ETV Bharat / state

ಕಾವೇರಿ ಆರ್ಭಟ: ಸತತ ನಾಲ್ಕನೇ ವರ್ಷ ಮೆಟ್ಟೂರು ಜಲಾಶಯ ಭರ್ತಿ - ತಮಿಳುನಾಡಿನ ಮೆಟ್ಟೂರು ಜಲಾಶಯ ಭರ್ತಿ ಸಮೀಪ

ಕೆಆರ್​​ಎಸ್ ಮತ್ತು ಕಬಿನಿ ಹೊರಹರಿವಿನಿಂದ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಮೆಟ್ಟೂರು ಜಲಾಶಯ ಮತ್ತೊಮ್ಮೆ ಭರ್ತಿಯಾಗಿದೆ.

just-half-a-feet-left-for-mettur-dam-to-reach-full-capacity
ಕಾವೇರಿ ಆರ್ಭಟ: ಮೆಟ್ಟೂರು ಜಲಾಶಯ ಭರ್ತಿಗೆ ಅರ್ಧ ಅಡಿ ಬಾಕಿ
author img

By

Published : Jul 16, 2022, 9:58 AM IST

Updated : Jul 16, 2022, 12:21 PM IST

ಚಾಮರಾಜನಗರ: ಕೆಆರ್​​ಎಸ್ ಮತ್ತು ಕಬಿನಿ ಹೊರಹರಿವಿನಿಂದ ಕಾವೇರಿ ಭೋರ್ಗರೆದು ಹರಿಯುತ್ತಿದ್ದು, ತಮಿಳುನಾಡಿನ ಮೆಟ್ಟೂರು ಜಲಾಶಯವು ಸತತ ನಾಲ್ಕನೇ ವರ್ಷ ಭರ್ತಿಯಾಗಿದೆ. 120 ಅಡಿ ಗರಿಷ್ಠ ಮಟ್ಟ ಹೊಂದಿರುವ ಮೆಟ್ಟೂರು ಜಲಾಶಯದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ 115 ಅಡಿ ನೀರಿತ್ತು.

ಎರಡು ದಿನಗಳ ಅವಧಿಯಲ್ಲೇ 10 ಅಡಿಗೂ ಹೆಚ್ಚು ನೀರು ಸಂಗ್ರಹಗೊಂಡಿದೆ. ಹೊಗೆನಕಲ್ ಮೂಲಕ 1.20 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಸೇರುತ್ತಿದೆ. ಅಣೆಕಟ್ಟೆಯ ಒಳಹರಿವು 1.20 ಲಕ್ಷ ಕ್ಯೂಸೆಕ್ ಇದ್ದು, ಹೊರಹರಿವು 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಮುಂದಿನ ಕೆಲ ಗಂಟೆಗಳಲ್ಲಿ 1 ಲಕ್ಷ ಕ್ಯೂಸೆಕ್​ ಹರಿಬಿಡುವ ಸಾಧ್ಯತೆಯಿದೆ. ಕಳೆದ 3-4 ವರ್ಷಗಳಿಂದಲೂ ಮೆಟ್ಟೂರು ಜಲಾಶಯ ಭರ್ತಿಯಾಗುತ್ತಿದೆ.

ಮೆಟ್ಟೂರು ಜಲಾಶಯ ಭರ್ತಿ

2020ರಲ್ಲಿ 6 ತಿಂಗಳ ಅವಧಿಯಲ್ಲಿ ಎರಡು ಬಾರಿ ತುಂಬಿ ತುಳುಕಿತ್ತು. ತಮಿಳುನಾಡಿನ ಸೇಲಂ ಸೇರಿದಂತೆ ಸುತ್ತಮುತ್ತಲಿನ 12 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಮೆಟ್ಟೂರು ಜಲಾಶಯ ಆಧಾರವಾಗಿದೆ. ಸುಮಾರು 16.4 ಲಕ್ಷ ಎಕರೆ ಪ್ರದೇಶದ ಕೃಷಿಗೆ ನೆರವಾಗಿದೆ.

ಇದನ್ನೂ ಓದಿ: ಅಯ್ಯಪ್ಪ ಬೆಟ್ಟದಲ್ಲಿ ಬಿರುಕು: 80 ಕುಟುಂಬಗಳ 221 ಜನರ ಸ್ಥಳಾಂತರ

Last Updated : Jul 16, 2022, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.