ಚಾಮರಾಜಗರ: ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಜಿಂಕೆ ಬೇಟೆಯಾಡಿ ತಲೆ ಮರೆಸಿಕೊಡಿದ್ದ ಆರೋಪಿಯನ್ನ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ತಂಡ ಬಂಧಿಸಿದೆ.
ಹಗ್ಗದಹಳ್ಳ ಗ್ರಾಮದ ಕೃಷ್ಣ ಬಂಧಿತ ಆರೋಪಿ. ಈತ ಮತ್ತು ಸಹಚರರು ಏಪ್ರಿಲ್ 17ರಂದು ಮೂರು ಜಿಂಕೆಗಳನ್ನು ಬೇಟೆಯಾಡಿ, ಮಾಂಸ ಹಂಚಿಕೊಂಡಿದ್ದರು. ವಿಷಯ ತಿಳಿದ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 7 ಮಂದಿಯನ್ನ ಬಂಧಿಸಿದ್ದರು. ಒಬ್ಬ ತಲೆ ಮರೆಸಿಕೊಂಡಿದ್ದು, ಆತನನ್ನ ನಿನ್ನೆ ಬಂಧಿಸಲಾಗಿದೆ.