ಕೊಳ್ಳೇಗಾಲ(ಚಾಮರಾಜನಗರ) : ಪತಿ ವಿರುದ್ಧ ಪತ್ನಿ ಪೊಲೀಸರಿಗೆ ಕಿರುಕುಳ ದೂರು ನೀಡಿದ್ದ ಹಿನ್ನೆಲೆ, ಬಂಧನ ಭೀತಿಗೊಳಗಾದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಾಂಬಳ್ಳಿಯಲ್ಲಿ ನಡೆದಿದೆ. ಪಟ್ಟಣದ ನೂರ್ ಮೊಹಲ್ಲಾ ನಿವಾಸಿ ಸೈಯದ್ ಇರ್ಫಾನ್ (45) ನೇಣು ಬಿಗಿದು ಸಾವನ್ನಪ್ಪಿರುವ ದುರ್ದೈವಿ.
ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ: ಸ್ನೇಹಿತ ಸೈಮನ್ ನೀಡಿದ ದೂರಿನಲ್ಲೇನಿದೆ?
ಘಟನೆ : ಕಳೆದ ಎಂಟು ದಿನಗಳ ಹಿಂದೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ಮೃತ ಸೈಯದ್ ಇರ್ಫಾನ್ ಅವರ ಪತ್ನಿಯು, ನನ್ನ ಗಂಡ ಸೇರಿದಂತೆ ಆತನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು.
ಬಳಿಕ ಬಂಧನ ಭೀತಿಯಿಂದ ಇರ್ಫಾನ್ ಮಾಂಬಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದರು. ಆದ್ರೆ, ಇಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮೃತ ಸೈಯದ್ ಇರ್ಫಾನ್ ಅವರ ಪುತ್ರ ಮಾಂಬಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