ETV Bharat / state

100 ಬೇಟೆಯಲ್ಲಿ ಯಶ ಕಾಣುವುದು 5 ಬಾರಿ ಮಾತ್ರ.. ವ್ಯಾಘ್ರನ ಬಗೆಗೊಂದಿಷ್ಟು ಕುತೂಹಲಕರ ಮಾಹಿತಿ - ಹುಲಿಯ ಬಗ್ಗೆ ಮಾಹಿತಿ

ಹುಲಿಯನ್ನು ಸರಹದ್ದಿನ ಗುರುತುಗಳನ್ನು ಕಂಡು ಹೆಣ್ಣು ಹುಲಿಗಳು ಸಂತಾನೋತ್ಪತ್ತಿಗೆ ಬರುತ್ತವೆ. ಒಂದು ಗಂಡು ಹುಲಿಯ ಸರಹದ್ದಿನ ನಡುವೆ ಎರಡು ಹೆಣ್ಣು ಹುಲಿಗಳ ಸರಹದ್ದಿರುವುದು ಸಾಮಾನ್ಯ. ಗಂಡು ಹುಲಿಗಳ ಸಂಖ್ಯೆಯೇ ಹೆಚ್ಚಿದ್ದರೇ ಕಾಳಗ ಏರ್ಪಟ್ಟು ಗೆದ್ದ ಹುಲಿ ಅಧಿಪತ್ಯ ಸಾಧಿಸುತ್ತದೆ..

International Tiger Day: facts about tiger
100 ಬೇಟೆಯಲ್ಲಿ ಯಶ ಕಾಣುವುದು 5 ಬಾರಿ ಮಾತ್ರ: ವ್ಯಾಘ್ರನ ಬಗೆಗೊಂದಿಷ್ಟು ಮಾಹಿತಿ..!
author img

By

Published : Jul 29, 2020, 3:54 PM IST

ಚಾಮರಾಜನಗರ : ರಾಜನಂತೆ ಗಾಂಭಿರ್ಯ, ಬೇಟೆಯಲ್ಲೂ ರಾಜಾರೋಷತನ ತೋರುವ ಹುಲಿರಾಯ ಸಮತೋಲನ ಪರಿಸರದ ಸಂಕೇತವೂ ಆಗಿದ್ದಾನೆ. ಬೆಕ್ಕಿನ ಜಾತಿಗೆ ಸೇರಿರುವ ಹುಲಿ ಬಗೆಗಿನ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿದೆ.

ವ್ಯಾಘ್ರನ ಬಗೆಗೊಂದಿಷ್ಟು ಮಾಹಿತಿ..

• ಬೆಕ್ಕಿನ ಜಾತಿಯಲ್ಲೇ ದೊಡ್ಡದಾದ ಹುಲಿಯ ಸರಾಸರಿ ಆಯಸ್ಸು 19-25 ವರ್ಷ.

• ಹುಲಿಯ ವೇಗ ಗಂಟೆಗೆ 60-65 ಕಿ.ಮೀ. ಆದರೆ, ಅದರ ಓಟ 35-45 ಮೀ.ಗೆ ಕೊನೆಗೊಳ್ಳುತ್ತೆ. ಅಷ್ಟರಲ್ಲೇ ಬೇಟೆ ಸಿಕ್ಕರಷ್ಟೇ ಸರಿ ಇಲ್ಲವೇ ಬೇರೆ ಬೇಟೆಯನ್ನು ಹುಡುಕುತ್ತದೆ‌‌‌‌. ಚಿರತೆ ಇದರ ವಿರುದ್ಧ 1 ಕಿ.ಮೀ ತನಕ ಬೇಟೆಯನ್ನು ಅಟ್ಟಾಡಿಸುತ್ತೆ.

