ETV Bharat / state

ಅಂತಾರಾಷ್ಟ್ರೀಯ ಹುಲಿ ದಿನ: ಹುಲಿಗಳ ಗಣತಿ ಬಿಡುಗಡೆ.. ಬಂಡೀಪುರಕ್ಕೆ ದೇಶದಲ್ಲೇ 2ನೇ, ಕರ್ನಾಟಕದಲ್ಲಿ 1ನೇ ಸ್ಥಾನ

International Tiger Day: ಕರ್ನಾಟಕದಲ್ಲಿ ಅತೀ ಹೆಚ್ಚು ಹುಲಿಗಳಿರುವ ರಕ್ಷಿತಾರಣ್ಯಗಳಲ್ಲಿ ಮೊದಲ ಹಾಗೂ ಮೂರನೇ ಸ್ಥಾನ ಚಾಮರಾಜನಗರ ಜಿಲ್ಲೆಗೆ ದೊರೆತಿದೆ.

International Tiger Day
ಅಂತಾರಾಷ್ಟ್ರೀಯ ಹುಲಿ ದಿನ: ಹುಲಿಗಳ ಗಣತಿ ಬಿಡುಗಡೆ
author img

By

Published : Jul 29, 2023, 5:23 PM IST

ಚಾಮರಾಜನಗರ: ಇಂದು ಅಂತಾರಾಷ್ಟ್ರೀಯ ಹುಲಿಗಳ ದಿನ. ಆ ಹಿನ್ನೆಲೆ ಇಂದು ಬಿಡುಗಡೆಯಾದ ಹುಲಿ ಗಣತಿಯಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು ಹುಲಿಗಳು ಇರುವ ಪ್ರದೇಶವಾಗಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಮೊದಲ ಪ್ರದೇಶವಾಗಿ ಹೊರಹೊಮ್ಮಿದ್ದು, ದೇಶದಲ್ಲಿ ಅತೀ ಹೆಚ್ಚು ಹುಲಿಗಳು ಹೊಂದಿರುವ ಎರಡನೇ ಟೈಗರ್ ರಿಸರ್ವ್ ಆಗಿ ಗುರುತಿಸಿಕೊಂಡಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ 191 ಹುಲಿಗಳು ಇವೆ ಎಂದು ಅಂದಾಜು ಮಾಡಲಾಗಿದ್ದು, ನಾಗರಹೊಳೆ ರಕ್ಷಿತಾರಣ್ಯದಲ್ಲಿ 185, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 60, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 44 ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 29 ಹುಲಿಗಳಿವೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ಬಹಿರಂಗ ಪಡಿಸಿದೆ.

ಜಿಂ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ 319 ವ್ಯಾಘ್ರಗಳಿದ್ದು, ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಕ್ಷಿತ ಅರಣ್ಯ ಆಗಿದ್ದು, ಬಂಡೀಪುರ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಬಂಡೀಪುರ ಮೊದಲ ಸ್ಥಾನದಲ್ಲಿದ್ದು, ನಾಗರಹೊಳೆ ರಕ್ಷಿತಾರಣ್ಯ ಎರಡನೇ ಸ್ಥಾನದಲ್ಲಿದ್ದು, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಕ್ಷಿತಾರಣ್ಯಗಳಲ್ಲಿ ಮೊದಲ ಹಾಗೂ ಮೂರನೇ ಸ್ಥಾನ ಪಡೆಯುವ ಮೂಲಕ ಚಾಮರಾಜನಗರ ಜಿಲ್ಲೆ ಹುಲಿಗಳ ನಾಡಾಗಿದೆ.

ಹುಲಿ ರಕ್ಷಿತಾರಣ್ಯ ನಿರ್ವಹಣೆಯಲ್ಲೂ ಎರಡನೇ ಸ್ಥಾನ: ಹುಲಿ ರಕ್ಷಿತಾರಣ್ಯದ ನಿರ್ವಹಣೆಯಲ್ಲೂ ಬಂಡೀಪುರ ಟೈಗರ್ ರಿಸರ್ವ್ ದೇಶದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ. ಕೇರಳ ಮೊದಲ ಸ್ಥಾನ ಪಡೆದಿದ್ದು, ಬಂಡೀಪುರ ಹುಲಿ ರಕ್ಷಿತಾರಣ್ಯ ಎರಡನೇ ಸ್ಥಾನ ಪಡೆದಿದೆ.

ಸಿಎಫ್ಒ ರಮೇಶ್ ಕುಮಾರ್ ಸಂತಸ: ಇನ್ನು ಹುಲಿ ಗಣತಿ ಸಂಬಂಧ ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಅವರು ಸಂತಸ ವ್ಯಕ್ತಪಡಿಸಿದ್ದು, ಈ ಬಾರಿ ಕ್ಯಾಮರಾ ಟ್ರಾಪಿಂಗ್ ಸರಿಯಾಗಿ ಮಾಡಿದ್ದೆವು. ದೇಶದಲ್ಲೇ ಅತೀ ಹೆಚ್ಚು ಹುಲಿ ಇರುವ ಎರಡನೇ ಟೈಗರ್ ರಿಸರ್ವ್ ನಮ್ಮದಾಗಿರುವುದು ಖುಷಿ ತಂದಿದೆ. ಹುಲಿ ರಕ್ಷಿತಾರಣ್ಯ ನಿರ್ವಹಣೆಯಲ್ಲೂ ನಮ್ಮ ಬಂಡೀಪುರ ದೇಶದಲ್ಲೇ ಎರಡನೇ ಸ್ಥಾನ ಪಡೆದಿದ್ದು, ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಅರಣ್ಯ ವೀಕ್ಷಕರು, ರಕ್ಷಕರು ಅವರ ಕಠಿಣ ಶ್ರಮವೇ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚು ಸ್ಥಾನ ಬಂದಿರುವುದಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪುರಿ ಕಡಲ ತೀರದಲ್ಲಿ ಘರ್ಜಿಸುತ್ತಿರುವ ಹುಲಿಗಳ 15 ಅಡಿ ಎತ್ತರದ ಮರಳು ಶಿಲ್ಪಕಲಾಕೃತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.