ETV Bharat / state

ಆಕಸ್ಮಿಕ ಬೆಂಕಿ, ಹೊತ್ತಿ ಉರಿದ ಬಟ್ಟೆ ಅಂಗಡಿ... ಕಾರಣ ನಿಗೂಢ!

author img

By

Published : Jun 7, 2020, 1:37 AM IST

ಬಟ್ಟೆ ಅಂಗಡಿಯಲ್ಲಿ ಏಕಾಏಕಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

Massive fire breaks out at textile shope

ಕೊಳ್ಳೇಗಾಲ: ಇಲ್ಲಿನ ದಕ್ಷಿಣ ಬಡವಾಣೆಯ ಜಯ್​​ ಇನ್ಸ್​​ಟ್ಯೂಟ್ ರಸ್ತೆಯಲ್ಲಿನ ಮೀನಾಕ್ಷಿ ಟೆಕ್ಸ್​​ಟೆಲ್ಸ್ ಎಂಬುವವರ ಬಟ್ಟೆ ಅಂಗಡಿಯಲ್ಲಿ ಬೆಂಕಿ ಅವಘಡ ನಡೆದಿದೆ.

ಆಕಸ್ಮಿಕ ಬೆಂಕಿ, ಹೊತ್ತಿ ಉರಿದ ಬಟ್ಟೆ ಅಂಗಡಿ

ರಾತ್ರಿ ಸುಮಾರು 9.45ರ ವೇಳೆ ಅಂಗಡಿ ಮಾಲೀಕ ಪುನಮ್ ಸಿಂಗ್ ವ್ಯಾಪಾರ ಮುಗಿಸಿ, ಅಂಗಡಿ ಬಂದ್ ಮಾಡುವ ವೇಳೆ ಒಳಗಡೆಯಿಂದ ಭಾರಿ ಶಬ್ಧದೊಂದಿಗೆ, ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

ಅಂಗಡಿ‌ ಬಂದ್ ಮಾಡುವ ವೇಳೆ ಬಾಗಿಲು ಸಿಡಿದು ಬೆಂಕಿ ಕೆನ್ನಾಲಿಗೆ ಹೊರಗೆ ಬಂದ ಪರಿಣಾಮ ಅಂಗಡಿ ಮಾಲೀಕ ಪುನಮ್ ಸಿಂಗ್ ತೆಲೆಗೆ ತೀರ್ವ ಪೆಟ್ಟಾಗಿದ್ದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಸ್ಥಳಕಾಗಮಿಸಿದ ಅಗ್ನಿ ಶಾಮಕ‌ ದಳ ಸಿಬ್ಬಂದಿಗಳು ಹೊತ್ತಿ ಹುರಿಯುತ್ತಿದ ಬೆಂಕಿ ನಂದಿಸಿದ್ದು. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಭೇಟಿ‌ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಆದರೆ ಆಕಸ್ಮಿಕ ಬೆಂಕಿ ಹೊತ್ತಲು ವಿದ್ಯುತ್ ಶಾರ್ಕ್ ಸರ್ಕ್ಯೂಟ್ ಕಾರಣವೋ ? ಅಥವಾ ಬೇರೇನೋ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.