ETV Bharat / state

ಸ್ವಾಮೀಜಿಗಳು ರಾಜಕೀಯದಲ್ಲಿ ಮೂಗು ತೂರಿಸುವುದು ಸಲ್ಲದು; ಸಂಸದ ವಿ. ಶ್ರೀನಿವಾಸ ಪ್ರಸಾದ್ - v srinivas prasad about swamiji reservation protest

ಸ್ವಾಮೀಜಿಗಳು ಧಾರ್ಮಿಕ ಚಟುವಟಿಕೆಯಲ್ಲಷ್ಟೇ ಇರಬೇಕು. ಅವರ ಚಟುವಟಿಕೆಗಳು, ಕಾರ್ಯವೇ ಬೇರೆ. ರಾಜಕೀಯದಲ್ಲಿ ಅವರು ಮೂಗು ತೂರಿಸುವುದು ಸಮಂಜಸವಲ್ಲ ಎಂದು ಸಂಸದ ವಿ. ಶ್ರೀನಿವಾಸ​ ಪ್ರಸಾದ್ ತಿಳಿಸಿದರು.

its-not-good-that-swamijies-entering-in-politics
ಶ್ರೀನಿವಾಸ ಪ್ರಸಾದ್
author img

By

Published : Mar 7, 2021, 9:01 PM IST

ಚಾಮರಾಜನಗರ: ಮೀಸಲಾತಿ ಹೋರಾಟದಲ್ಲಿ ಸ್ವಾಮೀಜಿಗಳು ಪಾಲ್ಗೊಳ್ಳಬಾರದು ಎಂದು ಸಂಸದ ವಿ. ಶ್ರೀನಿವಾಸ​ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಅವರಿಗೆ ತಿಳುವಳಿಕೆ ಇಲ್ಲ, ಸ್ವಾಮೀಜಿಗಳು ಧಾರ್ಮಿಕ ಚಟುವಟಿಕೆಯಲ್ಲಷ್ಟೇ ಇರಬೇಕು. ಅವರ ಚಟುವಟಿಕೆಗಳು, ಕಾರ್ಯವೇ ಬೇರೆ. ರಾಜಕೀಯದಲ್ಲಿ ಅವರು ಮೂಗು ತೂರಿಸುವುದು ಸಮಂಜಸವಲ್ಲ ಎಂದರು.

ಸ್ವಾಮೀಜಿಗಳು ರಾಜಕೀಯದಲ್ಲಿ ಮೂಗು ತೂರಿಸುವುದು ಸಮಂಜಸವಲ್ಲ

ಇನ್ನು, ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸರ್ಕಾರ ಈ ಪ್ರಕರಣವನ್ನು ಕೊನೆಗಾಣಿಸಬೇಕು, ಸಿಡಿ ಮಾತ್ರ ಇದೆ, ಸಿಡಿಯ ಬಗ್ಗೆ ಪೊಲೀಸರ ಬಳಿ ಮಾಹಿತಿ ಇಲ್ಲ, ತೇಜೋವಧೆ ಮಾಡುತ್ತಿರುವುದರಿಂದ ಸಚಿವರು ಕೋರ್ಟ್ ಮೊರೆ ಹೋಗುತ್ತಿದ್ದಾರೆ ಎಂದರು.

ರಾಜಕೀಯದಲ್ಲಿರುವವರು, ಅಧಿಕಾರ ಪಡೆದವರು ಗಂಭೀರವಾಗಿ ಇರಬೇಕು. ವೈಯಕ್ತಿಕ ವಿಚಾರಗಳು ಬೀದಿರಂಪವಾಗಬಾರದು, ಇದರಿಂದ ಪಕ್ಷಕ್ಕೂ ಇರಿಸು ಮುರುಸಾಗಲಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.