ETV Bharat / state

ಗಡಿ ಜಿಲ್ಲೆಯಲ್ಲಿ ಗಮನಸೆಳೆದ ಗಾಳಿಪಟ ಉತ್ಸವ

ಚಾಮರಾಜನಗರ ಜಿಲ್ಲೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಗಾಳಿಪಟ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಗಾಳಿಪಟ ಹಾರಿಸುವ ಮೂಲಕ ಉದ್ಘಾಟಿಸಿದರು.

kite festival
ಗಾಳಿಪಟ ಉತ್ಸವ
author img

By

Published : Jan 26, 2020, 6:38 PM IST

ಚಾಮರಾಜನಗರ: ಜಿಲ್ಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂಯುಕ್ತವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಗಾಳಿಪಟ ಉತ್ಸವವನ್ನು ಸಚಿವ ಸುರೇಶ್ ಕುಮಾರ್ ಗಾಳಿಪಟ ಹಾರಿಸುವ ಮೂಲಕ ಉದ್ಘಾಟಿಸಿದರು.

2007ರ ಬಳಿಕ ಎರಡನೇ ಬಾರಿ ಜಿಲ್ಲಾ ಕೇಂದ್ರದಲ್ಲಿ ಆಯೋಜನೆಗೊಂಡ ಉತ್ಸವ ತಕ್ಕಮಟ್ಟಿಗೆ ಯಶಸ್ಸಾಗಿದ್ದು, ಗಾಳಿಯ ವೇಗದ ಚಲನೆ ಇಲ್ಲದಿದ್ದರಿಂದ ಸ್ಪರ್ಧಿಗಳು ನಿರಾಸೆಗೊಂಡರು. 12 ವರ್ಷದೊಳಗಿನ ಕಿರಿಯರಿಗೆ, 13-21 ವರ್ಷದ ಕಿಶೋರರಿಗೆ, 21 ವರ್ಷ ಮೇಲ್ಪಟ್ಟವರಿಗೆ ಹಾಗೂ 22 ವರ್ಷದ ಮೇಲ್ಪಟ್ಟ 5 ಜನರ ತಂಡಗಳಂತೆ 4 ವಿಭಾಗಗಳಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 80 ಮಂದಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.‌

ಗಮನಸೆಳೆದ ರಾಜ್ಯಮಟ್ಟದ ಗಾಳಿಪಟ ಉತ್ಸವ

ಈ ಉತ್ಸವದಲ್ಲಿ 10-12 ಅಡಿ ಎತ್ತರದ, ಎಂಟು-ಹತ್ತು ಜನ ಎತ್ತಿ ಹಿಡಿಯುವ ಗಾಳಿಪಟಗಳು ಕಾಣಿಸಿಕೊಂಡವು. ಈ ಮೊದಲ ಯಶಸ್ಸಿನ ನಂತರ ಗಾಳಿಪಟ ಉತ್ಸವ ಮತ್ತಷ್ಟು ವಿಸ್ತಾರವಾಯಿತು. ಇದುವರೆಗೆ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ ಮೊದಲಾದ ಜಿಲ್ಲೆಗಳಲ್ಲಿ ಆಯೋಜನೆಗೊಂಡಿದ್ದು, ಉತ್ತಮ ಜನಮನ್ನಣೆ ಗಳಿಸಿದೆ.

ಗಡಿ ಜಿಲ್ಲೆಯಲ್ಲಿ ನಡೆದ ಗಾಳಿಪಟ ಉತ್ಸವ ಜಿಲ್ಲೆಯ ಜನರನ್ನು ಗಾಳಿಪಟ ಸಂಸ್ಕೃತಿಯತ್ತ ಸೆಳೆಯಿತು.

Intro:ಗಡಿಜಿಲ್ಲೆಯಲ್ಲಿ ಪಟಪಟ ಗಾಳಿಪಟ...ಗಮನಸೆಳೆದ ಉತ್ಸವ, ತಕ್ಕಮಟ್ಟಿಗೆ ಯಶಸ್ಸು!

ಚಾಮರಾಜನಗರ: ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂಯುಕ್ತವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಗಾಳಿಪಟ ಉತ್ಸವಕ್ಕೆ ಸಚಿವ ಸುರೇಶ್ ಕುಮಾರ್ ಗಾಳಿಪಟ ಹಾರಿಸುವ ಮೂಲಕ ಉದ್ಘಾಟಿಸಿದರು.

Body:2007 ರ ಬಳಿಕ ಎರಡನೇ ಬಾರಿ ಜಿಲ್ಲಾಕೇಂದ್ರದಲ್ಲಿ ಆಯೋಜನೆಗೊಂಡ ಉತ್ಸವ ತಕ್ಕಮಟ್ಟಿಗೆ ಯಶಸ್ಸಾಗಿದ್ದು ಗಾಳಿಯ ವೇಗದ ಚಲನೆ ಇಲ್ಲದಿದ್ದರಿಂದ ಸ್ಪರ್ಧಿಗಳು ನಿರಾಸೆ ಅನುಭವಿಸಿದರು.

