ETV Bharat / state

ಇಂದಿನಿಂದ ಕಮಲಪಡೆ ರಥಯಾತ್ರೆ: ಮಾದಪ್ಪನ ಬೆಟ್ಟದ ಜನರ ಸಮಸ್ಯೆಗೆ ನಡ್ಡಾ ಕೊಡ್ತಾರಾ ಮುಕ್ತಿ?

ರಾಜ್ಯದ ನಾಲ್ಕು ಕಡೆ​ಗ​ಳಿಂದ ಆರಂಭ​ವಾ​ಗ​ಲಿ​ರುವ ವಿಜಯ ಸಂಕಲ್ಪ ಯಾತ್ರೆಯ ಮೊದಲ ರಥಯಾತ್ರೆಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ​ನಡ್ಡಾ ಇಂದು ಮಲೆ ಮಹ​ದೇ​ಶ್ವರ ಬೆಟ್ಟ​ದಲ್ಲಿ ಚಾಲನೆ ನೀಡ​ಲಿ​ದ್ದಾ​ರೆ.

vijaya sankalpa yatra
ವಿಜಯ ಸಂಕಲ್ಪ ಯಾತ್ರೆ
author img

By

Published : Mar 1, 2023, 9:27 AM IST

ಚಾಮರಾಜನಗರ: ರಾಜ್ಯದಲ್ಲಿ ಈ ಬಾರಿ ನಡೆಯಲಿರುವ ವಿಧಾ​ನ​ಸಭಾ ಚುನಾ​ವ​ಣೆ​ಯನ್ನ ಗಮ​ನ​ದ​ಲ್ಲಿ​ಟ್ಟು​ಕೊಂಡು ಜಾತ್ಯತೀತ ಜನತಾ ದಳದ ಪಂಚರತ್ನ ರಥಯಾತ್ರೆ, ಕಾಂಗ್ರೆಸ್​ನ ಪ್ರಜಾಧ್ವನಿ ಯಾತ್ರೆಯ ಬೆನ್ನಲ್ಲೇ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸಲಿದೆ. ಈ ನಿಟ್ಟಿನಲ್ಲಿ ರಾಜ್ಯದ ದಕ್ಷಿಣದ ತುತ್ತ ತುದಿ ಮಲೆ ಮಹದೇಶ್ವರ ಬೆಟ್ಟದಿಂದ ಇಂದು ರಥಯಾತ್ರೆ ಆರಂಭವಾಗಲಿದೆ.

ಜೆ ಪಿ ನಡ್ಡಾರಿಂದ ಚಾಲನೆ.. ಪ್ರಮುಖ‌ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಲಿದ್ದು, ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಸಚಿವರುಗಳು, ಸಂಸದರು ಸಾಥ್ ಕೊಡಲಿದ್ದಾರೆ.

ಸೋಲಿಗರೊಟ್ಟಿಗೆ ಸಂವಾದ, ರೋಡ್ ಶೋ, ಸಮಾವೇಶ.. ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಯಾತ್ರೆಗೆ ನಡ್ಡಾ ಚಾಲನೆ ಕೊಡಲಿದ್ದಾರೆ.‌ ಬಳಿಕ, ಸೋಲಿಗರು ಹಾಗೂ ಬೇಡಗಂಪಣ ಜನಾಂಗದವರೊಂದಿವೆ ಸಂವಾದ ನಡೆಸಲಿದ್ದು ಅದಾದ ನಂತರ ಸಾಲೂರು ಮಠಕ್ಕೆ ಭೇಟಿ ಕೊಡಲಿದ್ದಾರೆ. ಮಧ್ಯಾಹ್ನ 2 ರ ವೇಳೆಗೆ ರಾಜ್ಯ ನಾಯಕರು ಹನೂರಿನಲ್ಲಿ ಬಹಿರಂಗ ಸಮಾವೇಶ ನಡೆಸಿ, ಬಳಿಕ ಕೊಳ್ಳೇಗಾಲದಲ್ಲಿ ರೋಡ್ ಶೋ‌ ಹಾಗೂ ಬಹಿರಂಗ ಸಮಾವೇಶ ನಡೆಸಲಿದ್ದಾರೆ.

