ETV Bharat / state

ಕೊಳ್ಳೇಗಾಲ : ಮದುವೆಯಾದ 9ನೇ ದಿನಕ್ಕೆ ಪತ್ನಿ ಕೊಂದ ಪೊಲೀಸನಿಗೆ ಜೀವಾವಧಿ ಶಿಕ್ಷೆ

ಫೆ.22ರಂದು ಗದ್ದೆ ನೋಡಲು ಹೋಗೋಣ ಬಾ ಎಂದು ಪತ್ನಿಯನ್ನು ಕರೆದೊಯ್ದು ಬಾವಿಗೆ ತಳ್ಳಿ ಕೊಲೆ ಮಾಡಿದ್ದ. ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ. ದಂಡವನ್ನು ನ್ಯಾ‌.ಲೋಕಪ್ಪ ವಿಧಿಸಿದ್ದಾರೆ. ಈ ಸಂಬಂಧ ಮೃತಳ ತಾಯಿ ಸಾವಿತ್ರಮ್ಮ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಉಷಾ ವಾದ ಮಂಡಿಸಿದ್ದರು..

Kollegala police station
ಕೊಳ್ಳೇಗಾಲ ಪೊಲೀಸ್​ ಠಾಣೆ
author img

By

Published : Sep 24, 2021, 10:09 PM IST

ಚಾಮರಾಜನಗರ : ವಿವಾಹವಾದ ಕೇವಲ 9ನೇ ದಿನಕ್ಕೆ ವರದಕ್ಷಿಣೆ ಕೊಡಲಿಲ್ಲವೆಂದು ಪತ್ನಿ ಕೊಂದ ಪೊಲೀಸ್ ಕಾನ್ಸ್​ಟೇಬಲ್​​ಗೆ​ ಕೊಳ್ಳೇಗಾಲ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಲೋಕಪ್ಪ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ತಾಲೂಕಿನ ನಾಗವಳ್ಳಿ ಗ್ರಾಮದ ವೆಂಕಟೇಶ್ ಶಿಕ್ಷೆಗೊಳಗಾದ ಅಪರಾಧಿ. ಈತ ವೃತ್ತಿಯಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಆಗಿದ್ದು, ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದ ಸಾವಿತ್ರಮ್ಮ ಎಂಬುವರ ಪುತ್ರಿ ದಿವ್ಯಾ ಎಂಬಾಕೆಯನ್ನು 2017ರ ಫೆಬ್ರವರಿ 2ರಂದು ವಿವಾಹ ಮಾಡಿಕೊಂಡಿದ್ದ.

ಮದುವೆಗೂ ಮುನ್ನ ಹುಡುಗಿಗೆ ಮಾಂಗಲ್ಯ ಸರ, ಹುಡುಗನಿಗೆ ಚಿನ್ನದ ಉಂಗುರ, 2.5 ಲಕ್ಷ ವರದಕ್ಷಿಣೆ ಕೊಡಲು ಒಪ್ಪಂದ ಮಾಡಿಕೊಂಡು ಅದರಂತೆ ವಿವಾಹಕ್ಕೂ ಮುನ್ನ ಮದುಮಗನಿಗೆ ₹2 ಲಕ್ಷ ಹಣ, ಚಿನ್ನದ ಉಂಗುರ ನೀಡಲಾಗಿತ್ತು. ಮದುವೆಯಾದ ಮೂರೇ ದಿನಕ್ಕೆ ಮಾಂಗಲ್ಯ ಸರ, ಉಳಿದ ಹಣ‌ 50 ಸಾವಿರ ರೂ. ಹಣವನ್ನು ತರುವಂತೆ ಕಿರುಕುಳ ಕೊಟ್ಟು ಫೆ. 20ರಂದು ಹೆಂಡತಿಯನ್ನು ತವರಿಗೆ ಕಳುಹಿಸಿದ್ದ.

ಫೆ.22ರಂದು ಗದ್ದೆ ನೋಡಲು ಹೋಗೋಣ ಬಾ ಎಂದು ಪತ್ನಿಯನ್ನು ಕರೆದೊಯ್ದು ಬಾವಿಗೆ ತಳ್ಳಿ ಕೊಲೆ ಮಾಡಿದ್ದ. ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ. ದಂಡವನ್ನು ನ್ಯಾ‌.ಲೋಕಪ್ಪ ವಿಧಿಸಿದ್ದಾರೆ. ಈ ಸಂಬಂಧ ಮೃತಳ ತಾಯಿ ಸಾವಿತ್ರಮ್ಮ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಉಷಾ ವಾದ ಮಂಡಿಸಿದ್ದರು.

ಇದನ್ನೂ ಓದಿ: ಕಲಬುರಗಿಯಲ್ಲಿ ಬೀದಿ ನಾಯಿ ವಿಚಾರಕ್ಕೆ ಜಗಳ.. ಯುವಕನ ಕೊಲೆಯಲ್ಲಿ ಅಂತ್ಯ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.