ETV Bharat / state

ಕರ್ನಾಟಕಕ್ಕೆ ಮತ್ತೆ ಕೇರಳದಿಂದ ಕಸ: ಗಡಿಯಲ್ಲಿ ಲಾರಿ ಚಾಲಕನನ್ನು ಪೊಲೀಸರಿಗೆ ಹಿಡಿದೊಪ್ಪಿಸಿದ ಗ್ರಾಮಸ್ಥರು​ - ಈಟಿವಿ ಭಾರತ ಕನ್ನಡ

ಕೇರಳದಿಂದ ಅಕ್ರಮವಾಗಿ ಕಸ ತಂದು ಗುಂಡ್ಲುಪೇಟೆ ತಾಲೂಕಿನಲ್ಲಿ ಎಸೆಯಲು ಬಂದಿದ್ದ ಲಾರಿ ಚಾಲಕನನ್ನು ಹಿಡಿದು ಜನರು ಪೊಲೀಸರಿಗೆ ಒಪ್ಪಿಸಿದ್ದಾರೆ.

kerala
ಕರ್ನಾಟಕಕ್ಕೆ ಮತ್ತೆ ಕೇರಳದಿಂದ ಕಸ
author img

By

Published : Aug 10, 2023, 3:25 PM IST

ಚಾಮರಾಜನಗರ: ಕೇರಳದಿಂದ ಕರ್ನಾಟಕಕ್ಕೆ ಕಸ ತಂದು ಸುರಿಯುವ ಪ್ರವೃತ್ತಿ ಇನ್ನೂ ನಿಂತಿಲ್ಲ ಎಂಬ ಆರೋಪಕ್ಕೆ ಇಂದು ನಡೆದಿರುವ ಘಟನೆ ಸಾಕ್ಷಿಯಾಗಿದೆ. ಪಕ್ಕದ ರಾಜ್ಯದಿಂದ ಅಕ್ರಮವಾಗಿ ಕಸ ತಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಎಸೆಯಲು ಬಂದಿದ್ದ ಲಾರಿ ಚಾಲಕನನ್ನು ಹಿಡಿದು ಜನರು ಪೊಲೀಸರಿಗೆ ಒಪ್ಪಿಸಿದ್ದಾರೆ. ಜೊತೆಗೆ ಲಾರಿಯನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ಕೇರಳದಿಂದ ಗುಂಡ್ಲುಪೇಟೆಗೆ ಅಕ್ರಮವಾಗಿ ಪ್ಲಾಸ್ಟಿಕ್​ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತುಂಬಿಕೊಂಡು ತಂದಿದ್ದ ಲಾರಿ ಚಾಲಕನನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಮಾಡ್ರಹಳ್ಳಿ ರಸ್ತೆಯಲ್ಲಿ ಕೇರಳ ನೋಂದಣಿಯ ಲಾರಿಯೊಂದು ನಿಂತಿತ್ತು. ಇದರಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತ್ಯಾಜ್ಯದ ಮೂಟೆಗಳು ಇರುವುದನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತ್ಯಾಜ್ಯ ವಿಲೇವಾರಿಗೆ ಕೇರಳದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಿರುವ ಹಿನ್ನೆಲೆ, ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಕದ್ದು ಮುಚ್ಚಿ ಲಾರಿಗಳಲ್ಲಿ ತುಂಬಿಕೊಂಡು ಬಂದು ಗಡಿ ದಾಟಿಸಲಾಗುತ್ತದೆ. ತಾಲೂಕನ್ನು ಪ್ರವೇಶಿಸಿದ ನಂತರ ಸಂಚಾರ ಕಡಿಮೆಯಿರುವ ಪ್ರದೇಶ ಅಥವಾ ಕೇರಳ ರಾಜ್ಯದವರು ಮಾಲೀಕರಾಗಿರುವ ತಾಲೂಕಿನ ನಾನಾ ಕಡೆಗಳ ತೋಟಗಳಲ್ಲಿ ತೋಡು ಬಾವಿಗಳಲ್ಲಿ ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ ಎಂಬ ಗಂಭೀರ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಕಸದ ಗಾಡಿ ಹತ್ತಿದ ಪಾಲಿಕೆ ಆಯುಕ್ತ.. ತ್ಯಾಜ್ಯ ವಿಲೇವಾರಿ ಪರಿಶೀಲಿಸಿದ ಅಧಿಕಾರಿ

