ETV Bharat / state

ಹುಬ್ಬಳ್ಳಿಯಲ್ಲಿಂದು ಗಣೇಶ ಮೂರ್ತಿ ನಿಮಜ್ಜನ; ನಗರದಲ್ಲಿ ಹೈ ಅಲರ್ಟ್, ಪೊಲೀಸರ ಹದ್ದಿನ ಕಣ್ಣು - Ganesha Immersion - GANESHA IMMERSION

ಹುಬ್ಬಳ್ಳಿಯಲ್ಲಿಂದು 11 ನೇ ದಿನದ ಗಣೇಶನ ಮೂರ್ತಿ ನಿಮಜ್ಜನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಬಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಕುರಿತು ಅವಳಿ ನಗರ ಪೊಲೀಸ್​ ಕಮಿಷನರ್​ ಎನ್​ ಶಶಿಕುಮಾರ್ ಮಾಹಿತಿ ನೀಡಿದರು.

POLICE TIGHT SECURITY IN HUBBALLI
ಹುಬ್ಬಳ್ಳಿಯಲ್ಲಿ ಪೊಲೀಸರ ಹದ್ದಿನ ಕಣ್ಣು (ETV Bharat)
author img

By ETV Bharat Karnataka Team

Published : Sep 17, 2024, 6:24 PM IST

Updated : Sep 17, 2024, 7:37 PM IST

ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿ ನಿಮಜ್ಜನ: ನಗರ ಪೊಲೀಸ್​ ಆಯುಕ್ತರಿಂದ ಭದ್ರತೆ ಕುರಿತು ಮಾಹಿತಿ (ETV Bharat)

ಹುಬ್ಬಳ್ಳಿ: ವಾಣಿಜ್ಯನಗರ ಹುಬ್ಬಳ್ಳಿಯಲ್ಲಿ ಹನ್ನೊಂದನೇ ದಿನದ ಗಣಪತಿ ನಿಮಜ್ಜನ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ನಿಂದ ಹೈ ಅಲರ್ಟ್ ಘೋಷಣೆ ಮಾಡಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಈದ್ಗಾ ಮೈದಾನದಲ್ಲಿ ನೂರಾರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಬೀಡುಬಿಟ್ಟಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅವಳಿ ನಗರ ಪೊಲೀಸ್ ಆಯುಕ್ತ ಎನ್​ ಶಶಿಕುಮಾರ್​ ತಿಳಿಸಿದರು.

2 ಲಕ್ಷ ಜನ ಸೇರುವ ನಿರೀಕ್ಷೆ; ಈ‌ ಕುರಿತಂತೆ ಮಾಧ್ಯಮವದರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಣಪತಿ ನಿಮಜ್ಜನಕ್ಕೆ ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಲಾಗಿದ್ದು, ಶಾಂತಿಯುತ ಗಣಪತಿ ನಿಮಜ್ಜನ ಸದುದ್ದೇಶದಿಂದ ಕಮಿಷನರೇಟ್ ನಿಂದ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಕೊನೆಯ ದಿನದ ಗಣಪತಿ ಮೆರವಣಿಗೆಗೆ ನಾಡಿನ ಮೂಲೆ ಮೂಲೆಯಿಂದ ಜನರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದರು.

ಹುಬ್ಬಳ್ಳಿಯಲ್ಲಿಂದು ಗಣೇಶ ಮೂರ್ತಿ ನಿಮಜ್ಜನ; ಭದ್ರತೆ ಕುರಿತು ಪೊಲೀಸ್​ ಆಯುಕ್ತರ ಮಾಹಿತಿ (ETV Bharat)

ಈಗಾಗಲೇ ಚನ್ನಮ್ಮ ವೃತ್ತ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಹದ್ದಿನ ಕಣ್ಣು ಇರಿಸಲಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲು ಕೂಡ ಪೊಲೀಸ್ ಇಲಾಖೆ ಮುಂದಾಗಿದೆ ಎಂದು ಎಚ್ಚರಿಕೆ ರವಾನಿಸಿದರು.

ಹೀಗಿದೆ ಪೊಲೀಸ್​ ಭದ್ರತೆ; ಕಳೆದ 10 ದಿನಗಳ ಕಾಲ ಶಾಂತಿಯುತವಾಗಿ ಸಾರ್ವಜನಿಕ ಗಣೇಶೋತ್ಸವ ನಡೆಯಿತು. ಇಂದು 100ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ನಿಮಜ್ಜನ ನಡೆಯಲಿದೆ. ಧಾರವಾಡ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಜನರು ಬರುವ ಸಂಭವ ಇದೆ. 3,500 ಕ್ಕಿಂತ ಹೆಚ್ಚು ಅಧಿಕಾರಿ, ಸಿಬ್ಬಂದಿಗಳನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ. 19 ಸ್ಥಳಗಳಲ್ಲಿ ಸೇಫ್ಟಿ ಐ ಲ್ಯಾಂಡ್ ಮಾಡಲಾಗಿದೆ. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಆದ್ರೆ ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು. ಗಣೇಶ ನಿಮಜ್ಜನ ಹಿನ್ನೆಲೆ ನಗರದಾದ್ಯಂತ 250ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದೆ ಎಂದರು.

