ಕೊಳ್ಳೇಗಾಲ: ಸಚಿವ ಸುರೇಶ್ ಕುಮಾರ್ ರೈತರೊಂದಿಗೆ ಕೊಳ್ಳೇಗಾಲದ ಸುತ್ತಮುತ್ತಲಿನ ವಿವಿಧ ಕರೆಗಳಿಗೆ ಭೇಟಿ ನೀಡಿ, ವಾಸ್ತವ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದರು.
ಇತ್ತೀಚಿಗೆ ಸುರಿದ ಮಳೆ ಹಾಗೂ ಜಲಾಶಯಗಳಿಂದ ಹರಿಸಿದ ನೀರಿನಿಂದ ಭರ್ತಿಯಾದ ಕೆರೆಗಳು ಹಾಗೂ ಹೂಳು ತುಂಬಿರುವ ಕೆಲವು ಕೆರೆ ವೀಕ್ಷಿಸಿ, ಈ ಬಗ್ಗೆ ಸ್ಥಳೀಯರು ಹಾಗೂ ರೈತ ಮುಖಂಡರಿಂದ ಮಾಹಿತಿ ಪಡೆದರು. ನಂತರ ಹೊಂಡರಬಾಳು ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿದರು.
ತಾಲೂಕಿನ ಚಿಕ್ಕ ರಂಗನಾಥ ಕೆರೆ, ಹೊಂಡರಬಾಳು ಕೆರೆ, ಕೊಂಗಳ ಗೆರೆ ಸೇರಿದಂತೆ ವಿವಿಧ ಕೆರೆಗಳಿಗೆ ಭೇಟಿ ನೀಡಿದ್ದ ಸಚಿವರು, ಬಾಗಿನ ಅರ್ಪಿಸಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಕಂಡಿದ್ದಾರೆ. ಸಚಿವರ ಈ ಕಾರ್ಯಕ್ಕೆ ರೈತ ಸಮೂಹ ಅಭಿನಂದನೆ ಸಲ್ಲಿಸುತ್ತದೆ ಎಂದು ರೈತ ಸಂಘ ತಿಳಿಸಿದೆ.