ಸದ್ಯ ಲಾರಿ ಮತ್ತು ಲಾರಿ ಚಾಲಕ ಗುಂಡ್ಲುಪೇಟೆ ಪೊಲೀಸರ ವಶದ್ದಲ್ಲಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಗುಂಡ್ಲುಪೇಟೆ ಪೊಲೀಸರು, "ಮಾಡ್ರಹಳ್ಳಿ ಗ್ರಾಮಸ್ಥರು ಕಸ ತುಂಬಿ ದುರ್ವಾಸನೆ ಬೀರುತ್ತಿದ್ದ ಲಾರಿಯನ್ನು ವಶಕ್ಕೆ ಕೊಟ್ಟಿದ್ದಾರೆ. ಆದರೆ, ಇದುವರೆಗೆ ಯಾರೂ ಕೂಡ ದೂರು ಕೊಟ್ಟಿಲ್ಲವಾದ್ದರಿಂದ ಪ್ರಕರಣ ದಾಖಲಾಗಿಲ್ಲ. ಪುರಸಭೆ ಆರೋಗ್ಯ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಬಂದು ಆಸ್ಪತ್ರೆ ತ್ಯಾಜ್ಯ ಎಂದು ಪ್ರಮಾಣಿಕರಿಸಬೇಕಿದ್ದು, ಸದ್ಯ ವಾಹನ ಹಾಗೂ ಚಾಲಕ ನಮ್ಮ ವಶದಲ್ಲೇ ಇದ್ದಾನೆ" ಎಂದು ತಿಳಿಸಿದ್ದಾರೆ.

''ಮಾಲಿನ್ಯ ಮುಕ್ತಂ ನವ ಕೇರಳಂ'': ಕೇರಳ ರಾಜ್ಯವನ್ನು ಕಸ ಮುಕ್ತವನ್ನಾಗಿಸುವ ''ಮಾಲಿನ್ಯ ಮುಕ್ತಂ ನವ ಕೇರಳಂ'' ಅಭಿಯಾನದ ಭಾಗವಾಗಿ ತ್ಯಾಜ್ಯ ಹಾಗೂ ಕಸ ಎಸೆಯುವಂತಹ ಕೃತ್ಯಗಳನ್ನು ವರದಿ ಮಾಡುವ ಎಲ್ಲರಿಗೂ ನಗದು ಬಹುಮಾನ ನೀಡುವುದಾಗಿ ಕೇರಳ ಸರ್ಕಾರ ಕೆಲವು ದಿನಗಳ ಹಿಂದೆ ಘೋಷಿಸಿತ್ತು. ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳ ಪಕ್ಕದಲ್ಲಿ ಕಸ ಎಸೆದವರ ಬಗ್ಗೆ ಮಾಹಿತಿ ನೀಡುವವರಿಗೆ 2,500 ರೂಪಾಯಿವರೆಗೂ ಬಹುಮಾನ ಬಗ್ಗೆ ನೀಡುವುದಾಗಿ ಆದೇಶ ಹೊರಡಿಸಿತ್ತು.

ಇದನ್ನೂ ಓದಿ: Waste dumping.. ಬೀದಿಗಳಲ್ಲಿ ಕಸ ಎಸೆಯುವವರ ಬಗ್ಗೆ ಮಾಹಿತಿ ನೀಡಿ.. ₹ 2,500 ವರೆಗೂ ಹಣ ಗಳಿಸಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.