ETV Bharat / bharat

ಅಕ್ಟೋಬರ್​ 1 ರವರೆಗೆ ದೇಶಾದ್ಯಂತ ಬುಲ್ಡೋಜರ್​​ ಕಾರ್ಯಾಚರಣೆಗೆ ತಡೆ: ಸುಪ್ರೀಂ ಮಹತ್ವದ​ ಆದೇಶ - SC Halts Bulldozer Justice

author img

By ETV Bharat Karnataka Team

Published : Sep 17, 2024, 5:36 PM IST

ಅಕ್ಟೋಬರ್ 1ರವರೆಗೆ ಭಾರತದಾದ್ಯಂತ ಬುಲ್ಡೋಜರ್ ಕಾರ್ಯಾಚರಣೆ ನಡೆಸದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಜೊತೆಗೆ ಕೋರ್ಟ್ ಅನುಮತಿ ಇಲ್ಲದೇ ಬುಲ್ಡೋಜರ್ ಕಾರ್ಯಾಚರಣೆ ನಡೆಸಬಾರದು ಎಂದು ಆದೇಶಿಸಿದೆ.

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ (ETV Bharat)

ನವದೆಹಲಿ: ಅಕ್ಟೋಬರ್ 1 ರವರೆಗೆ ದೇಶಾದ್ಯಂತ ಬುಲ್ಡೋಜರ್ ಕಾರ್ಯಾಚರಣೆ ನಡೆಸದಂತೆ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಒಂದು ವೇಳೆ ಅಕ್ರಮವಾಗಿ ನೆಲಸಮ ಕಾರ್ಯ ನಡೆದ ನಿದರ್ಶನ ಇದ್ದರೆ ಅದು ಸಂವಿಧಾನ ವಿರೋಧಿ ನೀತಿ ಆಗಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಕಟ್ಟಡಗಳನ್ನು ಕೆಡವಲು ಆತುರ ಏಕೆ?: ದೇಶದ ವಿವಿಧ ಭಾಗಗಳಲ್ಲಿ ಬುಲ್ಡೋಜರ್ ನ್ಯಾಯ ವಿರುದ್ಧದ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ಕೋರ್ಟ್​ ಅನುಮತಿಯಿಲ್ಲದೇ ದೇಶದಲ್ಲಿ ಯಾವುದೇ ನೆಲಸಮ ಕಾರ್ಯ ನಡೆಯಬಾರದು. 2022ರಲ್ಲಿ ನೋಟಿಸ್ ನೀಡಿದಾಗಿಯೂ ಕಟ್ಟಡಗಳನ್ನು ಕೆಡವಲು ಆತುರ ಏಕೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು.

ಮುಂದಿನ ವಿಚಾರಣೆಯ ದಿನಾಂಕದವರೆಗೆ ನ್ಯಾಯಾಲಯದ ಅನುಮತಿಯಿಲ್ಲದೇ ಯಾವುದೇ ನೆಲಸಮ ಕಾರ್ಯ ಮಾಡಬಾರದು ಎಂದು ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದರು. ಇದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು.

"ಹೊರಗಿನ ದನಿ ನ್ಯಾಯಾಲಯದ ಮೇಲೆ ಪ್ರಭಾವ ಬೀರುವುದಿಲ್ಲ ಮತ್ತು ಯಾವ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆ ಬಗ್ಗೆ ನ್ಯಾಯಾಲಯ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಅಕ್ರಮ ಧ್ವಂಸ ಪ್ರಕರಣಗಳು ಕಂಡುಬಂದರೆ ಅದು ಸಂವಿಧಾನದ ನೀತಿಗೆ ವಿರುದ್ಧವಾಗಿದೆ" ಎಂದು ನ್ಯಾಯಮೂರ್ತಿ ವಿಶ್ವನಾಥನ್ ಸ್ಪಷ್ಟಪಡಿಸಿದರು.

ನ್ಯಾಯಾಲಯದ ಅನುಮತಿಯಿಲ್ಲದೇ ಯಾವುದೇ ನೆಲಸಮವನ್ನು ಮಾಡಬಾರದು ಎಂದು ಹೇಳಿದ ನ್ಯಾಯಮೂರ್ತಿ ಗವಾಯಿ, ಸಾರ್ವಜನಿಕ ರಸ್ತೆ, ಫುಟ್‌ಪಾತ್‌ಗಳು, ರೈಲ್ವೆ ಮಾರ್ಗಗಳು, ಜಲಮೂಲಗಳು ಇತ್ಯಾದಿಗಳಲ್ಲಿ ಅನಧಿಕೃತ ನಿರ್ಮಾಣಗಳಿದ್ದರೆ ಅವುಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.

"ನಾವು ಅನಧಿಕೃತ ನಿರ್ಮಾಣಗಳ ಕುರಿತು ಅಡ್ಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಆದರೆ ಕಾರ್ಯಾಂಗವು ನ್ಯಾಯಾಧೀಶರಾಗಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು. ಬಳಿಕ "ಸ್ವರ್ಗ ಮೇಲಿಂದ ಏನೂ ಬೀಳುವುದಿಲ್ಲ" ಎಂದು ಹೇಳಿದ ಪೀಠ, ಅಕ್ಟೋಬರ್ 1 ರವರೆಗೆ ನೆಲಸಮವನ್ನು ನಡೆಸದಂತೆ ಸೂಚನೆ ನೀಡಿತು.

ಸೆಪ್ಟೆಂಬರ್ 2 ರಂದು ಸುಪ್ರೀಂ ಕೋರ್ಟ್, ಬುಲ್ಡೋಜರ್ ನ್ಯಾಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಪ್ಯಾನ್-ಇಂಡಿಯಾ ಆಧಾರದ ಮೇಲೆ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಹೇಳಿತ್ತು.

ಇದನ್ನೂ ಓದಿ: ನಟಿ ಕಾದಂಬರಿ 'ಅಕ್ರಮ ಬಂಧನ': ಅಮಾನತುಗೊಂಡಿರುವ ಮೂವರು ಐಪಿಎಸ್ ಅಧಿಕಾರಿಗಳ ವಿಚಾರಣೆ ಸಾಧ್ಯತೆ - Illegal Arrest Of Actress case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.