ಚಾಮರಾಜನಗರ: ನಮ್ಮದು ಈಗ ಬಾಂಬೆ ಟೀಮ್ ಅಲ್ಲ, ಬಿಎಸ್ವೈ ಟೀಮ್, ಬಿಜೆಪಿ ಟೀಂ ನಮ್ಮಲ್ಲಿ ಯಾವುದೇ ಬಿರುಕಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಗುಂಡ್ಲುಪೇಟೆಯಲ್ಲಿ ರೈತರೊಟ್ಟಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಂಪುಟ ಪುನಾರಚನೆಯ ಅಸಮಾಧಾನ ಕುರಿತು ಮಾತನಾಡಿ ನಮ್ಮ ಐದು ಬೆರಳುಗಳೇ ಸಮವಿಲ್ಲ, ಕೆಲವರಿಗೆ ಅತೃಪ್ತಿ ಆಗಿರುವುದು ಸಹಜ. ಶಾಸಕರು ಕೆಲ ಇಲಾಖೆಯನ್ನು ನಿರ್ವಹಿಸುವ ಇಚ್ಛೆ ಇರುವುದರಿಂದ ಅಸಮಾಧಾನ ಇರಲಿದ್ದು, ಬಳಿಕ ಶಮನ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗಣಿಗಾರಿಕೆಯಿಂದ ಕೃಷಿ ಚಟುವಟಿಕೆ ಮೇಲೆ ಅಡ್ಡ ಪರಿಣಾಮ ಆಗುತ್ತಿರುವ ಕುರಿತು ಗಮನಕ್ಕೆ ಬಂದಿದೆ. ಗಣಿ ಸಚಿವರ ಜೊತೆ ಚರ್ಚಿಸಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುತ್ತದೆ. ಅದೇ ರೀತಿ, ಗಣಿಗಾರಿಕೆ ನಡೆಸುವವರು ಮುನ್ನೆಚ್ಚರಿಕೆ ವಹಿಸಬೇಕಾದ ಕುರಿತು ಸರ್ಕಾರ ಕ್ರಮ ಕೈಗೊಳ್ಳಲ್ಲಿದೆ ಎಂದರು.
ನಾನು ಇಚ್ಛೆ ಪಟ್ಟು ಕೃಷಿ ಖಾತೆಯನ್ನು ತೆಗೆದುಕೊಂಡಿದ್ದು. ರೈತರ ಬಾಳು ಹಸನಾದಾಗ ಮಾತ್ರ ನನಗೆ ತೃಪ್ತಿ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು, ಉತ್ತಮ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇನೆ ಎಂದರು.
ಓದಿ : ಮುಜರಾಯಿ ದೇಗುಲಗಳಲ್ಲಿ ತಿಂಗಳಿಗೆ ಎರಡು ದಿನ ಸಪ್ತಪದಿ ಕಾರ್ಯಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