ETV Bharat / state

ನನ್ನ ವಿರುದ್ಧ ನಾನೇ ಘೋಷಣೆ ಕೂಗಿಸಿಕೊಳ್ಳುತ್ತಿದ್ದೆ: ಸಚಿವ ಹೆಚ್​ಸಿ ಮಹದೇವಪ್ಪ

author img

By

Published : Aug 20, 2023, 8:54 PM IST

Updated : Aug 20, 2023, 9:04 PM IST

ದೇಶದ ಸಂವಿಧಾನ ರಕ್ಷಣೆ ಮಾಡುವ ಕರ್ತವ್ಯ ನಮ್ಮ ಮೇಲಿದೆ, ಸಂವಿಧಾನ ರಕ್ಷಣೆ ಆದರೆ ನಾವು ರಕ್ಷಣೆಯಾಗುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್​ಸಿ ಮಹದೇವಪ್ಪ ಹೇಳಿದರು.

minister-hc-mahadevappa-speech-in-bhima-sankalpa-samavesha-at-chamarajanagara
ಸಚಿವ ಸಂಪುಟದಲ್ಲಿ ಕೆಲಸ ಮಾಡಿಸಿಕೊಳ್ಳು ನನ್ನ ವಿರುದ್ಧ ನಾನೇ ಘೋಷಣೆ ಕೂಗಿಸಿಕೊಳ್ಳುತ್ತಿದ್ದೆ: ಸಚಿವ ಹೆಚ್​ಸಿ ಮಹದೇವಪ್ಪ

ಸಚಿವ ಹೆಚ್​ಸಿ ಮಹದೇವಪ್ಪ

ಚಾಮರಾಜನಗರ: "ನಾನೇ ನನ್ನ ವಿರುದ್ಧ ಘೋಷಣೆ ಕೂಗಿಸಿಕೊಂಡು ಸಚಿವ ಸಂಪುಟದಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದೆ" ಎಂದು ಸಮಾಜ ಕಲ್ಯಾಣ ಸಚಿವ ಹೆಚ್​ಸಿ ಮಹದೇವಪ್ಪ ಹೇಳಿದರು. ಚಾಮರಾಜನಗರದಲ್ಲಿ ನಡೆದ ಭೀಮ‌ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, "1998ರಲ್ಲಿ 20 ಸಾವಿರ ಬ್ಯಾಕ್ ಲಾಗ್ ಹುದ್ದೆ ತುಂಬಿಸುವ ಸಂದರ್ಭದಲ್ಲಿ ನನ್ನ ಮನೆ ಮುಂದೆ ಧಿಕ್ಕಾರ ಕೂಗಿಸಿದ್ದೆ. ನನ್ನ ಮನೆ ಮುಂದೆ ಕುಳಿತು ಹೆಚ್​ಸಿ ಮಹದೇವಪ್ಪರಿಗೆ ಧಿಕ್ಕಾರ ಕೂಗಿ ಅಂತ ಹೇಳುತ್ತಿದ್ದೆ. ಆಮೇಲೆ ಕ್ಯಾಬಿನೆಟ್​ನಲ್ಲಿ ನನ್ನ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ ಎಂದು ಹೇಳಿ ಅಪ್ರೊವಲ್​ ಮಾಡಿಸುತ್ತಿದ್ದೆ. ಈ ಗುಟ್ಟನ್ನು ನಾನು ಈಗ ಇಲ್ಲಿ ಹೇಳುತ್ತಿದ್ದೇನೆ" ಎಂದರು.

"ಹೆಚ್​ಸಿ ಮಹದೇವಪ್ಪ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಇರುವವರಗೆ ಎಸ್​ಇಪಿ ಹಾಗೂ ಟಿಎಸ್​ಪಿ ಹಣದಲ್ಲಿ ಒಂದು ರೂಪಾಯಿಯೂ ದುರುಪಯೋಗವಾಗಲು ಬಿಡಲ್ಲ. ಎಸ್​ಸಿ, ಎಸ್​ಟಿ ಯುವಕರಿಗೆ ಸುಮ್ಮನ್ನೇ ಕಂಟ್ರಾಕ್ಟರ್ ಲೈಸನ್ಸ್ ಕೊಟ್ಟಿಲ್ಲ, ಬೇರೆ ಬೇರೆ ಕಂಟ್ರಾಕ್ಟರ್​ಗಳು ಜೇಬು ತುಂಬಾ ದುಡ್ಡು ಇಟ್ಟುಕೊಳ್ಳುತ್ತಿದ್ದರು. ಆದರೆ, ನಮ್ಮವರಿಗೆ ಊಟ ಮಾಡೋಕೆ ದುಡ್ಡು ಇರುತ್ತಿರಲಿಲ್ಲ. ಅವರ ಜೇಬು ಖಾಲಿ ಇರುತ್ತಿತ್ತು. ಅದಕ್ಕೆ ಕಂಟ್ರಾಕ್ಟರ್ ಮೀಸಲಾತಿ ತಂದೆವು" ಎಂದು ತಿಳಿಸಿದರು.