International Tiger Day: facts about tiger
ಸಮತೋಲನ ಪರಿಸರದ ಸಂಕೇತ ಹುಲಿರಾಯ

• ಹುಲಿಯ 100 ಬೇಟೆಗಳಲ್ಲಿ ಸರಾಸರಿ ಅದು ಯಶ ಕಾಣುವುದು ಕೇವಲ 5-7 ಮಾತ್ರ. ಹೊಂಚುಹಾಕಿ ಹುಲಿ ಬೇಟೆಯಾಡುವುದಿಲ್ಲ.

• ಕಾಡೆಮ್ಮೆ, ಜಿಂಕೆ, ಮರಿ ಆನೆಗಳನ್ನು ಹೆಚ್ಚು ಬೇಟೆಯಾಡುತ್ತವೆ‌. ಗಂಡು ಹುಲಿಗಳು ಕೆಲವೊಮ್ಮೆ ಹುಲಿ ಮರಿಗಳನ್ನೇ ತಿನ್ನುತ್ತವೆ.

• ಹುಲಿ ಒಂದು ವೇಳೆ ಜಿಂಕೆಗಳನ್ನೇ ತಿಂದರೆ ವರ್ಷಕ್ಕೆ ಸರಾಸರಿ 130-150 ಜಿಂಕೆಗಳು ಬೇಕಾಗಬಹುದು. ಸಾಯಿಸಿದ ಪ್ರಾಣಿಯನ್ನು 300 ಮೀ.ಕ್ಕಿಂತಲೂ ಹೆಚ್ಚಿನ ದೂರ ಎಳೆದೊಯ್ದು ಆಹಾರವನ್ನು ಸುರಕ್ಷಿತ ಮಾಡಿಕೊಳ್ಳಲಿದೆ. 2-3 ದಿನ ಅದೇ ಬೇಟೆ ತಿನ್ನಲಿದ್ದು ಪ್ರತಿದಿನ ಬೇಟೆಯಾಡುವುದಿಲ್ಲ.

• ಕಾಡುನಾಯಿಗಳು, ಕಾಡೆಮ್ಮೆಗಳ ಗುಂಪು ಹುಲಿಯನ್ನು ಓಡಿಸಬಲ್ಲವಾಗಿವೆ.

• ಹುಲಿ ಓಡುವಾಗ ಉಗುರುಗಳು ಒಳಕ್ಕಿರಲಿದ್ದು ಅದು ದಾಳಿ ಮಾಡುವಾಗ ಮಾತ್ರ ಉಗುರುಗಳು ಹೊರಬರುತ್ತದೆ.

• ಹುಲಿ ಮೈಮೇಲಿನ ಪಟ್ಟೆಗಳು ಮನುಷ್ಯನ ಬೆರಳಚ್ಚಿನಂತೆ ಒಂದೊಂದು ಹುಲಿಯ ಮೈ ಮೇಲಿನ ಪಟ್ಟೆಗಳು ಬೇರೆಬೇರೆಯಾಗಿರುತ್ತದೆ‌.

• ಹುಲಿಯ ಪಂಜಿನ ಹೊಡೆತ ಪ್ರಾಣಿ ಅಥವಾ ಮನುಷ್ಯನ ಮೇಲೆ 150 ಪೌಂಡ್ ನಷ್ಟು ಒತ್ತಡ ಬೀಳಲಿದೆ. ಮನುಷ್ಯನಿಗೆ ಹೊಡೆದರೇ ಒಂದೇ ಹೊಡೆತಕ್ಕೆ ಬೆನ್ನುಮೂಳೆ ಮುರಿಯಬಹುದಾಗಿದೆ.

• ಮ್ಯಾಂಗ್ರೋವ್ ಕಾಡಿನ ಹುಲಿಗಳು ಮನುಷ್ಯನನ್ನೇ ತಿನ್ನುವ ಪ್ರವೃತ್ತಿ ಬೆಳೆಸಿಕೊಂಡಿವೆ. ಆದರೆ, ಬಹಳಷ್ಟು ಹುಲಿಗಳು ನರಭಕ್ಷಕವಲ್ಲ.