ಚಾಮರಾಜನಗರದಲ್ಲಿ ಮಾ.2 ರಂದು ನಗರದ ಆದಿಶಕ್ತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಯಲಿದ್ದು, ಮಧ್ಯಾಹ್ನ ಗುಂಡ್ಲುಪೇಟೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ರಾಜ್ಯದಲ್ಲಿ 4 ತಂಡಗಳು ಯಾತ್ರೆ ನಡೆಸಲಿದ್ದು ಗಡಿಜಿಲ್ಲೆಯಲ್ಲೇ ಮೊದಲ ಯಾತ್ರೆ ನಡೆಯುತ್ತಿರುವುದು ವಿಶೇಷ. ಇನ್ನು ಈಗಾಗಲೇ ಸಮಾವೇಶ ಸ್ಥಳಗಳಲ್ಲಿ ಬಿಜೆಪಿ ಪಡೆ ಸಕಲ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ: ಬಿಜೆಪಿಯನ್ನು ಅಧಿಕಾರಕ್ಕೆ ತರಲು 'ಮಿಷನ್ 150' ವಿಜಯ ಸಂಕಲ್ಪ ಯಾತ್ರೆ: ಮಹೇಶ ಟೆಂಗಿನಕಾಯಿ

ಸಮಸ್ಯೆಗೆ ಕೊಡ್ತಾರಾ ಮುಕ್ತಿ? ರಥಯಾತ್ರೆಗೆ ಚಾಲನೆ ಕೊಟ್ಟ ಬಳಿಕ ಬೇಡಗಂಪಣ ಹಾಗೂ ಸೋಲಿಗ ಸಮಯದಾಯದೊಟ್ಟಿಗೆ ಜೆ.ಪಿ‌.ನಡ್ಡಾ ಸಂವಾದ ನಡೆಸಲಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮಲೆಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪಾಲಾರ್, ಮೆದಗಣಾನೆ, ಪಡಿಸಲನತ್ತ, ಮೆಂದಾರೆ, ಇಂಡಿಗನತ್ತ, ತೊಳಸಿಕೆರೆ, ಕೊಕ್ಕೆಬೊರೆ, ತೋಕೆರೆ, ದೊಡ್ಡಾಣೆ ಗ್ರಾಮಗಳಲ್ಲಿ ಈಗಲೂ ವಿದ್ಯುತ್ ಸಂಪರ್ಕ ಇಲ್ಲದೇ ಸೋಲರ್ ದೀಪಗಳನ್ನು ಆಶ್ರಯಿಸಬೇಕಿದ್ದು, ಆಗಾಗ ಇದು ರಿಪೇರಿಗೆ ಬಂದು ತಿಂಗಳುಗಟ್ಟಲೇ ಬುಡ್ಡಿ ದೀಪಗಳೇ ಇವರಿಗೆ ಬೆಳಕಾಗಲಿದೆ. ಈ ವಿಚಾರ ಇಂದಿನ ಸಂವಾದದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ಇನ್ನು, ಮಲೆಮಹದೇಶ್ವರ ಬೆಟ್ಟದ ಬಹುಪಾಲು ಗ್ರಾಮಗಳಿಗೆ ರಸ್ತೆ ಸಂಪರ್ಕವಿಲ್ಲದೇ ವಾಹನ ಸೌಕರ್ಯ ಇಲ್ಲದಿರುವುದು ಇಲ್ಲಿನ ಜನರ ಬಹುದೊಡ್ಡ ಸಮಸ್ಯೆಯಾಗಿದೆ. ಡೋಲಿ ಮೂಲಕ ರೋಗಿಗಳನ್ನು ಈಗಲೂ ಹೊತ್ತೊಯ್ತುವ ಪರಿಸ್ಥಿತಿ ಇದೆ. ಇದರೊಟ್ಟಿಗೆ, ಬೇಡಗಂಪಣ ಸಮುದಾಯವನ್ನು ಎಸ್​ಟಿಗೆ ಸೇರಿಸಬೇಕೆಂಬ ಒತ್ತಾಯ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕೆಂಬ ಕೂಗನ್ನು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಗಮನಕ್ಕೆ ತರಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.