ETV Bharat / state

ತೆಳ್ಳನೂರ ಕೊಂಡೋತ್ಸವ: ಮೈಮೇಲೆ ಕೆಂಡ ಸುರಿದುಕೊಂಡು ಭಕ್ತಿಯ ಪರಾಕಾಷ್ಠೆ

ತೆಳ್ಳನೂರು ಉರ್ಕಾತೇಶ್ವರಿ ಗ್ರಾಮದ ಕೊಂಡೋತ್ಸವದಲ್ಲಿ ಅರ್ಚಕ ಮೈಮೇಲೆ ಕೆಂಡ ಸುರಿದುಕೊಳ್ಳುವ ಪದ್ಧತಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.

kendotsava-in-tellanuru-at-chamarajanagara
ತೆಳ್ಳನೂರಲ್ಲಿ ಕೊಂಡೊತ್ಸವ
author img

By

Published : Mar 25, 2022, 10:59 PM IST

ಚಾಮರಾಜನಗರ: ಬಿಸಿಪಾತ್ರೆ ಮುಟ್ಟಿದರೆ ಛಾವಣಿ ಹಾರಿ ಹೋಗುವಷ್ಟು ಚೀತ್ಕರಿಸುವ ಜನರ ನಡುವೆ ನಿಗಿನಿಗಿ ಕೆಂಡವನ್ನು ಮೈಮೇಲೆ ಸುರಿದುಕೊಂಡು ಅರ್ಚಕ ಭಕ್ತಿ ಪರಾಕಾಷ್ಠೆ ಮೆರೆದರು. ಇಂಥದ್ದೊಂದು ವಿಶಿಷ್ಠ ಆಚರಣೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಹೋಬಳಿಯ ತೆಳ್ಳನೂರು ಉರ್ಕಾತೇಶ್ವರಿ ಗ್ರಾಮದಲ್ಲಿ ನಡೆಯಿತು. ಈ ವೇಳೆ ಅರ್ಚಕರು ಕೆಂಡವನ್ನು ಕೊಳಗದಲ್ಲಿ ಮೈಮೇಲೆ ಸುರಿದುಕೊಂಡು ನಂತರ ದೇವಿಗೂ ಅರ್ಪಿಸುತ್ತಾರೆ.

ತೆಳ್ಳನೂರಲ್ಲಿ ಕೊಂಡೋತ್ಸವ

ಈ ವಿಶಿಷ್ಟ ಆಚರಣೆ ಹೇಗೆ ಜಾರಿಗೆ ಬಂತು ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಎಲ್ಲಾ ಕೋಮಿನವರು ಒಗ್ಗಟ್ಟಾಗಿ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೊಂಡೋತ್ಸವದಲ್ಲಿ ದೇವಿ ಮಹಾತ್ಮೆಗೆ ಎಲ್ಲರೂ ತಲೆದೂಗುವಂತೆ ಮಾಡುತ್ತದೆ. ಹಸಿ ಗೊಬ್ಬಳಿ ಮರವನ್ನು ಅಂದೇ ಕತ್ತರಿಸಿ ತಂದು ಯಾವುದೇ ಪೆಟ್ರೋಲ್, ತೈಲ ಇಲ್ಲದೇ ಕೇವಲ ಕರ್ಪೂರದಲ್ಲೇ ಹೊತ್ತಿಸಿ ಕೆಂಡ ಮಾಡಲಾಗುತ್ತದೆ.

ಉರ್ಕಾತೇಶ್ವರಿ ವಿಷ ತೆಗೆಯುವ ದೇವತೆ ಎಂದೂ ಹೆಸರಾಗಿದ್ದು, ಈ ಊರಿನಲ್ಲಿ ಯಾರೂ ಹಾವು ಕಚ್ಚಿ ಮೃತಪಡುವುದಿಲ್ಲವಂತೆ. ವಿಷಜಂತುಗಳು ಕಚ್ಚಿದ ಕೂಡಲೇ ಉರ್ಕಾತೇಶ್ವರಿಗೆ ಬಂದು ನಮಿಸಿದರೆ ವಿಷವೆಲ್ಲ ಮಾಯವಾಗುತ್ತದೆ ಎಂಬುದು ಇಲ್ಲಿನ ಜನರ ಬಲವಾದ ನಂಬಿಕೆ.

ಇದನ್ನೂ ಓದಿ: ಚುನಾವಣೆ ಸುಧಾರಣೆ ಕುರಿತು ಚರ್ಚೆಗೆ 2 ದಿನ ಫಿಕ್ಸ್: ಸ್ಪೀಕರ್ ಕಾಗೇರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.