• ತಾಯಿಯಿಂದ ಬೇರ್ಪಟ್ಟ ಹುಲಿಗಳು ತನ್ನ ಸರಹದ್ದನ್ನು ನಿರ್ಮಿಸಿಕೊಳ್ಳುವಾಗ ಮನುಷ್ಯನ ಮೇಲೆ ದಾಳಿ ಮಾಡುವ ಸಾಧ್ಯತೆ ಇರಲಿದೆ. ಬೇಟೆಯಾಡುವ ಶಕ್ತಿ ಕಳೆದುಕೊಂಡ, ವಯಸ್ಸಾದ, ಗಾಯಗೊಂಡ ಹುಲಿಗಳು ಮನುಷ್ಯನ ಮೇಲೆ ದಾಳಿ ಮಾಡಲಿದೆಯೇ ಹೊರತು ಇನ್ನುಳಿದ ಪ್ರಕರಣಗಳಲ್ಲಿ ಭಯದಿಂದ ಮನುಷ್ಯನ ಮೇಲೆ ಎರಗುತ್ತವೆ.

• ನೆಲ ಕೆರೆಯುವುದು, ಮರಗಳ ಮೇಲೆ ಗೀಚುವುದು, ಮಲ-ಮೂತ್ರ ವಿಸರ್ಜನೆ ಮೂಲಕ ತನ್ನ ಸರಹದ್ದನ್ನು ನಿರ್ಮಿಸಿಕೊಳ್ಳಲಿದೆ. ಒಂದು ಹುಲಿಗೆ ಅಂದಾಜು 60 ಚದರ ಕಿಮೀ ನಷ್ಟು ವಿಸ್ತಾರ ಪ್ರದೇಶ ಅಗತ್ಯ

• ಹುಲಿಯನ್ನು ಸರಹದ್ದಿನ ಗುರುತುಗಳನ್ನು ಕಂಡು ಹೆಣ್ಣು ಹುಲಿಗಳು ಸಂತಾನೋತ್ಪತ್ತಿಗೆ ಬರುತ್ತವೆ. ಒಂದು ಗಂಡು ಹುಲಿಯ ಸರಹದ್ದಿನ ನಡುವೆ ಎರಡು ಹೆಣ್ಣು ಹುಲಿಗಳ ಸರಹದ್ದಿರುವುದು ಸಾಮಾನ್ಯ. ಗಂಡು ಹುಲಿಗಳ ಸಂಖ್ಯೆಯೇ ಹೆಚ್ಚಿದ್ದರೇ ಕಾಳಗ ಏರ್ಪಟ್ಟು ಗೆದ್ದ ಹುಲಿ ಅಧಿಪತ್ಯ ಸಾಧಿಸುತ್ತದೆ.

• ಎರಡು ಹೆಣ್ಣು ಹುಲಿಗಳ ನಡುವೆ ಕಾಳಗ, ಹೆಣ್ಣು ಹುಲಿಯೊಂದಿಗೆ ಗಂಡು ಹುಲಿಯ ಕಾದಾಟ ತೀರಾ ಅಪರೂಪ

ವ್ಯಾಘ್ರ ಸುಭೀಕ್ಷತೆಯ, ಉತ್ತಮ ಪರಿಸರದ ಸಂಕೇತವಾಗಿದ್ದು, ಹುಲಿಯನ್ನು ಉಳಿಸಬೇಕಾಗಿರುವುದು ಮುಂದಿನ ಪೀಳಿಗೆ ನೋಡಿಲಿಕ್ಕಷ್ಟೇ ಅಲ್ಲದೇ ಇಂದಿನ ಜನರು ಉತ್ತಮ ಪರಿಸರದಲ್ಲಿ ಬದುಕಲು ಕೂಡ ಅಗತ್ಯ ಎಂಬುದು ಸತ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.