ಕೊಳ್ಳೇಗಾಲ : ದೇಶಾದ್ಯಂತ ಕೊರೊನಾ ಕರಿನೆರಳು ವ್ಯಾಪಿಸುತ್ತಿದೆ. ಈ ಸಂದಿಗ್ಧ ಸಮಯದಲ್ಲೂ ಪ್ರಾಣದ ಹಂಗು ತೊರೆದು ದಿನ ಬೆಳಗಾದರೆ ಮನೆ ಮನೆಗೆ ಪತ್ರಿಕೆ ಹಂಚುವ ಶ್ರಮಿಕರಿಗೆ ಹೆಚ್ ಕೆ ಟ್ರಸ್ಟ್ ನೆರವಾಗಿದೆ.
ಸರ್ಕಾರ ಕೊರೊನಾ ಸೋಂಕು ತಡೆಗೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಅಗತ್ಯ ಸೂಚನೆಗಳನ್ನು ಸೂಚಿಸಿದೆ. ಮನೆಯಿಂದ ಹೊರಬಾರದಂತೆ ಆದೇಶಿಸಿದೆ. ಲಾಕ್‌ಡೌನ್‌ನಿಂ ದಾಗಿ ದಿನ ನಿತ್ಯ ಕೂಲಿ ನಂಬಿ ಬದುಕುತ್ತಿದ್ದ ಜನರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಒಂದು ಕಡೆ ಸರ್ಕಾರವೂ ಸಹಾಯ ಹಸ್ತಚಾಚುತ್ತಿದೆ. ನಮ್ಮ ಟ್ರಸ್ಟ್‌ನಿಂದ ನಮ್ಮ ಕೈಲಾಗುವ ಸಹಾಯ ಮಾಡುತ್ತಿದ್ದೇವೆ. ಮನೆ ಮನೆಗೆ ದಿನ ಬಳಕೆಯ ಪತ್ರಿಕೆಯನ್ನೂ ಹಂಚುವ 30 ಯುವಕರಿಗೆ ದಿನ ಬಳಕೆಯ ಆಹಾರ ಪದಾರ್ಥಗಳ ಕಿಟ್‌ನ ಕೊಳ್ಳೇಗಾಲ ಹೆಚ್ ಕೆ ಟ್ರಸ್ಟ್ ವಿತರಿಸುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.