"ಅಂಬೇಡ್ಕರ್ ಸಿದ್ಧಾಂತವನ್ನು ಪ್ರಚಾರ ಮಾಡಬೇಕು. ಬಲವಾದ ಅಂಬೇಡ್ಕರ್ ವಾದ ಬೇಕು, ದೇಶದ ಸಂವಿಧಾನ ರಕ್ಷಣೆ ಮಾಡುವ ಕರ್ತವ್ಯ ನಮ್ಮ ಮೇಲಿದೆ, ಸಂವಿಧಾನ ರಕ್ಷಣೆ ಆದರೆ ನಾವು ರಕ್ಷಣೆಯಾಗುತ್ತೇವೆ ಅದಕ್ಕಾಗಿ ನಾವು ಒಗ್ಗಟ್ಟಾಗಬೇಕು" ಎಂದು ಕರೆ ನೀಡಿದರು.

ಇದನ್ನೂ ಓದಿ: ರಾಜೀವ್​ ಗಾಂಧಿ & ದೇವರಾಜ ಅರಸು ಪ್ರಜಾತಂತ್ರದ ರೂವಾರಿಗಳು: ಸಿಎಂ ಸಿದ್ದರಾಮಯ್ಯ

ಹಬ್ಬ, ಮದುವೆಯಲ್ಲಿ ಸಂವಿಧಾನ ಪೀಠಿಕೆ ಓದಬೇಕು: ಭೀಮ ಸಂಕಲ್ಪ ಸಮಾವೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, "ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸತತ ಪ್ರಯತ್ನ, ಸಂಘರ್ಷದ ಮೂಲಕ ರಚಿಸಿಕೊಟ್ಟಿರುವ ಸಂವಿಧಾನವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರಿಂದ ಆಗಬೇಕು. ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಬೇಕು. ಸಂವಿಧಾನದ ಮಹತ್ವ, ರಕ್ಷಣೆ, ಅನುಕೂಲವನ್ನು ಮಕ್ಕಳಿಗೆ, ಕುಟುಂಬಕ್ಕೆ ತಿಳಿಸಿಕೊಡುವ ಕೆಲಸ ಆಗಬೇಕಿದೆ" ಎಂದರು.

"ನಿಮ್ಮೆಲ್ಲರ ಸಹಕಾರದಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಂವಿಧಾನ ಉಳಿಸುವ, ನಿಮಗೆಲ್ಲರಿಗೂ ರಕ್ಷಣೆ ಕೊಡುವ ಸರ್ಕಾರ ಬಂದಿದೆ. ಮುಂದಿನ ದಿನಗಳಲ್ಲೂ ಸಂವಿಧಾನ ರಕ್ಷಣೆ ಮಾಡುವ ಪಕ್ಷ ಅಧಿಕಾರಕ್ಕೆ ಬರಬೇಕು. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ. ಪ್ರತಿ ಮನೆ ಮನೆಯಲ್ಲೂ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಸಂವಿಧಾನ ಪೀಠಿಕೆಯನ್ನು ಸಣ್ಣ ಮಕ್ಕಳಿಗೆ ಓದಿಸಿದರೆ ಬಹಳಷ್ಠು ಬದಲಾವಣೆ ಸಾಧ್ಯವಾಗುತ್ತದೆ. ಹಬ್ಬ, ಮದುವೆ ಸಮಾರಂಭಗಳಲ್ಲಿ ಸಂವಿಧಾನ ಪೀಠಿಕೆ ಓದುವ ಪರಿಪಾಠ ಬೆಳೆಯಬೇಕು" ಎಂದು ಹೇಳಿದರು. ಇನ್ನು ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್, ಎ.ಆರ್.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪಗೆ ಅರಸು ಪ್ರಶಸ್ತಿ ಪ್ರದಾನ

Last Updated : Aug 20, 2023, 9:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.