ETV Bharat / state

ಅವರಿವರು ಕಟ್ಟೋ ಗೂಡಲ್ಲಿ ರಾಜಕಾರಣ ಮಾಡೋರು ಸಿದ್ದರಾಮಯ್ಯ: ಸಚಿವ ಬಿ ಶ್ರೀರಾಮುಲು

ಹೆಚ್​ ಡಿ ದೇವೇಗೌಡರನ್ನು, ಜಿ ಪರಮೇಶ್ವರ್ ಅವರನ್ನು ತುಳಿದಿದ್ದಾಗಿದೆ. ಈಗ ಡಿಕೆಶಿ ಅವರನ್ನು ತುಳಿಯಲು ಹೊರಟಿದ್ದಾರೆ. ಯಾವುದೇ ಶ್ರಮ ಹಾಕದೆ ಅವರಿವರು ಕಟ್ಟೋ ಗೂಡಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ ಎಂದು ಸಚಿವ ಬಿ ಶ್ರೀರಾಮುಲು ಟೀಕಿಸಿದ್ದಾರೆ.

ಸಚಿವ ಬಿ ಶ್ರೀರಾಮುಲು
ಸಚಿವ ಬಿ ಶ್ರೀರಾಮುಲು
author img

By

Published : Oct 27, 2022, 6:49 PM IST

ಚಾಮರಾಜನಗರ: ಅವರಿವರು ಕಟ್ಟುವ ಗೂಡಲ್ಲಿ ರಾಜಕಾರಣ ಮಾಡೋದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಂದು ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಬೇರೆಯವರನ್ನು ತುಳಿದು ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ, ಹೆಚ್​ ಡಿ ದೇವೇಗೌಡರನ್ನು, ಜಿ ಪರಮೇಶ್ವರ್ ಅವರನ್ನು ತುಳಿದಿದ್ದಾಗಿದೆ. ಈಗ ಡಿಕೆಶಿ ಅವರನ್ನು ತುಳಿಯಲು ಹೊರಟಿದ್ದಾರೆ. ಯಾವುದೇ ಶ್ರಮ ಹಾಕದೆ ಅವರಿವರು ಕಟ್ಟೋ ಗೂಡಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ ಎಂದು ಟೀಕಿಸಿದರು

ಮೀಸಲಾತಿ ಹೆಚ್ಚಿಸಬೇಕೆಂಬ ಇಚ್ಛಾಶಕ್ತಿ ಅವರಲ್ಲಿರಲಿಲ್ಲ: ಜಾತಿಗಳ ಹೆಸರು, ಮಹಾನ್ ಪುರುಷರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾರೆ. ಅವರ ಸರ್ಕಾರ ಇದ್ದಾಗ ಮೀಸಲಾತಿ ಕೊಡಲಿಲ್ಲ. ಈಗ ಪ್ರೋತ್ಸಾಹ ಕೊಟ್ಟೆವು, ಸಲಹೆ ಕೊಟ್ಟೆವು ಎನ್ನುತ್ತಾರೆ. ಆದರೆ, ಮೀಸಲಾತಿ ಹೆಚ್ಚು ಮಾಡಬೇಕೆಂಬ ಇಚ್ಛಾಶಕ್ತಿಯೇ ಅವರಲ್ಲಿ ಇರಲಿಲ್ಲ ಎಂದು ಸಚಿವ ಶ್ರೀರಾಮುಲು ಆರೋಪಿಸಿದರು.

ಮೀಸಲಾತಿ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ: ಕಾನೂನುಬದ್ಧವಾಗಿ ಏನನ್ನು ಮಾಡಬೇಕೊ ಎಲ್ಲಾ ಕ್ರಮಗಳನ್ನು ಬೊಮ್ಮಾಯಿ ಸರ್ಕಾರ ತೆಗೆದುಕೊಂಡಿದ್ದು, ಈಗಾಗಲೇ ನಾವು ಹೊಸ ಮೀಸಲಾತಿಯಲ್ಲಿದ್ದೇವೆ. ಕಾನೂನಾತ್ಮಕವಾಗಿ ಗಟ್ಟಿಗೊಳಿಸುತ್ತಿದ್ದೇವೆ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ ಎಂದು ಹೇಳಿದರು.

ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸಿದ್ದು, ಕರ್ನಾಟಕದಲ್ಲೂ ಈ ಬಾರಿ ಎಲ್ಲಾ ಸಮುದಾಯವು ಕಾಂಗ್ರೆಸ್ ಅನ್ನು ತಿರಸ್ಕರಿಸಲಿದೆ ಎಂದು ಸಚಿವ ಶ್ರೀರಾಮುಲು ಭವಿಷ್ಯ ನುಡಿದರು.

ನಾಯಕರಿಗೆ ಅಪಮಾನ ಮಾಡಿರುವುದು ಖಂಡನೀಯ: ರಾಯಚೂರಲ್ಲಿ ಗೊಲ್ಲ ಸಮುದಾಯಕ್ಕೆ ಸಿದ್ದರಾಮಯ್ಯ ಅಪಮಾನ ಮಾಡಿದ್ದು, ಕೂಡಲೇ ಬೆಷರತ್ ಕ್ಷಮೆಯನ್ನು ಅವರು ಕೇಳಬೇಕು. ಗೊಲ್ಲ ಸಮುದಾಯದ ನಾಯಕರಿಗೆ ಅಪಮಾನ ಮಾಡಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.

ಓದಿ: ನಮಗೆ ರಾಜಕೀಯ ಇಚ್ಛಾಶಕ್ತಿ ಇರುವುದರಿಂದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ: ಸಚಿವ ಶ್ರೀರಾಮುಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.