ಮೆರವಣಿಗೆ ನಡೆಯುವ ವೇಳೆ ವಿದ್ಯುತ್ ಸಮಸ್ಯೆ ಆಗಬಾರದು ಅಂತ ಪಾಲಿಕೆಗೆ ಹೇಳಿದ್ದೇವೆ. ಆಂಬ್ಯುಲೆನ್ಸ್, ಅಗ್ನಿ ಶಾಮಕದಳ ವ್ಯವಸ್ಥೆ ಮಾಡಿದ್ದೇವೆ‌. ವೈರ್​ಲೆಸ್​ ಸಿಸಿಟಿವಿ ಸೇರಿ ಹಲವು ಭದ್ರತೆ ಒದಗಿಸಿದ್ದೇವೆ. ಮಾರ್ಗಮಧ್ಯದಲ್ಲಿ ಇರುವ ಧಾರ್ಮಿಕ ಕೇಂದ್ರದ ಕಮಿಟಿಯವರು ಗೌರವ ಸಲ್ಲಿಸುತ್ತಿದ್ದಾರೆ. ಜಿಲ್ಲಾಧಿಕಾರಿಗೂ ಸಹ ನಮ್ಮ ಸಂಪೂರ್ಣ ರೂಪುರೇಷೆ ತಿಳಿಸಿದ್ದೇವೆ. ಅವರು ಸಂಜೆ ಬಂದು ಸಹಕಾರ ನೀಡಿದವರಿಗೆ ಧನ್ಯವಾದ ತಿಳಿಸಲಿದ್ದಾರೆ. ಕಳೆದ 10 ದಿನಗಳಿಂದ ಶಾಂತಿಯುತವಾಗಿ ಗಣೇಶೋತ್ಸವ ನಡೆದಿದೆ‌‌. ಗಣೇಶೋತ್ಸವವನ್ನು ಮುಂಬೈ ರೀತಿ ಹುಬ್ಬಳ್ಳಿಯಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತೆ. ಗಣೇಶ ಮಂಡಳಿಗಳು ಸೇರಿ ಹಲವು ಸಂಘ-ಸಂಸ್ಥೆಯವರು ಸಹಕಾರ ನೀಡಿದ್ದಾರೆ. ಕಿಡಿಗೇಡಿಗಳು ಸಮಸ್ಯೆ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಪೊಲೀಸ್​ ಆಯುಕ್ತರು ಮಾಹಿತಿ ನೀಡಿದರು.

ರಾತ್ರಿ 10 ಗಂಟೆಗೆ ಡಿಜೆ ಬಂದ್; ಸುಪ್ರೀಂ ಕೋರ್ಟ್ ನಿರ್ದೇಶನದಂತೆ 10 ಗಂಟೆಗ ಡಿಜೆ ಬಂದ್ ಮಾಡಬೇಕು. ಹೆಚ್ಚಿನ ಕಾಲಾವಕಾಶಕ್ಕಾಗಿ ಮನವಿ ಮಾಡಿದ್ದಾರೆ, ಆದರೆ ಅದು ಸಾಧ್ಯವಿಲ್ಲ. 10 ಗಂಟೆಗೆ ಬಂದ್ ಆಗಲೇಬೇಕು ಅದರಲ್ಲಿ ಎರಡು ಮಾತಿಲ್ಲ. 10 ಗಂಟೆ ನಂತರ ಸಾರ್ವಜನಿಕರು ಕುಟುಂಬ ಸಮೇತ ಆಗಮಿಸುತ್ತಾರೆ ಅನ್ನೋದು ಖುಷಿಯ ವಿಚಾರ. ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ನಲ್ಲಿ ಹಲವು ಚುನಾಯಿತ ಪ್ರತಿನಿಧಿಗಳು ಸಹ ಈ ಸಂಬಂಧ ಮನವಿ ಮಾಡಿದ್ದಾರೆ. ಆದರೆ ಕಾನೂನು ರೀತಿ ಅದಕ್ಕೆ ಅವಕಾಶವಿಲ್ಲ. ಇದಕ್ಕೆ ಗಜಾನನ ಮಂಡಳಿಯವರು ಒಪ್ಪಿ, ಸಹಕರಿಸಿದ್ದಾರೆ ಎಂದು ತಿಳಿಸಿದರು.

ಮೆರವಣಿಗೆಯಲ್ಲಿ 2 ಲಕ್ಷಕ್ಕಿಂತ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ನಿಮಜ್ಜನಕ್ಕೆ ಸಮಯ ಹೆಚ್ಚು ಕಡಿಮೆ ಆಗುತ್ತೆ. ಇಂದು ಹುಬ್ಬಳ್ಳಿ ಕಾ ರಾಜ, ಮಹಾರಾಜ, ದುರ್ಗದ ಬೈಲ್ ಸೇರಿದಂತೆ ಪ್ರಮುಖ ಗಣೇಶ ಮೂರ್ತಿಗಳು ನಿಮಜ್ಜನ ಆಗುತ್ತವೆ. ಹೀಗಾಗಿ ಜನದಟ್ಟಣೆ ಬಹಳಷ್ಟು ಇರುತ್ತೆ. ಜನ ಸಹಕರಿಸಬೇಕು ಎಂದು ಪೊಲೀಸ್​ ಕಮಿಷನರ್ ಇದೇ ವೇಳೆ ಮನವಿ ಮಾಡಿದ್ರು.

ಇದನ್ನೂ ಓದಿ: ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ರೈತ ಗಲ್ಲಿ ಹವಾ; ಮನೆ ಮುಂದೆ ಸರತಿ ಸಾಲಿನಲ್ಲಿ ಬೆನಕನ ದರ್ಶನ - Raitha Galli Ganeshotsava

Last Updated : Sep 17, 2024, 7:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.