ETV Bharat / state

ಸಿದ್ದರಾಮಯ್ಯ ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಬದಲಿಸುವುದು ಸರಿಯಲ್ಲ: ಸಚಿವ ಸುಧಾಕರ್

ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ವಿಚಾರ- ಜನತೆಗೆ ಮಾಜಿ ಸಿಎಂ ಏನು ಸಂದೇಶ ಕೊಡುತ್ತಿದ್ದಾರೆ- ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಪ್ರಶ್ನೆ

health-minister-dr-k-sudhakar-statement-against-siddaramaih
ಚುನಾವಣೆಯಿಂದ ಚುನಾವಣೆಗೆ ಸಿದ್ದು ಕ್ಷೇತ್ರ ಬದಲಿಸುವುದು ಸರಿಯಲ್ಲ: ಆರೋಗ್ಯ ಸಚಿವ ಸುಧಾಕರ್
author img

By

Published : Jul 6, 2022, 7:55 PM IST

ಚಾಮರಾಜನಗರ: ಸಿದ್ದರಾಮಯ್ಯನವರು ರಾಜ್ಯದ ಸಿಎಂ ಆಗಿದ್ದವರು, ಅವರು ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಬದಲಿಸುವುದು ಸರಿಯಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಮಾತನಾಡಿದ ಅವರು, ಸಿಎಂ ಆಗಿದ್ದ ಅವರನ್ನು 224 ಕ್ಷೇತ್ರದಲ್ಲೂ ಕರೆಯೋದು ಸಾಮಾನ್ಯ. ಅವರ ಕ್ಷೇತ್ರದ ಜನ ಕೈ ಬಿಟ್ಟರೂ ಬಾದಾಮಿ ಕ್ಷೇತ್ರದ ಜನರು ಕೈ ಹಿಡಿದರು. ಈಗ ಬಾದಾಮಿಯಿಂದಲೂ ಬೇರೆ ಕಡೆ ಹೋಗ್ತೀನಿ ಎಂದರೆ ಅವರು ಈ ಜನರಿಗೆ ಏನು ಸಂದೇಶ ಕೊಡುತ್ತಿದ್ದಾರೆ ಎಂದು ಕೇಳಿದರು.

ಸಿದ್ದರಾಮಯ್ಯನವರು ದೊಡ್ಡನಾಯಕರು ನಾಯಕರು. ಅಪಾರ ರಾಜಕೀಯ ಅನುಭವವುಳ್ಳವರು. ಇಂತವರು ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಬದಲಿಸುವುದು ಸರಿಯಲ್ಲ ಎಂದು ಅಭಿಪ್ರಾಯಟ್ಟರು.

ಚುನಾವಣೆಯಿಂದ ಚುನಾವಣೆಗೆ ಸಿದ್ದರಾಮಯ್ಯ ಕ್ಷೇತ್ರ ಬದಲಿಸುವುದು ಸರಿಯಲ್ಲ: ಆರೋಗ್ಯ ಸಚಿವ ಸುಧಾಕರ್

ಪಿಎಸ್ಐ ಅಕ್ರಮ ನೇಮಕಾತಿ ವಿಚಾರದಲ್ಲಿ ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್​, ಅನೇಕ ವರ್ಷಗಳಿಂದ ನೋಡಿದ್ದೇವೆ. ಈ ರೀತಿ ಗಂಭೀರ ತನಿಖೆ ಯಾವತ್ತೂ ಆಗಿರಲಿಲ್ಲ. ಹಿರಿಯ ಅಧಿಕಾರಿಗಳನ್ನು ಬಂಧಿಸಿರುವ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ. ಈ ವಿಚಾರವಾಗಿ ಮಾತನಾಡಲು ಕಾಂಗ್ರೆಸ್​ವರಿಗೆ ನೈತಿಕತೆ ಇಲ್ಲ. ಎಲ್ಲ ತನಿಖೆಯನ್ನು ಮುಚ್ಚಿ ಹಾಕಿದ್ದು ಕಾಂಗ್ರೆಸ್ ಸರ್ಕಾರ. ಕೆಂಪಣ್ಣ ಆಯೋಗ, ರಿಡೋ ಏನಾಯ್ತು.? ಈ ಬಗ್ಗೆ ಮಾತನಾಡದೆ ಇದ್ದರೆ‌ ಕಾಂಗ್ರೆಸ್ ನವರಿಗೆ ಒಳ್ಳೆಯದು ಎಂದು ಹೇಳಿದರು.

ಕೋವಿಡ್ ನಂತರದ ಆರೋಗ್ಯ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕೆಲವು ಕಡೆಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಂಡುಬಂದಿದೆ. ಅದು ಕೋವಿಡ್ ನಿಂದಲೇ ಎಂದು ಹೇಳಲಾಗುವುದಿಲ್ಲ. ಈ ಬಗ್ಗೆ ಅಧ್ಯಯನ ನಡೆಯಬೇಕಿದೆ. ಕೋವಿಡ್ ಬಂದು ಎರಡು ವರ್ಷವಾಗಿದೆ. ಕೆಲವರಿಗೆ ಆಯಾಸ, ಮರೆವು, ಹೃದಯ ಸಮಸ್ಯೆ, ರಕ್ತನಾಳದ ಸಮಸ್ಯೆ ಈ ರೀತಿಯ ಹಲವು ಸಮಸ್ಯೆಗಳು ಕಂಡು ಬಂದಿವೆ. ನೇರವಾಗಿ ಕೋವಿಡ್ ನಂತರ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಅಧ್ಯಯನದ ಅಂತಿಮ ವರದಿ ಬಂದ ನಂತರ ಗೊತ್ತಾಗುತ್ತದೆ ಎಂದು ತಿಳಿಸಿದರು.

ಓದಿ : ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಂಗಳೂರಿಗೆ ಬಂದಿಳಿದ ಸೋನು ಸೂದ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.