ETV Bharat / state

ಬಂಡೀಪುರದಲ್ಲಿ ಅಕ್ರಮ ಹೋಮ್​​​ ಸ್ಟೇ, ರೆಸಾರ್ಟ್: ತನ್ನದಲ್ಲದ ತಪ್ಪಿಗೆ ಅರಣ್ಯ ಇಲಾಖೆಗೆ ಪೀಕಲಾಟ

author img

By

Published : May 22, 2020, 11:20 PM IST

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಕಂದಾಯ ಇಲಾಖೆಯ ಗಮನಕ್ಕೂ ತಾರದೇ ಕೃಷಿ ಭೂಮಿಯನ್ನು ಪರಿವರ್ತನೆ ಮಾಡದೇ,‌ ಎಕರೆಗಟ್ಟಲೇ ಪ್ರದೇಶದಲ್ಲಿ‌ ಹೋಮ್​​ ಸ್ಟೇ ನಿರ್ಮಿಸಿ ವನ್ಯಜೀವಿ ಅವಾಸಸ್ಥಾನಕ್ಕೆ ಕುತ್ತು ತಂದಿದ್ದಾರೆ.

ಬಂಡೀಪುರದಲ್ಲಿ ಅಕ್ರಮ ಹೋಮ್​​​ ಸ್ಟೇ, ರೆಸಾರ್ಟ್

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮ ಹೋಮ್​​ ಸ್ಟೇ, ರೆಸಾರ್ಟ್ ಇನ್ನಿತರ ಕಟ್ಟಡಗಳು ತಲೆ ಎತ್ತಿದ್ದು, ಕಂದಾಯ ಹಾಗೂ ಪೊಲೀಸ್ ಇಲಾಖೆ ಮೌನದಿಂದ ಅರಣ್ಯ ಇಲಾಖೆ ಪೀಕಲಾಟಕ್ಕೆ ಸಿಲುಕಿದೆ.

ಪರಿಸರ ಸೂಕ್ಷ ವಲಯದಲ್ಲಿ ವಾಸಕ್ಕೆ ಮನೆ ಕಟ್ಟ ಬೇಕಾದರೂ ಕೂಡ‌ ಎಕೊ ಕಮಿಟಿ ಅಧ್ಯಕ್ಷರಾಗಿರುವ ಪ್ರಾದೇಶಿಕ ಆಯುಕ್ತರ ಅನುಮತಿ ಪಡೆಯಬೇಕು. ಎಕೊ ಕಮಿಟಿಯಿರಲಿ ಈಗ ಅಕ್ರಮವಾಗಿ ಕಟ್ಟಡ ಕಟ್ಟಿರುವವರು ಕಂದಾಯ ಇಲಾಖೆಯ ಗಮನಕ್ಕೂ ತಾರದೇ ಕೃಷಿ ಭೂಮಿಯನ್ನು ಪರಿವರ್ತನೆಯನ್ನೂ ಮಾಡದೇ‌ ಎಕರೆಗಟ್ಟಲೇ ಪ್ರದೇಶದಲ್ಲಿ‌ ಹೋಮ್​​ ಸ್ಟೇ ನಿರ್ಮಿಸಿ ವನ್ಯಜೀವಿ ಅವಾಸಸ್ಥಾನಕ್ಕೆ ಕುತ್ತು ತಂದಿದ್ದಾರೆ.

ರಾತ್ರಿ ವೇಳೆ ಸೌಂಡ್ ಸಿಸ್ಟಂಗಳು, ದೊಡ್ಡ ದೊಡ್ಡ ಲೈಟ್​​ಗಳನ್ನು ಹಾಕಿಕೊಳ್ಳುವ ಇವರು ಪೊಲೀಸರ ಕಣ್ಣಿಗಾಗಲಿ, ಗ್ರಾ.ಪಂ ಅಧಿಕಾರಿಗಳ ಕಣ್ಣಿಗಾಗಲಿ ಬಿದ್ದಿಲ್ಲವೇ ಎಂದು ಪರಿಸರವಾದಿಗಳು ಕಿಡಿಕಾರಿದ್ದಾರೆ.‌ ಇವರ ಈ ಶೋಕಿ, ಹಣದಾಸೆ ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗಲು ಕಾರಣವಾಗಲಿದೆ. ಆನೆ, ಚಿರತೆಗಳು ಆವಾಸಸ್ಥಾನ ಬದಲಿಸಬಹುದು ಇಲ್ಲವೇ ಇವರ ಕಟ್ಟಡಗಳ ಸಮೀಪ ದಾಂಗುಡಿ ಇಡಬಹುದು ಎಂದು ಈಟಿವಿ ಭಾರತದೊಂದಿಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಮಂಗಲ, ಎಲಚೆಟ್ಟಿ, ಚಿಕ್ಕೆಲಚೆಟ್ಟಿ, ಹಂಗಳ ಹೊಸಹಳ್ಳಿ,‌‌ ಮೇಲುಕಾಮನಹಳ್ಳಿ, ಮಗುವಿನಹಳ್ಳಿ ಗ್ರಾಮಗಳಲ್ಲಿ ಒಟ್ಟು 15 ಅಕ್ರಮ ಕಟ್ಟಡಗಳು ತಲೆಎತ್ತಿದ್ದು, ಕೆಲವೆಡೆ ದೊಡ್ಡ ದೊಡ್ಡ ಸ್ವಿಮಿಂಗ್ ಫೂಲ್​​​ಗಳೇ ಇವೆ. ನೀರು ಕುಡಿಯಲು ಪರದಾಡುವ ಸ್ಥಿತಿಯಲ್ಲಿ ಇವರು ಈಜುಕೊಳ ನಿರ್ಮಿಸಿಕೊಂಡಿದ್ದಾರೆ. ಇಷ್ಟು ಸಾಲದೆಂಬಂತೆ ಅಕ್ರಮ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದ್ದು ಮತ್ತೊಂದು ವಿಪರ್ಯಾಸವಾಗಿದೆ.‌

ಸ್ಥಳೀಯರಿಂದ ಹೊರರಾಜ್ಯ, ಬೆಂಗಳೂರು, ಮೈಸೂರಿನ ಶ್ರೀಮಂತರು ಮಾಡುತ್ತಿರುವ ಅಟಾಟೋಪದಿಂದ ವನ್ಯಜೀವಿ ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿದೆ.‌ ಈ ಕುರಿತು, ಜಿಪಂ ಸಿಇಒ ಅವರಿಗೆ ಪತ್ರ ಬರೆದಿದ್ದು, ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿಬಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಇಲಾಖೆ ಹಾಗೂ ಪೊಲೀಸರು ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಮಾತ್ರ ಅಕ್ರಮಗಳಿಗೆ ಬ್ರೇಕ್ ಹಾಕಬಹುದಾಗಿದ್ದು, ಇಲ್ಲವಾದಲ್ಲಿ ಬಂಡೀಪುರದಿಂದ ಒಂದು ದಿನ ಹುಲಿ ಸಂತತಿಯೇ ನಾಪತ್ತೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.