ಚಾಮರಾಜನಗರ: ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಕಾಡಿನ ಮಕ್ಕಳನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಿಲು ಆರೋಗ್ಯ ಇಲಾಖೆ ಸಿಬ್ಬಂದಿ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳುವಂತೆ ಗ್ರಾಮಕ್ಕೆ ತೆರಳಿದಾಗಲೆಲ್ಲ ಬಾಗಿಲು ಬಂದ್ ಮಾಡಿ ಓಡಿ ಹೋಗುವುದು, ತಾವು ಆರೋಗ್ಯವಾಗಿದ್ದು ಯಾವ ಲಸಿಕೆಯೂ ಬೇಡ ಎಂದು ಜಗಳ ತೆಗೆದು ಹಿಂದಕ್ಕೆ ಕಳುಹಿಸುವುದು, ಕೆಲವೊಮ್ಮೆ ತಮ್ಮ ಮನೆಗಳ ಬಳಿಯೇ ಬಿಟ್ಟುಕೊಳ್ಳಲು ತಯಾರಿಲ್ಲದ ಪ್ರಸಂಗಗಳು ನಡೆದಿವೆ. ಹೀಗಾದ ಮೇಲೆ ಗೊರುಕುನ ನೃತ್ಯದ ಮೂಲಕ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ವೈದ್ಯಾಧಿಕಾರಿಗಳು ನೃತ್ಯ ಮಾಡಿ ಮನವೊಲಿಸುವಲ್ಲಿ ಸ್ವಲ್ಪ ಯಶಸ್ಸು ಕಂಡಿದ್ದಾರೆ.
ಒಟ್ಟು ಗಿರಿಜನರಲ್ಲಿ 45 ವರ್ಷ ಮೇಲ್ಪಟ್ಟ 8 ಸಾವಿರ ಮಂದಿಗೆ ಲಸಿಕೆಯ ಗುರಿ ಹೊಂದಿದ್ದ ಆರೋಗ್ಯ ಇಲಾಖೆ ಈಗ 2,500 ಮಂದಿಗೆ ಲಸಿಕೆ ನೀಡಿದೆ. ಗೊರುಕನ ನೃತ್ಯದ ಬಳಿಕ ಅವರಲ್ಲಿ ಧೈರ್ಯ ಬಂದು ಲಸಿಕೆಯ ಉದ್ದೇಶ ತಿಳಿಸಿದ ಬಳಿಕ ಈಗ ಒಬ್ಬೊಬ್ಬರಾಗಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಇದು ಅಧಿಕಾರಿಗಳು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ: ರಾಜ್ಯಗಳಿಗೆ ಪೂರೈಸುವ ಕೋವಿಶೀಲ್ಡ್ ಲಸಿಕೆ ದರ ಇಳಿಕೆ: ಸೀರಮ್ ಸಿಇಒ ಘೋಷಣೆ