಳು, ಚಾಲಕರ ಮಾಹಿತಿ ಕುರಿತು ಪ್ರತ್ಯೇಕವಾಗಿ ದಾಖಲಿಸಬೇಕು. ಜೊತೆಗೆ, ಕೋವಿಡ್-19 ತಡೆಗೆ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕೆಂದರು.