ಚಾಮರಾಜನಗರ: ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ 2022ರ ಸಾಲಿನ ವಾರ್ಷಿಕ ಪ್ರಶಸ್ತಿಗೆ ಚಾಮರಾಜನಗರ ತಾಲೂಕಿನ ಗಂಗವಾಡಿಯ ವೀರಗಾಸೆ ಕಲಾವಿದ ಶಿವರುದ್ರಸ್ವಾಮಿ ಆಯ್ಕೆಯಾಗಿದ್ದಾರೆ.
ಜಿಲ್ಲೆಯಿಂದ ಆಯ್ಕೆಯಾಗಿರುವ ಶಿವರುದ್ರಸ್ವಾಮಿ ಅವರನ್ನು ಅಕಾಡೆಮಿ ಸದಸ್ಯ, ಚಾಮರಾಜನಗರ ಗಾಯಕ ಸಿ.ಎಂ. ನರಸಿಂಹಮೂರ್ತಿ ಅಭಿನಂದಿಸಿದ್ದಾರೆ.
ಗಂಗರ ಕಾಲದಿಂದ ಬಂದ ವಿದ್ಯೆ: ಶಿವರುದ್ರಸ್ವಾಮಿ ಅವರ ಕುಟುಂಬಕ್ಕೆ ವೀರಗಾಸೆ ಕಲೆಯು ಗಂಗರ ಕಾಲದಿಂದಲೂ ಬಂದಿದ್ದು ನೂರಾರು ವರ್ಷಗಳಿಂದಲೂ ಈ ಕುಟುಂಬ ವಂಶಪಾರಂಪರ್ಯವಾಗಿ ಬಂದಿರುವ ವೀರಗಾಸೆಯನ್ನು ಉಳಿಸಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಶಿವರುದ್ರಸ್ವಾಮಿ ಸತತ 2004 ರಿಂದ 2016ರ ವರೆಗೆ ಇವರು ಮೈಸೂರು ದಸರಾದಲ್ಲಿ ಜಾನಪದ ಕಲಾತಂಡದೊಂದಿಗೆ ಭಾಗಿಯಾಗಿ ಕಲೆ ಪ್ರದರ್ಶಿಸಿದ್ದಾರೆ. ಶಿವರುದ್ರಸ್ವಾಮಿ ಅವರು ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಇದನ್ನೂ ಓದಿ: ಬಾಕಿ ಪಾವತಿಸಿದ ತಕ್ಷಣ 5G ಸ್ಪೆಕ್ಟ್ರಮ್: ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ಸುನಿಲ್ ಮಿತ್ತಲ್