ಚಾಮರಾಜನಗರ: ಒಂದು ದಿನದ ಅಂತರದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. 15 ವರ್ಷದ ಬಾಲಕಿ ಹಾಗೂ 29 ವರ್ಷದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಈ ವಿಚಾರ ಮನೆಯವರಿಗೂ ತಿಳಿದಿತ್ತು. ಜೊತೆಗೆ ದೂರದ ಸಂಬಂಧಿಗಳಾಗಿದ್ದರಿಂದ ಇವರಿಬ್ಬರ ಪ್ರೀತಿಗೆ ಮನೆಯವರು ತಕರಾರು ಮಾಡಿರಲಿಲ್ಲ ಎಂದು ಬಾಲಕಿಯ ದೊಡ್ಡಪ್ಪ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಸೋಮವಾರ ಶೌಚಾಲಯಕ್ಕೆ ತೆರಳಿದ್ದ ಬಾಲಕಿ ಫೋನಿನಲ್ಲಿ ಯುವಕನೊಂದಿಗೆ ಮಾತನಾಡಿದ್ದಾಳೆ. ಇದಾದ ಬಳಿಕ ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿ ಮೃತಪಟ್ಟಿದ್ದಾಳೆ. ಇದರಿಂದ ತೀವ್ರವಾಗಿ ಮನನೊಂದ ಯುವಕ ಕುರಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡು ನೇಣು ಬಿಗಿದುಕೊಂಡು ಅಸುನೀಗಿದ್ದಾನೆ.
ಇದನ್ನೂ ಓದಿ: ಇಳಿಕೆ ಕಂಡ ಕೊರೊನಾ ಕೇಸ್: 14,366 ಮಂದಿಗೆ ಕೋವಿಡ್ ದೃಢ, 58 ಸಾವು
ರಾಮಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