ಚಾಮರಾಜನಗರ: ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಇದೇ 14 - 16 ರವರೆಗೆ ಮಹಾಕುಂಭಮೇಳ ಪುಣ್ಯಸ್ನಾನ ನಡೆಯಲಿದ್ದು, ಈ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟದಿಂದ ಇಂದು ಜ್ಯೋತಿ ಯಾತ್ರೆ ಆರಂಭಗೊಂಡಿದೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಾಲೂರುಶ್ರೀ, ಸಚಿವರಾದ ನಾರಾಯಣಗೌಡ, ಕೆ.ಎನ್.ಗೋಪಾಲಯ್ಯ, ಹನೂರು ಶಾಸಕ ಆರ್.ನರೇಂದ್ರ ಮಲೆ ಮಹದೇಶ್ವರನಿಗೆ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು. ಇನ್ನು ಈ ಜ್ಯೋತಿ ಯಾತ್ರೆಯು ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮಕ್ಕೆ ಆಗಮಿಸಿಲಿದೆ.
ಇದನ್ನೂ ಓದಿ : ದೇವರ ಮೂರ್ತಿಗಾಗಿ ಬಡಿಗೆಯಿಂದ ಬಡಿದಾಟ.. ಗಡಿ ಗ್ರಾಮದಲ್ಲೊಂದು ವಿಚಿತ್ರ ಆಚರಣೆ