ETV Bharat / state

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಸಾರಿಗೆ ಬಸ್ : ಮಹಿಳೆ ಭುಜದ ಮೂಳೆ ಮುರಿತ - ಕೊಳ್ಳೇಗಾಲದಲ್ಲಿ ಹಳ್ಳಕ್ಕೆ ಉರುಳಿದ ಸಾರಿಗೆ ಬಸ್​

ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ರಾಧಮ್ಮನನ್ನು ಕೊಳ್ಳೇಗಾಲ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ..

Govt bus fell down in brooklet at Kollegal
ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಸಾರಿಗೆ ಬಸ್
author img

By

Published : Oct 17, 2021, 8:32 PM IST

ಕೊಳ್ಳೇಗಾಲ : ಚಾಲಕನ‌ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಹಳ್ಳಕ್ಕೆ ಉರುಳಿರುವ ಘಟನೆ ತಾಲೂಕಿನ ಚಿಕ್ಕಿಂದುವಾಡಿ ರಸ್ತೆಯ ಬಳಿ ನಡೆದಿದೆ.

ಪಟ್ಟಣದಿಂದ ರಾಮಾಪುರ ಮಾರ್ಗವಾಗಿ ಹೋಗುತ್ತಿದ್ದ ಸಾರಿಗೆ ಬಸ್ ಚಿಕ್ಕಿಂದುವಾಡಿ ಸಮೀಪದ ರಸ್ತೆಯಲ್ಲಿ ಆಯತಪ್ಪಿ ಹಳ್ಳಕ್ಕೆ ಉರುಳಿದೆ.

ಬಸ್​​​​ನಲ್ಲಿ 25ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಮಧುವನಹಳ್ಳಿ ಗ್ರಾಮದಿಂದ ಕಣ್ಣೂರಿಗೆ ಪ್ರಯಾಣಿಸುತ್ತಿದ್ದ ರಾಧಮ್ಮ ಎಂಬುವರಿಗೆ ಭುಜದ ಮೂಳೆ ಮುರಿದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ರಾಧಮ್ಮನನ್ನು ಕೊಳ್ಳೇಗಾಲ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.