ETV Bharat / state

ಚಾಮರಾಜನಗರದಲ್ಲಿ ಮಂಜಿನ ಚಾದರ..‌ ಚುಮುಚುಮು ಚಳಿ ಕಾಡಲ್ಲಿ ಹಸಿರಿನ ಕಚಗುಳಿ

ಚಾಮರಾಜನಗರದಲ್ಲಿ ಚಳಿ ಹೆಚ್ಚಾಗಿದ್ದು, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಲು ಮಂಜು ಆವರಿಸಿಕೊಂಡಿದ್ದು, ಪ್ರವಾಸಿಗರನ್ನ ಆಕರ್ಷಿಸುತ್ತಿದೆ.

kn_cnr_
ಚಾಮರಾಜನಗರದಲ್ಲಿ ಹೆಚ್ಚಿದ ಚಳಿ
author img

By

Published : Nov 29, 2022, 3:32 PM IST

ಚಾಮರಾಜನಗರ: ಕಾಡಿನ ಐಸಿರಿಯಿಂದ ಕಂಗೊಳಿಸುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಈಗ ಎಲ್ಲಿ ನೋಡಿದರಲ್ಲಿ ಮಂಜು ಮಯ. ಜಿಲ್ಲಾದ್ಯಂತ ಚಳಿ ಹೆಚ್ಚಾಗಿದ್ದು, ಬೆಳಗ್ಗೆ 8 - 9ಗಂಟೆಯಾದರೂ ಮಂಜು ಮುಸುಕಿದ ವಾತಾವರಣವೇ ಕಾಣಸಿಗಲಿದೆ.

ಮುಂಜಾನೆ ಮಂಜಿನ ಸೊಬಗು ಮೇಳೈಸಿದ್ದು, ಬೆಳಗ್ಗೆ ಒಂಬತ್ತಾದರೂ ದಟ್ಟನೆಯ ಮಂಜು ಚಳಿಯ ಕಚಗುಳಿ ಇಡುತ್ತಿದೆ. ಅರಣ್ಯ ಪ್ರದೇಶದಲ್ಲಂತೂ ಸ್ವರ್ಗವೇ ಧರೆಗಿಳಿದಂತೆ ಪ್ರಕೃತಿಯ ಚೆಲುವು ಕಂಗೊಳಿಸುತ್ತಿದೆ. ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಂತೂ ಹಸಿರಿಗೆ ಮಂಜಿನ ಚಾದರ ಹೊದ್ದಂತೆ ಕಾಣಿಸುತ್ತಿದೆ.

ಚಾಮರಾಜನಗರದಲ್ಲಿ ಹೆಚ್ಚಿದ ಚಳಿ

ಬೆಳಗ್ಗೆ 9 ಆದರೂ ಮಂಜಿನ ತೆರೆ ಮರೆಯಾಗದಿರುವುದರಿಂದ ಲೈಟ್​ಗಳನ್ನು ಹಾಕಿಕೊಂಡೇ ಸವಾರರು ವಾಹನ ಚಲಾಯಿಸುತ್ತಿದ್ದಾರೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದಟ್ಟನೆಯ ಮುಂಜಾನೆ ಮಂಜಿನ ಅನುಭವವನ್ನು ಜನರು ಪಡೆಯುತ್ತಿದ್ದಾರೆ. ಜಿಲ್ಲೆಗೆ ಆಗಮಿಸಿರುವ ಪ್ರವಾಸಿಗರಿಗೆ ಮಂಜು ಹಾಗೂ ಹಸಿರು ಮತ್ತಷ್ಟು ಖುಷಿ ನೀಡುತ್ತಿದೆ.

ಇದನ್ನೂ ಓದಿ: ವಿಡಿಯೋ: ಮಂಜು ಹೊದ್ದು ಮಲಗಿದೆ ಶಿಮ್ಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.