12 ವರ್ಷದೊಳಗಿನ ಕಿರಿಯರಿಗೆ, 13-21 ವರ್ಷದ ಕಿಶೋರರಿಗೆ, 21 ವರ್ಷ ಮೇಲ್ಪಟ್ಟವರಿಗೆ ಹಾಗೂ 22 ವರ್ಷದ ಮೇಲ್ಪಟ್ಟ 5 ಜನರ ತಂಡಗಳಂತೆ 4 ವಿಭಾಗಗಳಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಒಟ್ಟು 80 ಮಂದಿ ಪಾಲ್ಗೊಂಡಿದ್ದರು.‌ಇವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನನ್ನು ವಿತರಿಸಲಾಯಿತು.

ಗಾಳಿಪಟ ಉತ್ಸವಕ್ಕೆ ನಾಂದಿ ಹಾಡಿದವರು ಖ್ಯಾತ ಜನಪದ ಲೇಖಕ ನಾಡೋಜ ಎಚ್‌.ಎಲ್‌.ನಾಗೇಗೌಡರು. ಗಾಳಿಪಟ ಸಂಸ್ಕೃತಿ ಮರೆಯಾಗುತ್ತಿದ್ದ ಸಂದರ್ಭದಲ್ಲಿ, ಅದನ್ನು ಮುನ್ನಲೆಗೆ ತರುವ ಉದ್ದೇಶದಿಂದ ನಾಗೇಗೌಡರು 1987-88ರ ಅವಧಿಯಲ್ಲಿ ಗಾಳಿಪಟ ಉತ್ಸವ ಆರಂಭಿಸಿದರು. ಜತೆಗೆ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಯಿತು. 10-12 ಅಡಿ ಎತ್ತರದ, ಎಂಟು-ಹತ್ತು ಜನ ಎತ್ತಿ ಹಿಡಿಯುವ ಗಾಳಿಪಟಗಳು, ಈ ಉತ್ಸವದಲ್ಲಿ ಪಾಲ್ಗೊಂಡವು. ಈ ಮೊದಲ ಯಶಸ್ಸಿನ ನಂತರ ಗಾಳಿಪಟ ಉತ್ಸವ ಮತ್ತಷ್ಟು ವಿಸ್ತಾರವಾಯಿತು. ಇದುವರೆಗೆ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ ಮೊದಲಾದ ಜಿಲ್ಲೆಗಳಲ್ಲಿ ಆಯೋಜನೆಗೊಂಡಿದ್ದು, ಉತ್ತಮ ಜನಮನ್ನಣೆ ಗಳಿಸಿದೆ. ಪ್ರತಿ ವರ್ಷ ನಾನಾ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡಿದ್ದಾರೆ.

ಆಷಾಢದಲ್ಲಿ ಆಯೋಜಿಸಿ: ಗಾಳಿವೇಗ ಹೆಚ್ಚಿರುವುದು ಮತ್ತು ಶ್ರೀಸಾಮಾನ್ಯನೂ ಗಾಳಿಪಟವನ್ನು ಜೂನ್ ಹಾಗೂ ಜುಲೈನಲ್ಲಿ ಹಾರಿಸುವುದರಿಂದ ಆ ತಿಂಗಳಿನಲ್ಲೂ ಗಾಳಿಪಡ ಉತ್ಸವ ಆಯೋಜಿಸಬೇಕು. ಜನವರಿಯೊಂದಿಗೆ ಆಷಾಢ ಮಾಸದಲ್ಲೂ ಸ್ಪರ್ಧೆ ಆಯೋಜಿಸಿದರೆ ಕ್ರೀಡೆಗೊಂದು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದು ಬೆಂಗಳೂರಿನ ಗಾಳಿಪಟ ಸ್ಪರ್ಧಾಳು ಬಿ.ಕೆ.ರಾವ್ ಅಭಿಪ್ರಾಯಪಟ್ಟರು.

ಇನ್ನು, ಜಾನಪದ ಪರಿಷತ್ತಿನ ಅಧ್ಯಕ್ಷ ತಿಮ್ಮೆಗೌಡ ಪ್ರತಿಕ್ರಿಯಿಸಿ, ಗಡಿಜಿಲ್ಲೆಯಲ್ಲಿ ಗಾಳಿಪಟ ಉತ್ಸವ ನಡೆದಿರುವುದು ಯಶಸ್ವಿಯಾಗಿದೆ. ರಾಜ್ಯಮಟ್ಟದ ಜನಪದ ಉತ್ಸವವನ್ನು ಚಾಮರಾಜನಗರದಲ್ಲಿ ನಡೆಸುವ ಚಿಂತನೆ ಇದೆ ಎಂದು ತಿಳಿಸಿದರು.

Conclusion:ಒಟ್ಟಿನಲ್ಲಿ, ಗಡಿಜಿಲ್ಲೆಯಲ್ಲಿ ನಡೆದ ಗಾಳಿಪಟ ಉತ್ಸವ ತಕ್ಕಮಟ್ಟಿಗಿನ ಯಶಸ್ಸು ಕಂಡಿದ್ದು ಜಿಲ್ಲೆಯ ಜನರನ್ನು ಗಾಳಿಪಟ ಸಂಸ್ಕೃತಿಯತ್ತ ಸೆಳೆಯಿತು.

Bite- ವಿ.ಕೆ.ರಾವ್, ಗಾಳಿಪಟ ಸ್ಪರ್ಧಿ

ತಿಮ್ಮೆಗೌಡ, ಜಾನಪದ ಪರಿಷತ್ತಿನ‌ ಅಧ್ಯಕ್ಷ,--- sweater hakiruvav
ETV Bharat Logo

Copyright © 2024 Ushodaya Enterprises Pvt. Ltd., All Rights Reserved.