ETV Bharat / state

ಕೋವಿಡ್ ಆತಂಕ: ಚಾಮರಾಜನಗರದ ಅಂತಾರಾಜ್ಯ ಗಡಿಗಳಲ್ಲಿ ತೀವ್ರ ಕಟ್ಟೆಚ್ಚರ

author img

By

Published : Jul 31, 2021, 12:03 PM IST

ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಚಾಮರಾಜನಗರದ ಅಂತಾರಾಜ್ಯ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

High alert in inter state Border
ಗಡಿಯಲ್ಲಿ ಕಟ್ಟೆಚ್ಚರ

ಚಾಮರಾಜನಗರ: ಕೇರಳ ಹಾಗೂ ತಮಿಳುನಾಡಿನಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಆರು ಅಂತಾರಾಜ್ಯ ಚೆಕ್‌ ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ, ತಮಿಳುನಾಡಿನ ಗಡಿಯಾದ ಕೆಕ್ಕನಹಳ್ಳದಲ್ಲಿ ನಿಗಾ ಇಡಲಾಗಿದ್ದು, ಕೋವಿಡ್‌ ನೆಗೆಟಿವ್‌ ವರದಿ ಇದ್ದವರು ಅಥವಾ ಒಂದು ಡೋಸ್​ ಆದರೂ ಕೋವಿಡ್‌ ಲಸಿಕೆ ಪಡೆದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗ್ತಿದೆ. ಈ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಓದಿ : ಕೋವಿಡ್ ಮೂರನೇ ಅಲೆ ಭೀತಿ: ಬೆಳಗಾವಿ ಚೆಕ್‌ಪೋಸ್ಟ್ ಬಳಿ ಕಟ್ಟೆಚ್ಚರ

ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿರುವ ಹನೂರು ತಾಲೂಕಿನ ಪಾಲಾರ್‌, ನಾಲರೋಡು ಹಾಗೂ ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್‌ಪೋಸ್ಟ್‌ನಲ್ಲಿ ಪ್ರಯಾಣಿಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲು ನಿರ್ಧರಿಸಲಾಗಿದೆ. ಈ ಗಡಿಗಳಲ್ಲಿ ಇದುವರೆಗೆ ಯಾವುದೇ ತಪಾಸಣೆ ಮಾಡುತ್ತಿರಲಿಲ್ಲ.

ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದರೂ ಜಿಲ್ಲೆಯ ಚೆಕ್​ ಪೋಸ್ಟ್​ಗಳನ್ನು ಮುಚ್ಚಿರಲಿಲ್ಲ. ಇದೀಗ ಕೇರಳದಲ್ಲಿ ಸೋಂಕು ಉಲ್ಬಣಗೊಂಡ ಹಿನ್ನೆಲೆ ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದೆ. ಬಸ್​ ಸೇರಿದಂತೆ ಎಲ್ಲ ರೀತಿಯ ವಾಹನಗಳಲ್ಲಿ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ಮಾಡಿಯೇ ಒಳ ಬಿಡಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.