ಚಾಮರಾಜನಗರ: ಕಾಡಾನೆ ಹಿಂಡು ಜಮೀನಿಗೆ ಲಗ್ಗೆ ಇಟ್ಟ ಪರಿಣಾಮ ಅಪಾರ ಬೆಳೆ ನಷ್ಟ ಜೊತೆಗೆ ಕೃಷಿ ಚಟುವಟಿಕೆಯ ಸಾಧನ-ಸಲಕರಣೆಗಳು ಧ್ವಂಸವಾಗಿರುವ ಘಟನೆ ಹನೂರು ತಾಲೂಕಿನ ಮಾಲಾಪುರ ಎಂಬಲ್ಲಿ ನಡೆದಿದೆ.
ಕೃಷ್ಣೇಗೌಡ ಎಂಬವರಿಗೆ ಸೇರಿದ ಸರ್ವೆನಂಬರ್ 459 ಹಾಗೂ 456 ಸರ್ವೆ ನಂಬರ್ ಜಮೀನಿನಲ್ಲಿ ಈರುಳ್ಳಿ, ಬಾಳೆ, ಅರಿಶಿನ, ಸೂರ್ಯಕಾಂತಿ ಬೆಳೆ ಹಾಕಲಾಗಿದ್ದು ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಫಸಲು ನಾಶಪಡಿಸಿದಲ್ಲದೆ ಕೃಷಿ ಪರಿಕರಗಳನ್ನು ತುಳಿದು ಧ್ವಂಸ ಮಾಡಿದೆ.
ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಲಕ್ಷಾಂತರ ರೂ. ನಷ್ಟವಾಗಿದ್ದು ಸೂಕ್ತ ಪರಿಹಾರ ಕೊಡಬೇಕೆಂದು ರೈತ ಅಳಲು ತೋಡಿಕೊಂಡಿದ್ದಾರೆ.