ಚಾಮರಾಜನಗರ: ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಪ್ರವಾಸಿ ತಾಣವಾದ ಶಿವನಸಮುದ್ರಕ್ಕೆ ಬರುವ ಪ್ರವಾಸಿಗರು ಇಲ್ಲಿನ ತೆಪ್ಪದಲ್ಲಿ ಸುತ್ತಾಡುತ್ತಾರೆ. ಆದರೆ, ಕನಿಷ್ಠ ಸುರಕ್ಷತೆಗಳನ್ನು ತೆಗೆದುಕೊಳ್ಳದೆ ಇರುವುದು ಪ್ರವಾಸಿಗರ ಪ್ರಾಣದೆ ಜತೆ ಚೆಲ್ಲಾಟವಾಡುತ್ತಿದ್ದಾರೆ.
ಅರಣ್ಯ ಇಲಾಖೆ ಅನುಮತಿ ಇಲ್ಲದೆ, ಸುರಕ್ಷಿತ ಸಾಧನಗಳಿಲ್ಲದ ತೆಪ್ಪದಲ್ಲಿ ವೀಕೆಂಡ್ ಮೋಜು ಮಾಡುವ ಪ್ರವಾಸಿಗರಿಗೆ 100 ರೂಪಾಯಿಯಂತೆ ದರ ವಿಧಿಸುತ್ತಾರೆ.
ಅವಘಡಗಳು ಸಂಭವಿಸುವ ಮುನ್ನ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ಮಂಡಳಿ ಎಚ್ಚೆತ್ತಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.