ಚಾಮರಾಜನಗರ: ಕರ್ನಾಟಕ-ಕೇರಳ ಗಡಿಯಾದ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ಪೋಸ್ಟ್ಗೆ ಮೈಸೂರು ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಗೆ ಪ್ರವೇಶಿಸುವ ವಾಹನಗಳ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಎಸ್ಪಿ ಸೇರಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಂತಾರಾಜ್ಯ ಪ್ರವಾಸಿಗರು, ಪ್ರಯಾಣಿಕರು ಜಿಲ್ಲೆ ಪ್ರವೇಶಿಸುವಾಗ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
ವರದಿಯ ನೈಜತೆ ಖಾತರಿಪಡಿಸಿಕೊಳ್ಳುವ ಸಂಬಂಧ ಸಂಪರ್ಕ ಸಾಧನಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಐಜಿಪಿ ತಿಳಿಸಿದರು.
ಕೇರಳ ಗಡಿ ಹಾಗೂ ಚಾಮರಾಜನಗರ ಜಿಲ್ಲೆಯ ಗಡಿಭಾಗಗಳ ವ್ಯಾಪ್ತಿಯಲ್ಲಿ ಬರುವ ಸೈಬರ್ ಕೆಫೆಗಳ ಮೇಲೆ ವಿಶೇಷವಾಗಿ ನಿಗಾವಹಿಸಿ ಆರ್ಟಿ-ಪಿಸಿಆರ್ ನಕಲಿ ವರದಿ ಪ್ರಕರಣಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಕೇರಳದಿಂದ ಜಿಲ್ಲೆಗೆ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಎಸ್ಓಪಿ ಪ್ರಕಾರ ಒಂದು ವಾರಗಳ ಅವಧಿಯ ಕ್ವಾರಂಟೈನ್ ಕಡ್ಡಾಯ ನಿಯಮ ಪರಿಪಾಲನೆಯ ಬಗ್ಗೆಯೂ ಅಧಿಕಾರಿಗಳು ಗಮನಹರಿಸಬೇಕು, ಚೆಕ್ಪೋಸ್ಟ್ನಲ್ಲಿ ಸಿಸಿಟಿವಿಗಳನ್ನು ಸುಸ್ಥಿಯಲ್ಲಿಟ್ಟಿರುವಂತೆಯೂ ಸೂಚಿಸಿದ್ದಾರೆ.
ಓದಿ: ಚೀನಾ ವಿರೋಧದ ನಡುವೆಯೂ Pfizer- Bio N-Tech ಲಸಿಕೆ ಆಮದು ಮಾಡಿಕೊಂಡು ತೈವಾನ್