ETV Bharat / state

ರಾತ್ರಿ ಸಂಚಾರ ನಿರ್ಬಂಧ: ಕರ್ನಾಟಕ ತಮಿಳುನಾಡು ರೈತರಿಂದ ಬೃಹತ್ ಪ್ರತಿಭಟನೆ, ತಾಳವಾಡಿ ಬಂದ್

ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ದಿಂಬಂ ಘಾಟಿಯಲ್ಲಿ ರಾತ್ರಿ ಸಂಚಾರ ನಿರ್ಬಂಧ ವಿರೋಧಿಸಿ ತಮಿಳುನಾಡು ಮತ್ತು ಕರ್ನಾಟಕ ರೈತರು ಪ್ರತ್ಯೇಕ ಪ್ರತಿಭಟನೆ ನಡೆಸಿದ್ದು ತಮಿಳುನಾಡಿನ ತಾಳವಾಡಿ ತಾಲೂಕು ಕೇಂದ್ರ ಇಂದು ಅಘೋಷಿತ ಬಂದ್ ಆಗಿದೆ‌.

ದಿಂಬಂ ಘಾಟಿಯಲ್ಲಿ ರಾತ್ರಿ ಸಂಚಾರ ನಿರ್ಬಂಧ ವಿರೋಧಿಸಿ ಪ್ರತಿಭಟನೆ
ಕರ್ನಾಟಕ ತಮಿಳುನಾಡು ರೈತರಿಂದ ಬೃಹತ್ ಪ್ರತಿಭಟನೆ
author img

By

Published : Feb 10, 2022, 3:54 PM IST

ಚಾಮರಾಜನಗರ: ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ದಿಂಬಂ ಘಾಟಿಯಲ್ಲಿ ರಾತ್ರಿ ಸಂಚಾರ ನಿರ್ಬಂಧ ವಿರೋಧಿಸಿ ತಮಿಳುನಾಡು ಮತ್ತು ಕರ್ನಾಟಕ ರೈತರು ಪ್ರತ್ಯೇಕ ಪ್ರತಿಭಟನೆ ನಡೆಸಿದ್ದು, ತಮಿಳುನಾಡಿನ ತಾಳವಾಡಿ ತಾಲೂಕು ಕೇಂದ್ರ ಇಂದು ಅಘೋಷಿತ ಬಂದ್ ಆಗಿದೆ‌.

ಹೊನ್ನೂರು ಪ್ರಕಾಶ್ ಸುದ್ದಿಗಾರರೊಂದಿಗೆ ಮಾತನಾಡಿದರು

ತಮಿಳುನಾಡು- ಕರ್ನಾಟಕ ಗಡಿಯಾದ ಪುಣಜನೂರುನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಸಂಚಾರ ನಿರ್ಬಂಧದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ರೈತರು ರಸ್ತೆ ತಡೆದಿದ್ದರಿಂದ ಅರ್ಧ ತಾಸಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಂ ಉಂಟಾಯಿತು‌. ಮುನ್ನೆಚ್ಚರಿಕೆ ಕ್ರಮವಾಗಿ ರೈತರನ್ನು ಚಾಮರಾಜನಗರ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಹೊನ್ನೂರು ಪ್ರಕಾಶ್ ಮಾತನಾಡಿ, ರಾತ್ರಿ ಸಂಚಾರ ನಿರ್ಬಂಧ ಹೇರುವ ಮುನ್ನ ರೈತರ ಅಭಿಪ್ರಾಯವನ್ನು ಮದ್ರಾಸ್ ಹೈಕೋರ್ಟ್ ಪಡೆಯಬೇಕಿತ್ತು‌. ಹಣ್ಣು - ತರಕಾರಿ ಕೊಯ್ದು ಗಡಿಗೇ ಬರಲು ಸಂಜೆ 6 ಗಂಟೆಯಾಗುತ್ತದೆ. ಬೆಳಗ್ಗೆ 6ಕ್ಕೆ ಗಡಿ ತೆರೆಯುವುದರಿಂದ 12 ತಾಸು ತಡವಾಗುತ್ತದೆ. ಇದರಿಂದ ತರಕಾರಿ ತನ್ನ ಗುಣಮಟ್ಟ ಕಳೆದುಕೊಳ್ಳಲಿದ್ದು, ಅಲ್ಲಿನ ಮಾರುಕಟ್ಟೆ ತಲುಪಿ ವಹಿವಾಟು ನಡೆಸಬೇಕಾದರೇ ಒಂದು ದಿನ ಹೆಚ್ಚುವರಿಯಾಗುತ್ತದೆ. ರೈತರು ಹಾಗೂ ಕೃಷಿ ಚಟುವಟಿಕೆಯನ್ನೇ ನಂಬಿರುವವರು ಇದರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದರು.

