ಚಾಮರಾಜನಗರ: ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀಕ್ಷೇತ್ರ ಮಲೆಮಹಾದೇಶ್ವರ ಬೆಟ್ಟದಲ್ಲಿ ಮಹಾಜ್ಯೋತಿ ಬೆಳಗಿಸಲಾಯಿತು.
ಆನೆ ತಲೆದಿಂಬ ಹಾಗೂ ನಾಗಮಲೆ ನಡುವಿನ ನಡುಮಲೆಯ ದೀಪದ ಒಡ್ಡಿನಲ್ಲಿ 9 ಬಗೆಯ ಕಟ್ಟಿಗೆಗಳಿಂದ ಹೋಮ ಮಾಡಿ, ದೇಗುಲದಿಂದ ಉತ್ಸವಮೂರ್ತಿಯನ್ನು ದೀಪದ ಗಿರಿ ಒಡ್ಡುವಿಗೆ ತಂದು ಪೂಜೆ ಸಲ್ಲಿಸಲಾಯಿತು.
ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದ ಬೆಟ್ಟದಲ್ಲಿ ಸ್ವಾಮಿಗೆ ತೆಪ್ಪೋತ್ಸವ ನಡೆಸಲಾಯಿತು. ಇದೇ ವೇಳೆ, ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ದೇವರಿಗೆ ಬರೋಬ್ಬರಿ 690 ಚಿನ್ನದ ತೇರಿನ ಸೇವೆ ನಡೆಸಿದರು. ಸಾವಿರಾರು ಜನ ಸೇರಿ ದೇವರ ಕೃಪೆಗೆ ಪಾತ್ರರಾದರು.