ETV Bharat / state

ಎಂಟೇ ದಿನದಲ್ಲಿ ಸೋಂಕಿತರ ಸಂಖ್ಯೆ 20ಕ್ಕೇರಿಕೆ... ಚಾಮರಾಜನಗರದಲ್ಲಿ ಕೊರೊನಾ ವೇಗ ಹೆಚ್ಚಿಸಿದ ಚಾಲಕರು...! - latest corona news in chamarajnagar

ಚಾಮರಾಜನಗರದಲ್ಲಿ ಕೆಎಸ್​ಆರ್​ಟಿಸಿ ಚಾಲಕ ಕಂ ನಿರ್ವಾಹಕ ಸೇರಿದಂತೆ ಒಟ್ಟು ಐವರು ಚಾಲಕರು ಕೊರೊನಾ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಕೋವಿಡ್​-19 ಪ್ರಕರಣಗಳು 20ಕ್ಕೇರಿಕೆಯಾಗಿವೆ.

In eight days the number of infected people is 20
ಚಾಮರಾಜನಗರದಲ್ಲಿ ಕೊರೊನಾ ವೇಗ ಹೆಚ್ಚಿಸಿದ ಚಾಲಕರು
author img

By

Published : Jun 26, 2020, 8:04 PM IST

Updated : Jun 26, 2020, 8:24 PM IST

ಚಾಮರಾಜನಗರ : ಜಿಲ್ಲೆಯಲ್ಲಿ ಎರಡನೇ ಸೋಂಕಿತ ವ್ಯಕ್ತಿ ಕಾಣಿಸಿಕೊಂಡ 8 ದಿನದ ಒಳಗಾಗಿ ಸೋಂಕಿತರ ಸಂಖ್ಯೆ 20ಕ್ಕೇರಿದ್ದು ಗುಂಡ್ಲುಪೇಟೆ ಜಿಲ್ಲೆಯು ಕೊರೊನಾ‌ ಹಾಟ್​​ಸ್ಪಾಟ್​ ಆಗುತ್ತಿದೆ.

ಸೋಂಕಿತ 20 ಮಂದಿಯಲ್ಲಿ ಓರ್ವ ಕೆಎಸ್​ಆರ್​ಟಿಸಿ ಚಾಲಕ ಕಂ ನಿರ್ವಾಹಕ ಸೇರಿದಂತೆ ಒಟ್ಟು ಐವರು ಚಾಲಕರು ಸೋಂಕು ತಗುಲಿದ್ದು, ಈ ಐವರಿಂದಲೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ದಾಟುವ ಎಲ್ಲಾ ಆತಂಕ ಗೋಚರಿಸುತ್ತಿದೆ.

ಚಾಮರಾಜನಗರದಲ್ಲಿ ಕೊರೊನಾ ವೇಗ ಹೆಚ್ಚಿಸಿದ ಚಾಲಕರು

ಬೆಂಗಳೂರು-ಕೊಳ್ಳೇಗಾಲ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಗಂಟಲು ದ್ರವ ಪರೀಕ್ಷೆಗೆ ನೀಡಿದ ಬಳಿಕ‌ 2 ದಿನ ಕರ್ತವ್ಯ ನಿರ್ವಹಿಸಿದ್ದರು. ಜೊತೆಗೆ ಇವರೇ ಕಂಡಕ್ಟರ್ ಕೂಡ ಆಗಿರುವುದರಿಂದ ಇವರ ಸಹೋದ್ಯೋಗಿ ಹಾಗೂ ಪ್ರಯಾಣಿಕರಿಗೆ ಸೋಂಕು ರವಾನಿಸಿರುವ ಆತಂಕ ಹೆಚ್ಚಾಗಿದೆ.‌

ಇನ್ನೊಂದೆಡೆ ಗುಂಡ್ಲುಪೇಟೆ ಮಹಾದೇವಪ್ರಸಾದ್ ನಗರದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್​ ಕೂಡ ಸೋಂಕಿಗೆ ತುತ್ತಾಗಿದ್ದು ಗುಂಡ್ಲುಪೇಟೆ ಪೊಲೀಸ್​ ಠಾಣೆಯನ್ನು ಸೀಲ್​ಡೌನ್​ ಮಾಡಲಾಗಿದೆ.

ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದ ಚಾಲಕರುಗಳ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದ್ದು, ಕೊರೊನಾಗೆ ಇನ್ನೂ ಎಷ್ಟು ಮಂದಿ ತುತ್ತಾಗುವರೋ ಎನ್ನುವ ಆತಂಕ ಹೆಚ್ಚಿಸಿದೆ.

Last Updated : Jun 26, 2020, 8:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.