ETV Bharat / state

ಅನ್​ಲಾಕ್​ಗೆ KSRTC ತಯಾರಿ: ಚಾಮರಾಜನಗರದಲ್ಲಿ ನಡೆದಿದೆ ಭರದ ಸಿದ್ಧತೆ

ಬಸ್​ಗಳು ನಿಂತಲ್ಲೇ ನಿಂತಿರುವುದರಿಂದ ಬಸ್​ಗಳಿಗೆ ಗ್ರೀಸ್, ಏರ್ ತುಂಬಿಸುವುದು ಮಾಡಿ ವಾಟರ್ ಸರ್ವಿಸ್ ಮಾಡಲಾಗುತ್ತಿದೆ. ಕೊರೊನಾ ಜಾಗೃತಿಯ ಸ್ಟಿಕರ್​ಗಳನ್ನು ಅಂಟಿಸಿ, ಸ್ಯಾನಿಟೈಸರ್ ಬಾಟಲ್​ಗಳನ್ನು ಪ್ರತಿ ಬಸ್​ನಲ್ಲಿಡಲಾಗುತ್ತಿದೆ.

author img

By

Published : Jun 9, 2021, 3:24 PM IST

ksrtc prepares for unlock in chamarajanagara

ಚಾಮರಾಜನಗರ: ಎಲ್ಲವೂ ಅಂದುಕೊಂಡಂತೆ ಆದರೆ ಇದೇ 15ರಿಂದ ಅನ್​ಲಾಕ್ ಜಾರಿಯಾಗಲಿರುವುದರಿಂದ ಕೆಎಸ್ಆರ್​ಟಿಸಿ ಚಾಮರಾಜನಗರ ವಿಭಾಗವೂ ಕೂಡ ಬಸ್​ಗಳನ್ನು ರಸ್ತೆಗಿಳಿಸಲು ಸಕಲ ತಯಾರಿ ಮಾಡಿಕೊಂಡಿದೆ.

ಚಾಮರಾಜನಗರ ಡಿಪೋದಲ್ಲಿ ಸದ್ಯ 132 ಬಸ್​ಗಳಿದ್ದು, ಸ್ಥಳೀಯವಾಗಿ ವಾಸಿಸುತ್ತಿರುವ ಚಾಲಕರು, ನಿರ್ವಾಹಕರು ಮತ್ತು 15ಕ್ಕೂ ಹೆಚ್ಚು ಮೆಕಾನಿಕಲ್​ಗಳನ್ನು ಡಿಪೋಗೆ ಕರೆಯಿಸಿಕೊಂಡು ಬಸ್​ ಸರ್ವಿಸ್ ಮಾಡಿಸಿ ರಸ್ತೆಗಿಳಿಸಲು ಸನ್ನದ್ಧಗೊಳಿಸಲಾಗುತ್ತಿದೆ.

ಅನ್​ಲಾಕ್​ಗೆ KSRTC ತಯಾರಿ

ಕಳೆದ ಎರಡು ತಿಂಗಳುಗಳಿಂದ ಬಸ್​ಗಳು ನಿಂತಲ್ಲೇ ನಿಂತಿರುವುದರಿಂದ ಬಸ್​ಗಳಿಗೆ ಗ್ರೀಸ್, ಏರ್ ತುಂಬಿಸುವುದು ಮಾಡಿ ವಾಟರ್ ಸರ್ವಿಸ್ ಮಾಡಲಾಗುತ್ತಿದೆ. ದಿನವೊಂದಕ್ಕೆ 20-25 ಬಸ್​ಗಳಿಗೆ ಸರ್ವಿಸ್ ಮಾಡುತ್ತಿದ್ದು, 15ರವರೆಗೆ ಬಸ್​ಗಳು ರಸ್ತೆಗಿಳಿಯಲು ಸನ್ನದ್ಧಗೊಳ್ಳುವ ವಿಶ್ವಾಸ ಇಲ್ಲಿನ ಸಿಬ್ಬಂದಿಗಳಾಗಿದ್ದಾರೆ.

ಕೊರೊನಾ ಜಾಗೃತಿಯ ಸ್ಟಿಕರ್​ಗಳನ್ನು ಅಂಟಿಸಿ, ಸ್ಯಾನಿಟೈಸರ್ ಬಾಟಲ್​ಗಳನ್ನು ಪ್ರತಿ ಬಸ್​ನಲ್ಲಿಡಲಾಗುತ್ತಿದೆ. ಬರೋಬ್ಬರಿ 2 ತಿಂಗಳ ಬಳಿಕ ಸೇವೆ ನೀಡಲು ಸಾರಿಗೆ ಇಲಾಖೆ ಸಿಬ್ಬಂದಿ ಕಾತರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.