ETV Bharat / state

ಸೂರ್ಯಕಾಂತಿ ಬೆಳೆದು ಲಕ್ಷ-ಲಕ್ಷ ಆದಾಯ: ಖಾವಿ ಧರಿಸಿದ್ರೂ ಕಾಯಕ ಬಿಡದ ಸ್ವಾಮೀಜಿ - ಖಾವಿ ಧರಿಸಿದರೂ ಕೃಷಿ ಮಾಡುತ್ತಿರುವ ಗೋಪಾಲಪುರ ಗ್ರಾಮದ ಕಬ್ಬಿಣ ಕೋಲೇಶ್ವರ ಮಠ ಸ್ವಾಮೀಜಿ

ಮಠಕ್ಕೆ ಮೈಸೂರು ಮುಮ್ಮಡಿ ಕೃಷ್ಣರಾಜ ಒಡೆಯರ್ ನೀಡಿರುವ 20 ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದು 135 ಕ್ವಿಂಟಲ್ ಇಳುವರಿ ಪಡೆದಿದ್ದಾರೆ.

ಖಾವಿ ಧರಿಸಿದರೂ ಕಾಯಕ ಬಿಡದ ಗಡಿಜಿಲ್ಲೆ ಸ್ವಾಮೀಜಿ

author img

By

Published : Sep 13, 2021, 3:24 PM IST

ಚಾಮರಾಜನಗರ: ಖಾವಿ ಧರಿಸಿದರೂ ಕಾಯಕ ಬಿಡದ ಸ್ವಾಮೀಜಿ ಮಠದ ಕೊಡುಗೆ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದು ಲಕ್ಷಾಂತರ ಆದಾಯ ಗಳಿಸಿದ್ದಾರೆ.‌

ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಕಬ್ಬಿಣ ಕೋಲೇಶ್ವರ ಮಠದ ಇಮ್ಮಡಿ ಗುರುಮಲ್ಲ ಸ್ವಾಮೀಜಿ 'ಕಾಯಕವೇ ಕೈಲಾಸ' ಎಂಬ ಮಾತಿನ ಮಹತ್ವವನ್ನು ಲೋಕಕ್ಕೆ ಸಾರುತ್ತಿದ್ದಾರೆ. ಮಠಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ್ ನೀಡಿರುವ 20 ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದು 135 ಕ್ವಿಂಟಲ್ ಇಳುವರಿ ಪಡೆದಿದ್ದಾರೆ.

ಸೂರ್ಯಕಾಂತಿ ಬೆಳೆದು ಲಕ್ಷ-ಲಕ್ಷ ಆದಾಯ
ಸೂರ್ಯಕಾಂತಿ ಬೆಳೆದು ಲಕ್ಷ-ಲಕ್ಷ ಆದಾಯ

ಈ ಕುರಿತು ಶ್ರೀಗಳು, ಈಟಿವಿ ಭಾರತದೊಂದಿಗೆ ಮಾತನಾಡುತ್ತಾ, 'ಈಗ ನನಗೆ 35 ವರ್ಷ ವಯಸ್ಸಾಗಿದ್ದು 16ನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದೆ. ಗೋಪಾಲಪುರದ ಮಠಕ್ಕೆ ಬಂದು ಒಂದೂವರೆ ವರ್ಷವಾಗಿದೆ.‌ ಈ ಹಿಂದೆ ಮಠದ ಜಮೀನನ್ನು ಗುತ್ತಿಗೆ ನೀಡಲಾಗುತ್ತಿತ್ತು. ಆದರೆ ನಾವೇ ಏಕೆ ಕೃಷಿ ಮಾಡಬಾರದೆಂದು ಈ ಬಾರಿ ಕೃಷಿ ಮಾಡಿದೆ. ಒಂದು ತಿಂಗಳು ಮಳೆ ಕೈಕೊಟ್ಟರೂ ಉತ್ತಮ ಫಸಲು ಬಂದಿದೆ' ಎಂದು ಸಂತಸ ಹಂಚಿಕೊಂಡರು.‌

ಖಾವಿ ಧರಿಸಿದರೂ ಕಾಯಕ ಬಿಡದ ಗಡಿಜಿಲ್ಲೆ ಸ್ವಾಮೀಜಿ
ಖಾವಿ ಧರಿಸಿದರೂ ಕಾಯಕ ಬಿಡದ ಗಡಿಜಿಲ್ಲೆ ಸ್ವಾಮೀಜಿ

135 ಕ್ವಿಂಟಲ್‌ನಷ್ಟು ಇಳುವರಿ ಬಂದಿದ್ದು ಪ್ರತಿ ಕ್ವಿಂಟಲ್ ಸೂರ್ಯಕಾಂತಿಗೆ ಆರೂವರೆ ಸಾವಿರ ರೂ.‌ನಂತೆ ಮಾರಾಟವಾಗಿದ್ದು, 8 ಲಕ್ಷದಷ್ಟು ಆದಾಯ ಬಂದಿದೆ. ಈ ಹಣವನ್ನು ಮಠದ ಮೂಲಸೌಕರ್ಯ ಹಾಗೂ ಶ್ರೀಮಠ ನಡೆಸುವ ಪ್ರೌಢಶಾಲೆ ಅಭಿವೃದ್ಧಿಗೆ ಬಳಸಲಾಗುವುದು. ಈಗ ಹುರುಳಿ‌‌ ಮತ್ತು ಹಸಿಕಡಲೆ ಬೆಳೆ ಬಿತ್ತನೆ ಮಾಡಲಾಗುವುದು ಎಂದರು.

ಮಳೆಯಾಶ್ರಿತ ಜಮೀನು:

ಶ್ರೀಮಠದ ಕೊಡುಗೆ ಜಮೀನು ಮಳೆಯಾಶ್ರಿತವಾಗಿದ್ದು ಭೂಮಿ ಮೇಲೆ ನಂಬಿಕೆ, ವಿಶ್ವಾಸ, ಪ್ರೀತಿ ಇಟ್ಟುಕೊಂಡರೆ ಯಾವುದೇ ಕಾರಣಕ್ಕೂ ಭೂತಾಯಿ ಅನ್ಯಾಯ ಮಾಡಲ್ಲ. ಇಡೀ ವಿಶ್ವವೇ ನಿಂತಿರುವುದು ವ್ಯವಸಾಯದ ಮೇಲಾದ್ದರಿಂದ ಕೃಷಿಯತ್ತ ಯುವಕರು ತೊಡಗಿಕೊಳ್ಳಬೇಕು. ವ್ಯವಸಾಯದಿಂದ ಯಾರೂ ವಿಮುಖರಾಗಬಾರದು ಎಂದು ಶ್ರೀಗಳು ಕರೆ ಕೊಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.