ETV Bharat / state

ಗುಂಡ್ಲುಪೇಟೆ ಕ್ವಾರಿ ದುರಂತ: ವರ್ಷದ ಬಳಿಕ ಪ್ರಮುಖ ಆರೋಪಿ ಬಂಧನ

author img

By

Published : Mar 29, 2023, 9:30 AM IST

Updated : Mar 29, 2023, 11:08 AM IST

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Etv Bharat
Etv Bharat

ಚಾಮರಾಜನಗರ: ಕಳೆದ ವರ್ಷ ಸಂಭವಿಸಿದ್ದ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣದ ಪ್ರಮುಖ ಆರೋಪಿ ವರ್ಷದ ಬಳಿಕ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಉಪಗುತ್ತಿಗೆ ಪಡೆದು ಕ್ವಾರಿ ನಡೆಸುತ್ತಿದ್ದ ಮಹಮ್ಮದ್ ಹಕೀಂ ಹಾಗೂ ಮಹಮ್ಮದ್ ಹಿಲಾಲ್ ಬಂಧಿತರು.

ಕಳೆದ ಒಂದು ವರ್ಷದಿಂದಲೂ ಹಕೀಂ‌ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ. ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಕೇರಳದ ಗುರುವಾಯೂರಿನಲ್ಲಿದ್ದ ಈತ ಹಾಗೂ ಗುಂಡ್ಲುಪೇಟೆ ಪಟ್ಟಣದಲ್ಲಿದ್ದ ಹಿಲಾಲ್‌ನ​ನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿ ಮಂಗಳವಾರ ರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳೆದ ವರ್ಷ ಮಾರ್ಚ್ 4 ರಂದು ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡದ ಕಲ್ಲುಕ್ವಾರಿ ಕುಸಿದು ಉತ್ತರ ಪ್ರದೇಶ ಮೂಲದ ಬಬ್ಲು, ಮೀರಜ್ ಹಾಗೂ ಸರ್ಫರಾಜ್ ಎಂಬ ಕಾರ್ಮಿಕರು ಕಲ್ಲಿನಡಿ ಸಿಲುಕಿ ಸಾವನ್ನಪ್ಪಿದ್ದರು‌. ಅವೈಜ್ಞಾನಿಕವಾಗಿ ಕ್ವಾರಿ ನಡೆಸಿರುವುದು ದುರಂತಕ್ಕೆ ಕಾರಣ ಎಂಬುದು ಪೊಲೀಸ್​ ತನಿಖೆಯಿಂದ ಗೊತ್ತಾಗಿತ್ತು.

ಇದನ್ನೂ ಓದಿ: ಶಾಲೆಯಿಂದ ಮಗನನ್ನು ಕರೆತಂದು ಭಿಕ್ಷೆ ಬೇಡಲು ಬಿಟ್ಟಿದ್ದ ಅಪ್ಪ.. ರಾತ್ರಿ ಮನೆಗೆ ಬಂದಾಗ ಮಗನನ್ನು ಇರಿದು ಕೊಂದ ತಂದೆ

ಎಡಿಸಿ ಸಹಿ ಪೋರ್ಜರಿ: ಪ್ರತ್ಯೇಕ ಪ್ರಕರಣದಲ್ಲಿ ಚಾಮರಾಜನಗರದ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಆನಂದ್ ಅವರ ಹೆಸರನ್ನು ಪೋರ್ಜರಿ ಮಾಡಿ 1 ಕೋಟಿ ರೂಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಚಾಮರಾಜನಗರ ಎಡಿಸಿ ಕಚೇರಿಯ ಡಿ ಗ್ರೂಪ್ ನೌಕರ ರಾಜೇಶ್ ಪೋರ್ಜರಿ ಮಾಡಿರುವ ಆರೋಪಿ.‌ ಜಿಲ್ಲಾಧಿಕಾರಿ ಅವರ ಗ್ರಾಮೀಣ ರಸಪ್ರಶ್ನೆ ಕಾರ್ಯಕ್ರಮದ ಬ್ಯಾಂಕ್ ಖಾತೆಯಿಂದ ಎಡಿಸಿ ಸಹಿಯನ್ನು ರಾಜೇಶ್ ನಕಲಿಸಿ 1 ಕೋಟಿ ರೂ.ಗೂ ಅಧಿಕ ಹಣವನ್ನು ತನ್ನ ಖಾತೆಗೆ ಮತ್ತು ಇತರರ ಖಾತೆಗೆ ಈತ ವರ್ಗಾವಣೆ ಮಾಡಿದ್ದಾನೆ ಎನ್ನಲಾಗಿದೆ.

ಪ್ರಕರಣದ ಸಂಬಂಧ ಬೇಜವಾಬ್ದಾರಿ ಆರೋಪದ ಮೇಲೆ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ‌. 2021 ರಿಂದಲೂ ಈ ಅವ್ಯವಹಾರ ನಡೆಯುತ್ತಿದೆ ಎನ್ನಲಾಗಿದ್ದು, ಇಷ್ಟು ವರ್ಷಗಳಾದರೂ‌ ಆಡಿಟ್​​ನಲ್ಲಿ ಇದು ಬೆಳಕಿಗೆ ಬರಲಿಲ್ಲವೇ? ಜೊತೆಗೆ ಒಬ್ಬ ಡಿ ಗ್ರೂಪ್ ನೌಕರನಷ್ಟೇ ಈ ಅವ್ಯವಹಾರ ನಡೆಸಿದ್ದಾನೆಯೇ? ಬೇರೆಯವರ ಕುಮ್ಮಕ್ಕು ಇಲ್ಲವೇ ಎಂಬ ಸಾಕಷ್ಟು ಅನುಮಾನದ ಮೇಲೆ ತನಿಖೆ ನಡೆಯುತ್ತಿದೆ.

ಸದ್ಯ, ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಆರೋಪಿ ರಾಜೇಶ್​​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ, ತನಿಖೆ ಪೂರ್ಣಗೊಂಡ ಬಳಿಕ ಅವ್ಯವಹಾರದ ಆಳ-ಅಗಲ ತಿಳಿಯಲಿದೆ ಎಂದು ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೊ ತಿಳಿಸಿದ್ದಾರೆ.

ಗೃಹಿಣಿ ಸಾವು : ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಶವ ಪತ್ತೆಯಾದ ಘಟನೆ ಎರಡು ದಿನಗಳ ಹಿಂದೆ ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ಮಹೇಶ್ ಎಂಬುವರ ಪತ್ನಿ ಶಾಲಿನಿ (22) ಮೃತಪಟ್ಟಿದ್ದು, ಮೃತದೇಹವು ಮನೆಯ ಸಮೀಪದ ಬಾವಿಯಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: ಪ್ರತಿಷ್ಠಿತ ಕಾಲೇಜಿನ ಬಳಿ ಗಾಂಜಾ ಮಾರಾಟ: ಆನೇಕಲ್‌ನಲ್ಲಿ ಇಬ್ಬರ ಬಂಧನ

Last Updated : Mar 29, 2023, 11:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.