ಕೊಳ್ಳೇಗಾಲ: ಪಡಿತರ ಅಕ್ಕಿ ಅಕ್ರಮ ಸಾಗಾಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನಿಂದ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಆದರ್ಶ ಬಡಾವಣೆಯ ನಿವಾಸಿ ಚಾಲಕ ಕೌದಳ್ಳಿಯ ಆದಿಲ್ ಪಾಷ (50) ಬಂಧಿತ ಆರೋಪಿ. ಈತ ಸರ್ಕಾರದಿಂದ ನೀಡುವ ಪಡಿತರ ಅಕ್ಕಿಯನ್ನು ಜನರಿಂದ ಹೆಚ್ಚಿನ ಬೆಲೆಗೆ ಖರೀದಿ ಮಾಡಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾನೆ ಎಂದು ಆಹಾರ ಇಲಾಖೆಯ ಶಿರಸ್ತೇದಾರ್ ಬಿಸಿಲಯ್ಯ ಪೊಲೀಸರಿಗೆ ದೂರು ನೀಡಿದ್ದರು.
ಓದಿ: 1 ತಿಂಗಳಲ್ಲೇ 2 ಬಾರಿ LPG ಸಿಲಿಂಡರ್ ಬೆಲೆ ಹೆಚ್ಚಳ.. ಮತ್ತೆ ₹50 ಏರಿಸಿ ಜೇಬಿಗೆ ಕೊಳ್ಳಿ ಇಟ್ಟ ಸರ್ಕಾರ..
ದೂರು ಆಧರಿಸಿ ಕ್ರಮ ಕೈಗೊಂಡ ಪಿಎಸ್ಐ ಮಾದೇಗೌಡ ತಂಡ, ಪಟ್ಟಣದ ಗೀತಾ ಪ್ರೈಮರಿ ರಸ್ತೆಯಲ್ಲಿ ಮಾರುತಿ ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 367 ಕೆಜಿ ಅಕ್ಕಿ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.