ಮದ್ರಾಸ್ ಹೈಕೋರ್ಟ್ ತನ್ನ ಆದೇಶವನ್ನು ಮರುಪರಿಶೀಲನೆ ನಡೆಸಬೇಕು, ಇದಕ್ಕಾಗಿ ರೈತಸಂಘದಿಂದ 15 ದಿನ ಕಾಲಾವಕಾಶ ಕೊಡುತ್ತಿದ್ದು ಒಂದು ವೇಳೆ ರಾತ್ರಿ ಸಂಚಾರ ನಿರ್ಬಂಧಿಸಿದ್ದೇ ಆದರೆ ಕಾನೂನನ್ನೇ ಕೈಗೆ ತೆಗೆದುಕೊಂಡು ಏಕಕಾಲದಲ್ಲಿ ತಮಿಳುನಾಡು ಹಾಗೂ ನಮ್ಮ ರಾಜ್ಯದ ರೈತರು ಗಡಿ ಮುರಿದು ಸಂಚಾರ ಆರಂಭಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ತಮಿಳುನಾಡು ರೈತರಿಂದ ಬೃಹತ್‌ ಪ್ರತಿಭಟನೆ: ರಾತ್ರಿ ಸಂಚಾರ ನಿರ್ಬಂಧ ವಿರೋಧಿಸಿ ನಮ್ಮ ರಸ್ತೆ-ನಮ್ಮ ಹಕ್ಕು ಎಂದು ಒತ್ತಾಯಿಸಿ ತಮಿಳುನಾಡಿನ ಬಣ್ಣಾರಿಯಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ರೈತರು, ವ್ಯಾಪಾರಸ್ಥರು ಪ್ರತಿಭಟನೆ ನಡೆಸುತ್ತಿದ್ದು ಯಾವುದೇ ಕಾರಣಕ್ಕೂ ರಾತ್ರಿ ಸಂಚಾರ ನಿರ್ಬಂಧ ವಿಧಿಸಬಾರದು ಎಂದು ಆಗ್ರಹಿಸಿದ್ದಾರೆ.

ರೈತರ ಹೋರಾಟಕ್ಕೆ ತಾಳವಾಡಿ ಭಾಗದ ಜನರು ಉತ್ತಮ ಬೆಂಬಲ ವ್ಯಕ್ತಪಡಿಸಿದ್ದು ತಾಳವಾಡಿ ತಾಲೂಕು ಕೇಂದ್ರದಲ್ಲಿ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ್ದು, ಸಾರ್ವಜನಿಕ ಸಾರಿಗೆಯಲ್ಲೂ ಬೆರಳಣಿಕೆ ಮಂದಿಯಷ್ಟೇ ಪ್ರಯಾಣಿಸುತ್ತಿದ್ದಾರೆ.

ಓದಿ:ಶಾಲೆಗಳನ್ನು ಬೇಗ ಆರಂಭಿಸಿ, ವಿವಾದಕ್ಕಾಗಿ ಶಿಕ್ಷಣ ಸ್ಥಗಿತ ಬೇಡ- ಸಿಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.