ಚಾಮರಾಜನಗರ: ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಬಿಆರ್ಟಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಹಸಿರು ಹೊದಿಕೆ ಹಾಸಿದಂತೆ ಕಾಡು ಕಾಣಿಸುತ್ತಿದೆ. ಆದರೆ, ಈ ಸೌಂದರ್ಯ ಕಣ್ತುಂಬಿಕೊಳ್ಳಲು ಕೊರೊನಾ ಅಡ್ಡಿಯಾಗಿದೆ.
ಕಾಡಿನಲ್ಲಿ ಸತತ ಮಳೆಯಿಂದಾಗಿ ಹುಲ್ಲು ಬೆಳೆಯುತ್ತಿದ್ದು, ಗಿಡ - ಮರಗಳು ಚಿಗುರಿ ಹಸಿರ ಐಸಿರಿಯೇ ರೂಪುಗೊಂಡಿದೆ. ಪ್ರವಾಸಿ ತಾಣ, ವನ್ಯಜೀವಿ ಸಫಾರಿಗಳಿಗೆ ನಿರ್ಬಂಧ ಇರುವುದರಿಂದ ಕಾಡಿನ ಚೆಲುವು ಪ್ರಕೃತಿ ಪ್ರಿಯರಿಗೆ ದೂರದ ಬೆಟ್ಟವಾಗಿದೆ.
ಕೊರೊನಾ ಕಾಲದಲ್ಲೂ ಕಿಡಿಗೇಡಿಗಳು ಹಾಕುವ ಬೆಂಕಿಯಿಂದ ಕಾಡು ರಕ್ಷಿಸಿದ್ದ ಕಾಡಿನ ಯೋಧರು ಈಗ ನಿತ್ಯ ಹಸಿರ ಸಿರಿ ಕಂಡು ಮುದಗೊಳ್ಳುತ್ತಿದ್ದಾರೆ. ಸತತ ಮಳೆಯಿಂದಾಗಿ ಪ್ರಾಣಿಗಳು ಆಹಾರ, ನೀರು ಅರಸಿ ನಾಡಿನತ್ತ ಧಾವಿಸುವುದು ಸದ್ಯ ನಿಂತಿದೆ.
ಓದಿ:ಹಂಪಿಯ ಗೈಡ್ಗಳಿಗೆ ಸುಧಾಮೂರ್ತಿ ಧನ ಸಹಾಯ: ತಲಾ 10 ಸಾವಿರ ರೂ. ನೆರವು