ಚಾಮರಾಜನಗರ: ಸುವರ್ಣಾವತಿ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಯಳಂದೂರು ಪಟ್ಟಣ ಹಾಗೂ ತಾಲೂಕಿನ ಹಲವು ಪ್ರದೇಶಗಳು ಜಲಾವೃತವಾಗಿದೆ. ಇಲ್ಲಿನ ರಾಜಕಾಲುವೆ, ಕಚೇರಿಗಳು, ರಸ್ತೆಗಳು ಜಲಾವೃತವಾಗಿದ್ದು, ಜನರು ಪರದಾಡುವಂತಾಗಿದೆ. ಭಾರಿ ಮಳೆಗೆ ಅಗರದಿಂದ ಉತ್ತಂಬಳ್ಳಿ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭಾರಿ ಮಳೆಗೆ ಯಳಂದೂರಿನಲ್ಲಿರುವ ವಲಯ ಅರಣ್ಯ ಇಲಾಖೆ, ಚೆಸ್ಕಾಂ ಇಲಾಖೆ, ಪದವಿ ಪೂರ್ವ ಕಾಲೇಜು, ಮಾರಮ್ಮನ ದೇವಾಲಯ, ಪೊಲೀಸ್ ವಸತಿ ಗೃಹ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸಿ ಮಂದಿರ ಹಾಗೂ ಇಲ್ಲಿನ ವಸತಿಗೃಹ ಸಂಪೂರ್ಣ ಜಲಾವೃತವಾಗಿದೆ.
ಮಾಂಬಳ್ಳಿ ಪೊಲೀಸ್ ಠಾಣೆ ಮುಳುಗಡೆ - ತೆಪ್ಪದ ಮೂಲಕ ಸಿಬ್ಬಂದಿ ಹೊರಕ್ಕೆ: ಭಾರಿ ಮಳೆಗೆ ಮಾಂಬಳ್ಳಿ ಪೊಲೀಸ್ ಠಾಣೆ ಸಂಪೂರ್ಣ ಮುಳುಗಡೆಯಾಗಿದ್ದು, ಪಿಎಸ್ಐ ಸೇರಿದಂತೆ ಠಾಣಾ ಸಿಬ್ಬಂದಿ ತೆಪ್ಪದ ಮೂಲಕ ಹೊರತರಲಾಗಿದೆ. ಇನ್ನು, ಠಾಣೆಯಲ್ಲಿಟ್ಟಿದ್ದ ಕಡತಗಳನ್ನು ಮೊದಲನೇ ಮಹಡಿಯಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಪ್ರವಾಹ.. ಇಬ್ಬರು ಪೊಲೀಸರು ಹಳ್ಳದಲ್ಲಿ ಕೊಚ್ಚಿಹೋಗಿರುವ ಶಂಕೆ!